»   » ರಿಷಿ ಕುಮಾರ ಸ್ವಾಮಿಜಿಯನ್ನು ತರಾಟೆ ತೆಗೆದುಕೊಂಡ ಅಪ್ಪು ಅಭಿಮಾನಿಗಳು

ರಿಷಿ ಕುಮಾರ ಸ್ವಾಮಿಜಿಯನ್ನು ತರಾಟೆ ತೆಗೆದುಕೊಂಡ ಅಪ್ಪು ಅಭಿಮಾನಿಗಳು

Posted By:
Subscribe to Filmibeat Kannada
ಅಪ್ಪು ಹಾಗು ಪೋತಿಸ್ ಬಗ್ಗೆ ಇದ್ದ ಗೊಂದಲದ ಬಗ್ಗೆ ಋಷಿಕುಮಾರ ಸ್ವಾಮೀಜಿ ಹೇಳಿದ್ದು ಹೀಗೆ | Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಪೋತಿಸ್ ಜಾಹೀರಾತಿನಲ್ಲಿ ಪವರ್ ಸ್ಟಾರ್ ಅಭಿನಯದ ಮಾಡಬಾರದಿತ್ತು. ಅದಷ್ಟೇ ಅಲ್ಲದೆ ಜಾಹೀರಾತು ಪ್ರಖ್ಯಾತಿ ಪಡೆಯಲು ಕೆಂಪೇಗೌಡರ ಹೆಸರನ್ನು ಬಳಸ ಬಾರದಿತ್ತು ಎಂದು ನಟ ಹಾಗೂ ಸ್ವಾಮಿಜಿ ರಿಷಿ ಕುಮಾರ ತಕರಾರು ತೆಗೆದಿದ್ದರು.

ಪೋತಿಸ್ ಕಂಪನಿಯ ಜಾಹೀರಾತು ಪ್ರಖ್ಯಾತಿ ಮಾಡುವ ಉದ್ದೇಶದಿಂದ ಕೆಂಪೇಗೌಡರ ಹೆಸರನ್ನ ಬಳಸಿಕೊಳ್ಳಲಾಗಿದೆ ಹಾಗೂ ರಾಜ್ ಕುಮಾರ್ ಅವರ ಪುತ್ರ ಇದರಲ್ಲಿ ಅಭಿನಯಿಸುವ ಮುನ್ನ ಯೋಚನೆ ಮಾಡಬೇಕಿತ್ತು ಎನ್ನುವ ಅಭಿಪ್ರಾಯವನ್ನ ವ್ಯಕ್ತ ಪಡಿಸಿದ್ದರು.

ಪುನೀತ್ ಜಾಹೀರಾತಿನ ವಿರುದ್ಧ ಆಕ್ರೋಶಗೊಂಡ ಕಾಳಿ ಸ್ವಾಮೀಜಿ

ಈ ವಿಚಾರ ತಿಳಿದ ಪುನೀತ್ ಅಭಿಮಾನಿಗಳು ರಿಷಿ ಕುಮಾರ ಅವರ ವಿರುದ್ಧ ಕಿಡಿ ಕಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಿಷಿ ವಿರುದ್ದ ಸ್ಟೇಟಸ್ ಹಾಕುವುದರ ಜೊತೆಯಲ್ಲಿ ರಿಷಿ ಕುಮಾರ ಸ್ವಾಮಿಜಿ ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಎಚ್ಚೆತ್ತ ಕಾಳಿ ಸ್ವಾಮಿ ಮಾಡಿದ್ದೇನು ಗೊತ್ತಾ ಮುಂದೆ ಓದಿ

ಕಾಳಿ ಸ್ವಾಮಿಗೆ ಅಪ್ಪು ಅಭಿಮಾನಿಗಳ ಪ್ರಶ್ನೆ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜಾಹೀರಾತಿನಲ್ಲಿ ಕೆಂಪೇಗೌಡರ ಹೆಸರನ್ನ ಬಳಸಿಕೊಳ್ಳಲಾಗಿದೆ. ಜಾಹೀರಾತಿನಲ್ಲಿ ಪುನೀತ್ ಅಭಿನಯಿಸಬಾರದಿತ್ತು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ ಕಾಳಿ ಸ್ವಾಮಿ ವಿರುದ್ದ ಅಪ್ಪು ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ.

ನೀವು ಸ್ವಾಮಿಯೇ ಅಲ್ಲ

ಕಾಳಿ ಸ್ವಾಮಿಗೆ ಕರೆ ಮಾಡಿ ಪ್ರಶ್ನೆ ಮಾಡಿರುವ ಅಭಿಮಾನಿಗಳು . ನೀವು ಸಿನಿಮಾಗಳಲ್ಲಿ ಅಭಿನಯಿಸುತ್ತೀರ, ಚಿತ್ರದಲ್ಲಿ ಸಿಗರೇಟ್ ಸೇದುತ್ತಿರ, ಹುಡುಗಿಯರ ಜೊತೆ ಡ್ಯಾನ್ಸ್ ಮಾಡುತ್ತೀರಾ ನೀವು ಹೇಗೆ ಸ್ವಾಮಿ ಆಗುತ್ತೀರಾ ಎಂದಿದ್ದಾರೆ.

ನನ್ನ ಮಾತು ಕೇಳಿ ಎಂದ ಕಾಳಿ ಸ್ವಾಮಿ

ಅಭಿಮಾನಿಗಳು ಮೇಲಿಂದ ಮೇಲೆ ಕರೆ ಮಾಡಲು ಶುರು ಮಾಡಿದ ನಂತರ ಫೇಸ್ ಬುಕ್ ನಲ್ಲಿ ಲೈವ್ ಮಾಡಿದ ರಿಷಿ ಕುಮಾರ ಸ್ವಾಮಿ ನನ್ನ ಮಾತನ್ನ ಕೇಳಿ ನನ್ನ ಕೋಪ ಪುನೀತ್ ಮೇಲೆ ಅಲ್ಲ, ಪೋತಿಸ್ ಮಾಲೀಕರ ಮೇಲೆ ಎಂದಿದ್ದಾರೆ.

ನಾನು ಕೂಡ ಪುನೀತ್ ಅಭಿಮಾನಿ

ಲೈವ್ ನಲ್ಲಿ ನಾನು ಪವರ್ ಸ್ಟಾರ್ ಪುನೀತ್ ಕುಮಾರ್ ಅಭಿಮಾನಿ ನನ್ನನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೀರ, ನನ್ನ ಹೋರಾಟ ಪೋತಿಸ್ ಸಂಸ್ಥೆಯ ಮೇಲೆ ಹೊರತು ರಾಜ್ ಕುಮಾರ್ ಕುಟುಂಬದ ಮೇಲೆ ಅಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

English summary
Puneet Raj Kumar fans are angry about Rishi Kumar Swamiji, Then Rishi Kumar Swamy said I did not file any complaint against Puneet Raj Kumar,

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada