For Quick Alerts
  ALLOW NOTIFICATIONS  
  For Daily Alerts

  ಕಾಂತಾರ ಬಿಡುಗಡೆಗೆ ಒಂದು ವಾರ ಬಾಕಿ; ಚಿತ್ರದ ರನ್ ಟೈಮ್ ಎಷ್ಟು ಗಂಟೆ?

  |

  ರಿಷಬ್ ಶೆಟ್ಟಿ ನಿರ್ದೇಶನದ ನಾಲ್ಕನೇ ಸಿನಿಮಾ ಕಾಂತಾರ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಚಿತ್ರ ಇದೇ ತಿಂಗಳ 30ರಂದು ಬಿಡುಗಡೆಯಾಗಲಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಇಲ್ಲಿಯವರೆಗೂ ತೆರೆಕಂಡಿರುವ ಆರೂ ಚಿತ್ರಗಳು ಪುನೀತ್ ಹಾಗೂ ಯಶ್ ಅಭಿನಯದ ಚಿತ್ರಗಳಾಗಿದ್ದು, ಇದೇ ಮೊದಲ ಬಾರಿಗೆ ಅಪ್ಪು, ಯಶ್ ತಾರಾಗಣದಲ್ಲಿ ಇಲ್ಲದ ಹೊಂಬಾಳೆ ಫಿಲ್ಮ್ಸ್‌ನ ಚಿತ್ರವೊಂದು ತೆರೆಗೆ ಬರುತ್ತಿದೆ.

  ಇನ್ನು ಈ ಚಿತ್ರ ನಮ್ಮ ಮಣ್ಣಿನ ಕತೆಯನ್ನು ಹೇಳಲಿದ್ದು, ಟ್ರೈಲರ್ ಹಾಗೂ ಹಾಡುಗಳು ಈಗಾಗಲೇ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಕೊನೆಯದಾಗಿ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು: ಕೊಡುಗೆ ರಾಮಣ್ಣ ರೈ' ಚಿತ್ರವನ್ನು ನಿರ್ದೇಶಿಸಿ ಅತ್ಯುತ್ತಮ ಮಕ್ಕಳ ಚಿತ್ರ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ರಿಷಬ್ ಶೆಟ್ಟಿ ಈ ಚಿತ್ರದ ಮೂಲಕವೂ ಪ್ರೇಕ್ಷಕರ ಮನ ಗೆಲ್ಲುವ ನಿರೀಕ್ಷೆಯಿದೆ.

  ಸಾವಿನಲ್ಲೂ ಸಾರ್ಥಕತೆ: ತಂಗಿ ಮೃತದೇಹದ ಮುಂದೆ 'ಗೊಂಬೆ ಹೇಳುತೈತೆ' ಹಾಡಿ ಕಣ್ಣೀರಿಟ್ಟ ಅಣ್ಣಸಾವಿನಲ್ಲೂ ಸಾರ್ಥಕತೆ: ತಂಗಿ ಮೃತದೇಹದ ಮುಂದೆ 'ಗೊಂಬೆ ಹೇಳುತೈತೆ' ಹಾಡಿ ಕಣ್ಣೀರಿಟ್ಟ ಅಣ್ಣ

  ಚಿತ್ರ ನಿನ್ನೆಯಷ್ಟೇ ( ಸೆಪ್ಟೆಂಬರ್ 21 ) ಸೆನ್ಸಾರ್ ಆಗಿದ್ದು, ಯಾವುದೇ ಕಟ್ ಹಾಗೂ ಮ್ಯೂಟ್ ಇಲ್ಲದೇ ಯು/ಎ ಸರ್ಟಿಫಿಕೇಟ್ ಪಡೆದಿದೆ. ಇನ್ನು ಚಿತ್ರತಂಡ ಇಂದು ಚಿತ್ರದ ರನ್ ಟೈಮ್ 2 ಗಂಟೆ 29 ನಿಮಿಷ 58 ಸೆಕೆಂಡುಗಳು ಇರಲಿದೆ ಎಂಬುದನ್ನು ಪೋಸ್ಟರ್‌ವೊಂದರ ಮೂಲಕ ಬಹಿರಂಗಪಡಿಸಿದೆ. ಹಾಗೂ ಇಂದು ಚಿತ್ರದ ಪ್ರಥಮ ಮೇಕಿಂಗ್ ವಿಡಿಯೋ ಕೂಡ ಬಿಡುಗಡೆಯಾಗಿದ್ದು, ಇದರಲ್ಲಿ ಕಂಬಳದ ದೃಶ್ಯವನ್ನು ಎಷ್ಟು ಕಷ್ಟಪಟ್ಟು ಚಿತ್ರೀಕರಿಸಲಾಗಿದೆ ಎಂಬುದನ್ನು ತೋರಿಸಲಾಗಿದೆ.

  ಚಿತ್ರದಲ್ಲಿನ ಭೂತ ಕೋಲ ದೃಶ್ಯಗಳಿಗೆ ಗರುಡ ಗಮನ ವೃಷಭ ವಾಹನ ಖ್ಯಾತಿಯ ರಾಜ್ ಬಿ ಶೆಟ್ಟಿ ನಿರ್ದೇಶನ ಮಾಡಿ ರಿಷಬ್ ಶೆಟ್ಟಿಗೆ ಸಹಾಯ ಮಾಡಿದ್ದಾರೆ. ಹಾಗೂ ಈ ಚಿತ್ರದ ಕತೆಯನ್ನು ರಿಷಬ್ ಶೆಟ್ಟಿ ಪುನೀತ್ ರಾಜ್‌ಕುಮಾರ್ ಅವರಿಗೂ ಹೇಳಿದ್ದೆ ಮತ್ತು ಅವರೂ ಕತೆಯನ್ನು ಇಷ್ಟಪಟ್ಟಿದ್ದರು, ಆದರೆ ಡೇಟ್ ಸಮಸ್ಯೆಯಾದ ಕಾರಣ ಅಪ್ಪು ಅವರು ಚಿತ್ರದಲ್ಲಿ ಅಭಿನಯಿಸಲಾಗಲಿಲ್ಲ ಎಂಬುದನ್ನು ಬಿಚ್ಚಿಟ್ಟಿದ್ದಾರೆ.

  English summary
  Rishab Shetty starrer Kantara movie runtime revealed

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X