»   » ಕನ್ನಡದ 'ಈ' ನಟನ ಚಿತ್ರಕ್ಕೆ ಹಣ ಹಾಕುವುದಕ್ಕೆ ಮುಂದಾದ ಧನುಷ್!

ಕನ್ನಡದ 'ಈ' ನಟನ ಚಿತ್ರಕ್ಕೆ ಹಣ ಹಾಕುವುದಕ್ಕೆ ಮುಂದಾದ ಧನುಷ್!

Posted By:
Subscribe to Filmibeat Kannada

ಒಂದು ಕಡೆ ಕನ್ನಡದ ಸ್ಟಾರ್ ನಟರು ನಿರ್ಮಾಪಕರಾಗುತ್ತಿದ್ದಾರೆ. ಆದರೆ ಈಗಾಗಲೇ ನಿರ್ಮಾಪಕರಾಗಿರುವ ಕಾಲಿವುಡ್ ನಟ ಧನುಷ್ ಈಗ ಕನ್ನಡದಲ್ಲಿ ಒಂದು ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ.

ಈ ಹಿಂದೆ 'ವಜ್ರಕಾಯ' ಚಿತ್ರದಲ್ಲಿ ಒಂದು ಹಾಡನ್ನು ಹಾಡಿ ಧನುಷ್ ಕನ್ನಡಕ್ಕೆ ಕಾಲಿಟ್ಟಿದ್ದರು. ಈಗ ನಿರ್ಮಾಪಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕನ್ನಡದ ಒಬ್ಬ ನಟನ ಅಭಿನಯ ನೋಡಿ ಅವರಿಗೊಂದು ಸಿನಿಮಾವನ್ನು ಮಾಡುವುದಕ್ಕೆ ಮನಸು ಮಾಡಿದ್ದಾರೆ. ಅಂದಹಾಗೆ, ನಟ ಧನುಷ್ ಬಂಡವಾಳ ಹೂಡುತ್ತಿರುವುದು ಬೇರೆ ಯಾರಿಗೂ ಅಲ್ಲ ಪರ್ಮಿ ಅಲಿಯಾಸ್ ರಿಷಿ ಅವರಿಗೆ. ಮುಂದೆ ಓದಿ..

ರಿಷಿ ನಾಯಕ

ತಮಿಳಿನ ಸ್ಟಾರ್ ನಟ ಧನುಷ್ ಸ್ಯಾಂಡಲ್ ವುಡ್ ನಲ್ಲಿ ಒಂದು ಸಿನಿಮಾ ನಿರ್ಮಾಣ ಮಾಡಲಿದ್ದು, ಈ ಚಿತ್ರಕ್ಕೆ ರಿಷಿ ನಾಯಕನಾಗಿ ಆಯ್ಕೆ ಆಗಿದ್ದಾರೆ.

'ಆಪರೇಷನ್ ಅಲಮೇಲಮ್ಮ' ಚಿತ್ರ

ರಿಷಿ ಮೊದಲ ಸಿನಿಮಾ 'ಆಪರೇಷನ್ ಅಲಮೇಲಮ್ಮ' ಚಿತ್ರ ನೋಡಿದ ಧನುಷ್ ರಿಷಿ ಅಭಿನಯವನ್ನು ಇಷ್ಟ ಪಟ್ಟು ಈಗ ಅವರ ಮುಂದಿನ ಚಿತ್ರಕ್ಕೆ ಹಣ ಹಾಕಲಿದ್ದಾರೆ.

ಇಸ್ಲಾಹುದ್ದೀನ್ ನಿರ್ದೇಶನ

ರಿಷಿ ಅವರ ಈ ಚಿತ್ರವನ್ನು ಇಸ್ಲಾಹುದ್ದೀನ್ ನಿರ್ದೇಶನ ಮಾಡಲಿದ್ದು, ಸದ್ಯ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿದೆ.

'Wunderbar ಫಿಲ್ಮ್ಸ್' ನಿರ್ಮಾಣ ಸಂಸ್ಥೆ

ಧನುಷ್ ಈಗಾಗಲೇ ತಮ್ಮ 'Wunderbar ಫಿಲ್ಮ್ಸ್' ನಿರ್ಮಾಣ ಸಂಸ್ಥೆಯಲ್ಲಿ 'ಕಾಕ ಮುತ್ತೈ' ಸೇರಿದಂತೆ ಕೆಲ ಒಳ್ಳೆಯ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

'ಕವಲು ದಾರಿ'

ಸದ್ಯ ನಟ ಪುನೀತ್ ರಾಜ್ ಕುಮಾರ್ ನಿರ್ಮಾಣದ 'ಕವಲು ದಾರಿ' ಸಿನಿಮಾದಲ್ಲಿ ರಿಷಿ ನಟಿಸುತ್ತಿದ್ದಾರೆ.

ಅಪ್ಪು ನಿರ್ಮಾಣದ ಮೊದಲ ಸಿನಿಮಾಗೆ ಕ್ಲಾಪ್ ಮಾಡಿದ ಶಿವಣ್ಣ

ಆಗ ಗಾಯಕ ಈಗ ನಿರ್ಮಾಪಕ

ಶಿವರಾಜ್ ಕುಮಾರ್ ಅಭಿನಯದ 'ವಜ್ರಕಾಯ' ಸಿನಿಮಾದಲ್ಲಿ ಒಂದು ಹಾಡನ್ನು ಹಾಡಿದ್ದ ಧನುಷ್ ಈಗ ನಿರ್ಮಾಪಕನಾಗಿ ಮತ್ತೆ ಕನ್ನಡಕ್ಕೆ ಮರಳಿದ್ದಾರೆ.

English summary
Kollywood Actor Dhanush is producing his first Kannada movie. and 'Operation Alamelamma' fame Rishi will be in lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada