For Quick Alerts
  ALLOW NOTIFICATIONS  
  For Daily Alerts

  'ರಾಜರಥ' ಟೀಂ ನಿಂದ ಒಂದು ಪೈಸೆ ತಗೊಂಡಿಲ್ಲ : 'ಫೈರ್' ಆದ ರಶ್ಮಿ

  By Naveen
  |

  'ರಾಜರಥ' ಚಿತ್ರತಂಡದ ಕಚಡ ವಿವಾದ ದೊಡ್ಡ ಮಟ್ಟದ ಸುದ್ದಿ ಮಾಡಿತ್ತು. ಸಂದರ್ಶನದಲ್ಲಿ ಆಡಿದ ಮಾತಿಗೆ ನಟ ನಿರೂಪ್ ಭಂಡಾರಿ, ನಟಿ ಅವಂತಿಕಾ ಶೆಟ್ಟಿ, ನಿರ್ದೇಶನ ಅನೂಪ್ ಭಂಡಾರಿ ಹಾಗೂ ಕಾರ್ಯಕ್ರಮದ ನಿರುಪಕಿ Rapid ರಶ್ಮಿ ಮೇಲೆ ಎಲ್ಲರೂ ಕಿಡಿಕಾರಿದ್ದರು. ಆದರೆ ಇವರೆಲ್ಲರೂ ಈಗ ಕ್ಷಮೆ ಕೇಳಿದ್ದು ಆಗಿದೆ.

  ಈ ವಿವಾದದ ನಡುವೆ ರಶ್ಮಿ ಈ ಕಾರ್ಯಕ್ರಮಕ್ಕೆ ಒಂದು ಲಕ್ಷ ಹಣ ಪಡೆದಿದ್ದಾರೆ ಎನ್ನುವ ಮಾತು ಸಹ ಕೇಳಿ ಬಂದಿತ್ತು. ಜೊತೆಗೆ ಇಂತಹ ಪ್ರಶ್ನೆ ಕೇಳಿದ್ದು ಅವರ ತಪ್ಪು ಎಂದು ಅನೇಕರು ಗುಡುಗಿದ್ದರು. ಆದರೆ ಈ ಬಗ್ಗೆ ಸ್ವತಃ ರಶ್ಮಿ ಸ್ಪಷ್ಟಣೆ ನೀಡಿದ್ದಾರೆ. 'ರಾಜರಥ' ಟೀಂ ನಿಂದ ಒಂದು ಪೈಸೆ ತಗೊಂಡಿಲ್ಲ ಎಂದಿರುವ ಅವರು ಗಾಸಿಪ್ ಹಬ್ಬಿಸುವವರ ವಿರುದ್ಧ ಗರಂ ಆಗಿದ್ದಾರೆ.

  ಸಾರಾ ಗೋವಿಂದು ಮುಂದೆ ಕೈಮುಗಿದು ನಿಂತು ಕನ್ನಡಿಗರಿಗೆ ಕ್ಷಮೆ ಕೇಳಿದ Rapid ರಶ್ಮಿ ಸಾರಾ ಗೋವಿಂದು ಮುಂದೆ ಕೈಮುಗಿದು ನಿಂತು ಕನ್ನಡಿಗರಿಗೆ ಕ್ಷಮೆ ಕೇಳಿದ Rapid ರಶ್ಮಿ

  ಪತ್ರಿಕಾ ಸಂದರ್ಶನದಲ್ಲಿ ಈ ವಿವಾದದ ಬಗ್ಗೆ ನಿರೂಪಕಿ Rapid ರಶ್ಮಿ ಆಡಿದ ಮಾತುಗಳು ಮುಂದಿದೆ ಓದಿ.

