»   » ರಚನಾ ಜೊತೆ ಮತ್ತೋರ್ವ ಸ್ಪರ್ಧಿಗೂ ಲವ್ ಪ್ರಪೋಸ್ ಮಾಡಿದ್ರಾ ವೆಂಕಟ್.?

ರಚನಾ ಜೊತೆ ಮತ್ತೋರ್ವ ಸ್ಪರ್ಧಿಗೂ ಲವ್ ಪ್ರಪೋಸ್ ಮಾಡಿದ್ರಾ ವೆಂಕಟ್.?

Posted By:
Subscribe to Filmibeat Kannada

ಹುಚ್ಚ ವೆಂಕಟ್ ಮತ್ತು ರಚನಾ ಲವ್ ಸ್ಟೋರಿ ಬಗ್ಗೆ ಸಾಮಾಜಿಕ ಜಾಲತಾಣ, ಟಿವಿ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಹುಚ್ಚ ವೆಂಕಟ್ ಅವರು ಪಿನಾಯಲ್ ಕುಡಿದ ನಂತರವಂತೂ ಈ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಂಡಿದೆ.

ಇನ್ನು 'ಸೂಪರ್ ಜೋಡಿ' ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳಾಗಿ ಭಾಗವಹಿಸಿದ್ದವರು ಕೂಡ ಈಗ ಹುಚ್ಚ ವೆಂಕಟ್ ಮತ್ತು ರಚನಾ ಪ್ರೇಮ್ ಕಹಾನಿಗೆ ಎಂಟ್ರಿ ಕೊಟ್ಟಿದ್ದಾರೆ.

ವೆಂಕಟ್ 'ಹುಚ್ಚು' ಪ್ರೀತಿ ಬಗ್ಗೆ 'ಸೂಪರ್ ಜೋಡಿ' ರಚನಾ ಬಿಚ್ಚಿಟ್ಟ ರಿಯಲ್ ಕಹಾನಿ

ಈ ಬಗ್ಗೆ ಮಾತನಾಡಿದ ರಿಷಿಕುಮಾರ್ ಸ್ವಾಮೀಜಿ ಅವರು ಹೊಸ ಬಾಂಬ್ ಸಿಡಿಸಿದ್ದಾರೆ. ಹುಚ್ಚ ವೆಂಕಟ್ ಅವರು ಕೇವಲ ರಚನಾ ಅವರಿಗೆ ಮಾತ್ರ ಲವ್ ಮಾಡಿ ಎಂದು ಪ್ರಪೋಸ್ ಮಾಡಿರಲಿಲ್ಲ, ಮತ್ತೊರ್ವ ಸ್ಪರ್ಧಿಗೂ ಪ್ರಪೋಸ್ ಮಾಡಿದ್ದರು ಎಂಬ ಸ್ಪೋಟಕ ಮಾಹಿತಿಯನ್ನ ಟಿವಿ ಮಾಧ್ಯಮದಲ್ಲಿ ಬಿಚ್ಚಿಟ್ಟಿದ್ದಾರೆ. ಯಾರದು? ಮುಂದೆ ಓದಿ......

ವೆಂಕಟ್ ರಚನಾನ ಮಾತ್ರ ಲವ್ ಮಾಡಿಲ್ಲ!

'ಸೂಪರ್ ಜೋಡಿ-2' ರಿಯಾಲಿಟಿ ಶೋನಲ್ಲಿ ಹುಚ್ಚ ವೆಂಕಟ್ ಅವರು, ರಚನಾ ಜೊತೆ ಮತ್ತೊರ್ವ ಸ್ಪರ್ಧಿಯನ್ನ ಲವ್ ಮಾಡಿ ಎಂದಿದ್ದರಂತೆ.

'ವೆಂಕಟ್ ಲವ್' ಬಗ್ಗೆ 'ಸೂಪರ್ ಜೋಡಿ' ನಿರೂಪಕ ಅಕುಲ್ ಹೇಳಿದಿಷ್ಟು.!

ರಿಷಿಕುಮಾರ್ ಹೇಳಿದ ಹೊಸ ಕಥೆ

ಹುಚ್ಚ ವೆಂಕಟ್ ಅವರು ಸಂಗೀತಾ ಎನ್ನುವವರಿಗೆ ಫೋನ್ ಮಾಡಿ ನನ್ನ ಲವ್ ಮಾಡಿ ಎಂದು ಒತ್ತಾಯಿಸಿದ್ದಾರಂತೆ. ಈ ಬಗ್ಗೆ ಫೋನ್ ಕಾಲ್ ಆಡಿಯೋ ಕೂಡ ರೆಕಾರ್ಡ್ ಆಗಿದೆ ಎಂದು ರಿಷಿಕುಮಾರ್ ಬಹಿರಂಗಪಡಿಸಿದ್ದಾರೆ.

ವೆಂಕಟ್ ಗೊಂದು ಹವ್ಯಾಸವಿದೆಯಂತೆ

ರಾತ್ರಿ ಸಮಯದ ನಂತರ ಹುಚ್ಚ ವೆಂಕಟ್ ಅವರಿಗೆ ಮೆಸೆಜ್, ಫೋನ್ ಮಾಡುವ ಹವ್ಯಾಸವಿತ್ತು. ಹಾಗಾಗಿ, ಅವರು ಕೆಲವರಿಗೆ ಮೆಸೆಜ್, ಫೋನ್ ಮಾಡುತ್ತಿದ್ದರು ಎಂಬುದನ್ನ ಮತ್ತೊರ್ವ ಸ್ಪರ್ಧಿ ಪ್ರಸನ್ನ ಮಾಧ್ಯಮದ ಮುಂದೆ ಬಹಿರಂಗಪಡಿಸಿದ್ದಾರೆ.

ಏನು ಮಾತನಾಡಿದ್ದಾರೆ

ಅಂದ್ಹಾಗೆ, ಸಂಗೀತಾ ಎನ್ನುವವರು ಕೂಡ 'ಸೂಪರ್ ಜೋಡಿ-2, ರಿಯಾಲಿಟಿ ಶೋ ನಲ್ಲಿ ಸ್ವರ್ಧಿಯಾಗಿದ್ದವರು. ಹಾಗಾದ್ರೆ, ನಿಜಕ್ಕೂ ವೆಂಕಟ್ ಅವರು ಸಂಗೀತಾಸ ಅವರಿಗೆ ಲವ್ ಮಾಡಿ ಅಂದಿದ್ದರಾ? ಅವರ ಬಳಿ ಕಾಲ್ ರೆಕಾರ್ಡ್ ಆಗಿದ್ಯಾ? ಕಾದು ನೋಡಬೇಕಿದೆ.

'ಸೂಪರ್ ಜೋಡಿ'ಗೂ ಮೊದಲೇ ವೆಂಕಟ್-ರಚನಾಗೆ ಪರಿಚಯವಿತ್ತು.!

ಈ ಆರೋಪಕ್ಕೆ ಸಾಕ್ಷಿ ಇಲ್ಲ

ರಿಷಿ ಕುಮಾರ್ ಅವರ ವರಿಸಿರುವ ಆರೋಪಕ್ಕೆ ಸಾಕ್ಷಿ ಇಲ್ಲ. ಹೀಗಾಗಿ, ಇದು ನಿಜಾನ ಅಥವಾ ಸುಳ್ಳು ಎಂಬುದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ಕಾದು ನೋಡಬೇಕಿದೆ.

English summary
Rishi kumar swami Talk About Huccha Venkat and Rachana's Love Story in TV9 Kannada News Channel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada