Just In
Don't Miss!
- News
ಮಾಜಿ ಸಚಿವ ವಿನಯ್ ಕುಲಕರ್ಣಿ ಸಹೋದರನ ಕಾರು ಅಪಘಾತ: ಇಬ್ಬರು ಸಾವು
- Automobiles
ನೈಟ್ ಕರ್ಫ್ಯೂ: 60ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದ ಮಂಗಳೂರು ಪೊಲೀಸರು
- Sports
ಐಪಿಎಲ್: ರಾಜಸ್ಥಾನ್ vs ಪಂಜಾಬ್, ಪ್ಲೇಯಿಂಗ್ XI, Live ಅಪ್ಡೇಟ್ಸ್
- Finance
ಅದಾನಿ ಗ್ರೂಪ್ನೊಂದಿಗೆ ಫ್ಲಿಪ್ಕಾರ್ಟ್ ಒಪ್ಪಂದ: 2,500 ಉದ್ಯೋಗ ಸೃಷ್ಟಿ
- Lifestyle
ನಿಮ್ಮ ಮಗುವಿಗೆ ಆರೋಗ್ಯ ಆಹಾರ ತಿನ್ನಿಸಲು ಇಲ್ಲವೆ ಟ್ರಿಕ್ ಗಳು
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡಾರ್ಲಿಂಗ್ ಕೃಷ್ಣ ನಟನೆಯ 'Shrikrishnagmail.com' ಗೆ ಲಾಗಿನ್‌ಆದ ಸ್ಟಾರ್‌ನಟ
ಸ್ಯಾಂಡಲ್ ವುಡ್‌ನ ಡಾರ್ಲಿಂಗ್ ಕೃಷ್ಣ ಸದ್ಯ ಶುಗರ್ ಫ್ಯಾಕ್ಟರಿ ಸಿನಿಮಾದಲ್ಲಿ ನಿರತರಾಗಿದ್ದಾರೆ. ಮದುವೆ ಬಳಿಕ ಶುಗರ್ ಫ್ಯಾಕ್ಟರಿ ಸೇರಿದ ಕೃಷ್ಣ ಇದೀಗ ಗೋವಾದಲ್ಲಿ ಬೀಡುಬಿಟ್ಟಿದ್ದಾರೆ. ಗೋವಾ ಚಿತ್ರೀಕರಣ ನಡುವೆಯೂ ಕೃಷ್ಣ ನಟನೆಯ ಮತ್ತೊಂದು ನಿರೀಕ್ಷೆಯ ಸಿನಿಮಾ 'Shrikrishna@gmail.com' ಚಿತ್ರ ಸದ್ದು ಮಾಡುತ್ತಿದೆ.
ಸಾಲು ಸಾಲು ಸಿನಿಮಾಗಳಲ್ಲಿ ನಿರತರಾಗಿರುವ ಕೃಷ್ಣ ಸದ್ಯದಲ್ಲೇ Shrikrishna@gmail.com ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ. ನಾಗಶೇಖರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ ಇದಾಗಿದ್ದು, ಇದೇ ತಿಂಗಳಿಂದ ಚಿತ್ರೀಕರಣಕ್ಕೆ ಹೊರಡಲು ಸಿನಿಮಾತಂಡ ನಿರ್ಧರಿಸಿದೆ. ಅದಕ್ಕೂ ಮೊಲು ಚಿತ್ರದ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ಹೊರಬಿದ್ದಿದೆ.
ಗೋವಾದಲ್ಲಿ 'ರಾಬರ್ಟ್' ಸುಂದರಿ ಜೊತೆ ಡಾರ್ಲಿಂಗ್ ಕೃಷ್ಣ ರೊಮ್ಯಾನ್ಸ್
ಅಂದಹಾಗೆ ಸದ್ಯ ಚಿತ್ರದಿಂದ ಬಂದ ಮಾಹಿತಿ ಡಾರ್ಲಿಂಗ್ ಕೃಷ್ಣ ಸಿನಿಮಾದಲ್ಲಿ ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ನಟ ರಿಷಬ್ ಶೆಟ್ಟಿ ಕಣಿಸಿಕೊಳ್ಳುತ್ತಿದ್ದಾರೆ. ಪಾತ್ರದ ಬಗ್ಗೆ ರಿವೀಲ್ ಮಾಡದ ಸಿನಿಮಾತಂಡ ಸದ್ಯ ರಿಷಬ್ ಎಂಟ್ರಿಯ ಬಗ್ಗೆ ಮಾತ್ರ ಬಹಿರಂಗ ಪಡಿಸಿ ಅಚ್ಚರಿ ಮೂಡಿಸಿದೆ.
ಅಂದಹಾಗೆ ಚಿತ್ರದಲ್ಲಿ ಕೃಷ್ಣಗೆ ಜೋಡಿಯಾಗಿ ಜಾಕಿ ಖ್ಯಾತಿಯ ಭಾವನ ನಟಿಸುತ್ತಿದ್ದಾರೆ. ಟೈಟಲ್ ಮೂಲಕವೇ ಕುತೂಹಲ ಮೂಡಿಸಿರುವ ಈ ಸಿನಿಮಾದ ಬಗ್ಗೆ ನಿರ್ದೇಶಕ ನಾಗಶೇಖರ್ ಹೆಚ್ಚಿನ ಮಾಹಿತಿ ರಿವೀಲ್ ಮಾಡಿಲ್ಲ. ನಾಗಶೇಖರ್ ಸದ್ಯ ಲವ್ ಮಾಕ್ ಟೇಲ್ ತೆಲುಗು ರಿಮೇಕ್ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದರು.
ತೆಲುಗು ಸಿನಿಮಾ ಮುಗಿಸುತ್ತಿದ್ದಂತೆ ಕನ್ನಡದ ಕಡೆ ಬಂದಿದ್ದಾರೆ. ಏಪ್ರಿಲ್ 15ರಿಂದ Shrikrishna@gmail.com ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಲಿರುವ ತಂಡ ಬಳಿಕ ಹೆಚ್ಚಿನ ಮಾಹಿತಿ ಬಹಿರಂಗ ಪಡಿಸುವ ಸಾಧ್ಯತೆ ಇದೆ. ಇನ್ನು ರಿಷಬ್ ಶೆಟ್ಟಿ ಸಿನಿಮಾ ವಿಚಾರಕ್ಕೆ ಬರುವುದಾದರೆ ಇತ್ತೀಚಿಗಷ್ಟೆ ಹೀರೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸದ್ಯ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದ ಕೊನೆಯ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಹಾಡಿನ ಚಿತ್ರೀಕರಣ ಒಂದು ಬಾಕಿಯುಳಿಸಿಕೊಂಡಿದ್ದಾರೆ. ಇದಲ್ಲದೆ ಸಾಕಷ್ಟು ಸಿನಿಮಾ ರಿಷಬ್ ಕೈಯಲ್ಲಿದೆ.