  ಒಂದು ಪೈಸೆ ತಗೊಂಡಿಲ್ಲ

  ಒಂದು ಪೈಸೆ ತಗೊಂಡಿಲ್ಲ

  ''ರಾಜರಥ' ಚಿತ್ರತಂಡದಿಂದ ಒಂದೇ ಒಂದು ಪೈಸೆ ದುಡ್ಡು ತೆಗೆದುಕೊಂಡಿಲ್ಲ. ಯಾರಾದರರೂ ನಾನು ದುಡ್ಡು ತೆಗದುಕೊಂಡಿದ್ದೇನೆ ಎಂದು ಸಾಬೀತು ಮಾಡಿದರೆ ನಾಳೆಯಿಂದ ಮಾತನಾಡುವುದನ್ನೇ ಬಿಟ್ಟು ಬಿಡುತ್ತೇನೆ. ಕೆಲವರು ಪ್ರೆಸ್ ಮೀಟ್ ನಲ್ಲಿ ನಾನು 'ರಾಜರಥ' ಚಿತ್ರತಂಡದಿಂದ ಲಕ್ಷ ರೂಪಾಯಿ ತೆಗೆದುಕೊಂಡಿದ್ದೇನೆ ಅಂತ ಹೇಳಿದ್ದಾರೆ. ಅವರು ಸಾಕ್ಷಿ ತೆಗೆದುಕೊಂಡು ಬರಲಿ.'' ಎಂದು ರಶ್ಮಿ ಖಡಕ್ ಆಗಿ ಹೇಳಿದ್ದಾರೆ.

  ವಿನಾಕಾರಣ ಆರೋಪ ಮಾಡುತ್ತಿದ್ದಾರೆ

  ವಿನಾಕಾರಣ ಆರೋಪ ಮಾಡುತ್ತಿದ್ದಾರೆ

  ''ಯಾಕೆ ಸುಮ್ಮನೆ ಈ ರೀತಿಯ ಸುದ್ದಿಗಳನ್ನು ಹಬ್ಬಿಸುತ್ತಾರೆ. ನನ್ನ ಕಾರ್ಯಕ್ರಮದ ಬಗ್ಗೆ ಮಾತನಾಡುವುದಕ್ಕೆ ಅವರಿಗೆ ಏನ್ ಹಕ್ಕಿದೆ?. ಅವರು ನನ್ನ ಟೀಂಗೆ ಸಂಬಳ ಕೊಡುತ್ತಾರಾ ? ಇಲ್ವಲ್ಲ. ಅನೇಕರು ಇಷ್ಟು ದಿನ ಕಾದು ನನ್ನನ್ನು ಹಣೆಯುವ ಪ್ರಯತ್ನ ಮಾಡುತ್ತಿದ್ದಾರೆ. ಜನರು ಸಿಟ್ಟಿಗೆದ್ದಿಲ್ಲ, ಕೆಲವರು ಸೋಷಿಯಲ್ ಮೀಡಿಯಾದಲ್ಲಿ ನನ್ನ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ''. - Rapid ರಶ್ಮಿ, ನಿರೂಪಕಿ

  'ಕಚಡ' ಪದದ ಅರ್ಥ ಗೊತ್ತಿರಲಿಲ್ಲ ಎಂದ ಅವಂತಿಕಾ ಶೆಟ್ಟಿ 'ಕಚಡ' ಪದದ ಅರ್ಥ ಗೊತ್ತಿರಲಿಲ್ಲ ಎಂದ ಅವಂತಿಕಾ ಶೆಟ್ಟಿ

  ಫಸ್ಟ್ ಡೇ ನೋಡಿದವರು ದೇವರು ಎಂದು ಸಹ ಹೇಳಿದ್ದಾರೆ

  ಫಸ್ಟ್ ಡೇ ನೋಡಿದವರು ದೇವರು ಎಂದು ಸಹ ಹೇಳಿದ್ದಾರೆ

  ''ಎಲ್ಲರೂ ಎಡಿಟೆಡ್ ವಿಡಿಯೋ ನೋಡಿದ್ದಾರೆ. ನನ್ನ ಫೇಸ್ ಬುಕ್ ಪೇಜ್ ನಲ್ಲಿ ಎಡಿಟ್ ಆಗದ ಪೂರ್ಣ ವಿಡಿಯೋ ಹಾಕಿದ್ದೇನೆ. ಎಲ್ಲರೂ ಅದನ್ನು ನೋಡಿ. ಡ್ಯಾಶಿಂಗ್ ಪ್ರಶ್ನೆಗಳು ಸುತ್ತಿನಲ್ಲಿ ''ರಾಜರಥ' ಸಿನಿಮಾ ಫಸ್ಟ್ ಡೇ ಫಸ್ಟ್ ಶೋ ನೋಡಿದವರು ಅಂತ ಕೇಳಿದಾಗ ಅವರು ದೇವರು ಎಂದು ಉತ್ತರಿಸಿದ್ದಾರೆ. ಅದೇ ತರ ಕಡೆಯಲ್ಲಿ ''ರಾಜರಥ' ಚಿತ್ರವನ್ನು ನೋಡದವರು ಎಂಬ ಪ್ರಶ್ನೆ ಕೇಳಿದಾಗ ಅನೂಪ್ ಕಚಡ ನನ್ ಮಗ ಎಂದು ಉತ್ತರಿಸಿದರು. ಆಗ ನನ್ನ ಮೊದಲ ರಿಯಾಕ್ಷನ್ ಫೈನಲೀ ಉತ್ತರ ಬಂತು ಅಂತ ಇತ್ತು. ಆ ಕ್ಷಣ ನನಗೆ ಇದು ಕನ್ನಡಿಗರಿಗೆ ಕಚಡಾ ಲೋಫರ್ ಅನ್ನೊ ತರ ಆಗುತ್ತದೆ ಅಂತ ಹೊಳೆಯಲಿಲ್ಲ. - Rapid ರಶ್ಮಿ, ನಿರೂಪಕಿ

