For Quick Alerts
  ALLOW NOTIFICATIONS  
  For Daily Alerts

  ಹಳೆ ಪ್ರೇಯಸಿ ಇಲ್ಲದೆ ಕಣ್ಣೀರು ಹಾಕಿದ 'ಕವಲುದಾರಿ' ರಿಷಿ

  By Pavithra
  |

  ರಿಷಿ 'ಆಪರೇಷನ್ ಅಲಮೇಲಮ್ಮ' ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟ ನಾಯಕ ನಟ. ಅದಕ್ಕೂ ಮುನ್ನ ಕಿರುತೆರೆಯಲ್ಲಿ ಉತ್ತಮ ಹೆಸರು ಗಳಿಸಿದ್ದ ರಿಷಿ ಅದೇ ರೀತಿ ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿದ್ದರು. 'ಆಪರೇಷನ್ ಅಲಮೇಲಮ್ಮ' ಚಿತ್ರದಲ್ಲಿ ರಿಷಿ ಆಕ್ಟಿಂಗ್ ನೋಡಿ ನಿರ್ದೇಶಕ ಹೇಮಂತ್ ರಾವ್ 'ಕವಲುದಾರಿ' ಚಿತ್ರಕ್ಕೆ ನಾಯಕನಾಗಿ ಆಯ್ಕೆ ಮಾಡಿಕೊಂಡರು.

  ಇತ್ತ ಹೊಸ ಸಿನಿಮಾ ಪ್ರಯಾಣದ ಜೊತೆ ರಿಷಿ ಹೊಸ ಪ್ರೀತಿಯಲ್ಲಿ ಬಿದ್ದಿದ್ದರಂತೆ. ಆ ಪ್ರೀತಿಯಿಂದಲೇ ರಿಷಿ ಅವರನ್ನ 'ಕವಲುದಾರಿ' ರಿಷಿ ಅಂತ ಕರೆಯೋದಕ್ಕೆ ಶುರು ಮಾಡಿದ್ದರಂತೆ. ಆದರೆ ಅದ್ಯಾಕೋ ರಿಷಿಗೂ ಅವರಿಗೂ ಇತ್ತೀಚಿನ ದಿನಗಳಲ್ಲಿ ಸರಿ ಬರುತ್ತಿಲ್ಲವಂತೆ. ಹಾಗಾಗಿ ಪ್ರೇಯಸಿಯಿಂದ ಕೆಲವು ದಿನಗಳು ದೂರ ಉಳಿಯುವುದಾಗಿ ತಿಳಿಸಿದ್ದಾರೆ.

  ಈ ವಿಚಾರವನ್ನು ರಿಷಿ ತಮ್ಮ ಫೇಸ್ ಬುಕ್ ನಲ್ಲಿ ಬಹಿರಂಗವಾಗಿಯೇ ತಿಳಿಸಿದ್ದಾರೆ. ಇದೇ ವಿಚಾರದ ಸಲುವಾಗಿ ವಿಡಿಯೋವನ್ನು ಮಾಡಿದ್ದಾರೆ ರಿಷಿ. ತಮ್ಮ ನೋವನ್ನು ಕಷ್ಟ ಪಟ್ಟು ಕಣ್ಣೀರಿಡುತ್ತಾ ಹಂಚಿಕೊಂಡಿದ್ದಾರೆ.

  ಸುಮಾರು ತಿಂಗಳುಗಳಿಂದ ಒಳ್ಳೆ ಸಂಬಂಧ ಹೊಂದಿದ್ದ ಸ್ನೇಹಿತರನ್ನ ಕಳೆದುಕೊಂಡರೇ ಸಾಕಷ್ಟು ನೋವಾಗುತ್ತೆ. ಇನ್ನು ಅತಿಯಾಗಿ ಪ್ರೀತಿ ಮಾಡುತ್ತಿದ್ದವರನ್ನು ಕಳೆದುಕೊಂಡರೆ ಹಿಂಸೆ ಆಗುವುದು ಖಂಡಿತ. ಆದಷ್ಟು ಬೇಗ ದೂರ ಆಗಿರುವ ರಿಷಿ ಮತ್ತು ಪ್ರೇಯಸಿ ಮತ್ತೆ ಒಂದಾಗಲಿ ಎನ್ನುವುದೇ ಅವರ ಅಭಿಮಾನಿಗಳ ಆಶಯ. ಇಷ್ಟೆಲ್ಲಾ ಹೇಳಿದ ಮೇಲೆ ರಿಷಿ ಪ್ರೇಯಸಿ ಯಾರು ಎನ್ನುವುದನ್ನು ತಿಳಿಯಲು ಈ ವಿಡಿಯೋ ನೋಡಿ.

  English summary
  Kannada actor Rishi share his painful story on facebook. Actor Rishi has made a video to inform the mistress about being away

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X