  ಆ ವಿಡಿಯೋ ಬಿಟ್ಟವರು ಯಾರು ಅಂತಲು ನನಗೆ ಗೊತ್ತಿಲ್ಲ

  ಆ ವಿಡಿಯೋ ಬಿಟ್ಟವರು ಯಾರು ಅಂತಲು ನನಗೆ ಗೊತ್ತಿಲ್ಲ

  ''ಯಾಕೆ ಅಂತಲೇ ಗೊತ್ತಾಗುತ್ತಿಲ್ಲ. ಇದೆಲ್ಲಾ ಶುರು ಆಗಿದ್ದು ಒಂದು ಎಡಿಟ್ ಮಾಡಿದ ವಿಡಿಯೋ ಮೂಲಕ. ಆ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಬಿಟ್ಟವರು ಯಾರು ಅಂತಲು ನನಗೆ ಗೊತ್ತಿಲ್ಲ. ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಅಣ್ಣಾವ್ರು ಅಭಿಮಾನಿಗಳನ್ನು ದೇವರು ಅಂತ ಹೇಳಿದವರು ಈಗ ಪ್ರೇಕ್ಷಕರನ್ನು ಕಚಡ ಎನ್ನುತ್ತಿದ್ದಾರೆ ಅಂತ ಬರೆಯುವವರಿಗೆ ಅಣ್ಣಾವ್ರು ಹೆಣ್ಣು ಮಕ್ಕಳಿಗೆ ಕೆಟ್ಟದಾಗಿ ಮಾತನಾಡಿಲ್ಲ ಅಂತ ಗೊತ್ತಿಲ್ವ.'' - Rapid ರಶ್ಮಿ, ನಿರೂಪಕಿ

  ನನ್ನನ್ನು ಯಾಕೆ ಇಲ್ಲಿ ಟಾರ್ಗೆಟ್ ಮಾಡಲಾಗುತ್ತಿದೆ

  ನನ್ನನ್ನು ಯಾಕೆ ಇಲ್ಲಿ ಟಾರ್ಗೆಟ್ ಮಾಡಲಾಗುತ್ತಿದೆ

  ''ನಾನು ಎಂದಿನಂತೆ ಪ್ರಶ್ನೆ ಕೇಳಿದೆ. ಅನೂಪ್ ಆ ರೀತಿ ಉತ್ತರ ಕೊಟ್ಟರು. ಆರಂಭದಲ್ಲಿ ಸಿಟ್ಟು ಭಂಡಾರಿ ಸಹೋದದರ ಮೇಲೆ ಇತ್ತು. ಆ ನಂತರ ಅದು ನಿರೂಪಕಿ ಸರಿ ಇಲ್ಲ ಅನ್ನೊ ಥರ ಬಂತು. ಜನ ಕೆಟ್ಟದಾಗಿ ಕಮೆಂಟ್ ಕೂಡ ಹಾಕಿದರು. ಆದರೆ ನಾನು ಏನು ತಪ್ಪು ಮಾಡಿದ್ದೇನೆ. ನನ್ನನ್ನು ಯಾಕೆ ಇಲ್ಲಿ ಟಾರ್ಗೆಟ್ ಮಾಡಲಾಗುತ್ತಿದೆ. ನನ್ನ ಕಾರ್ಯಕ್ರಮವನ್ನೇ ಬಹಿಷ್ಕಾರ ಮಾಡಬೇಕು ಎನ್ನುವ ಮಟ್ಟಿಗೆ ಮಾತುಗಳು ಬಂದಿದೆ. ಆದರೆ ಇದರಲ್ಲಿ ನನ್ನ ತಪ್ಪು ಏನಿದೆ.'' - Rapid ರಶ್ಮಿ, ನಿರೂಪಕಿ

  English summary
  Rajaratha kannada movie controversy : RJ Rapid Rashmi spoke about asking controversial question to Anup Bhandari and Nirup Bhandari.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X