For Quick Alerts
  ALLOW NOTIFICATIONS  
  For Daily Alerts

  ವಿಡಿಯೋ ವೈರಲ್; ಅಡಿಕೆ ಸುಲಿಯುವ ಮಜಾನೇ ಬೇರೆ ಎಂದ 'ರಾಬರ್ಟ್' ಸುಂದರಿ ಆಶಾ ಭಟ್

  |

  ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಲ್ಲಿ ಮಿಂಚುತ್ತಿರುವ ನಟಿ ಆಶಾ ಭಟ್ ಇದೀಗ ಮಲೆನಾಡಿನಲ್ಲಿ ಅಡಿಕೆ ಕೊಯ್ಲು ಮಾಡುತ್ತಿದ್ದಾರೆ. ಮಲೆನಾಡಿನಲ್ಲಿ ಸದ್ಯ ಅಡಿಕೆ ಕೊಯ್ಲು ಜೋರಾಗಿ ನಡೆಯುತ್ತಿದೆ. ರಾಬರ್ಟ್ ನಾಯಕಿ ಆಶಾ ಭಟ್ ಸಹ ಮಲೆನಾಡು ಸೇರಿದ್ದು, ಅಡಿಕೆ ಕೊಯ್ಲು ಅನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ.

  ಮಲೆನಾಡ ಹುಡುಗಿ ಅಡಿಕೆ ಸುಲಿಯೋದು ನೋಡೋಕೆ ಎಷ್ಟು ಚೆಂದ | Asha Bhat | Filmibeat Kannada

  ಹೌದು, ಆಶಾ ಭಟ್ ಅಡಿಕೆ ಸುಲಿಯುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ಅಚ್ಚರಿ ಪಡುತ್ತಿದ್ದಾರೆ. ಅಂದಹಾಗೆ ಅಡಿಕೆ ಕೊಯ್ಲು ಆಶಾ ಭಟ್ ಗೆ ಹೊಸದೇನಲ್ಲ. ಯಾಕೆಂದರೆ ಮೂಲತಃ ಮಲೆನಾಡಿನವರಾದ ಆಶಾ ಭಟ್ ಅಡಿಕೆ ಕೊಯ್ಲಿನ ಅನುಭವವಿದೆ. ಭದ್ರಾವತಿಯ ಈ ಸುಂದರಿ ಇದೀಗ ತನ್ನ ಅಜ್ಜಿ ಮನೆಯಲ್ಲಿ ರಜೆಯ ಸಮಯ ಕಳೆಯುತ್ತಿದ್ದಾರೆ.

  ಮಲೆನಾಡಿನಲ್ಲಿ ಅಡಿಕೆ ಸುಲಿತ ಮಾಡುತ್ತಿರುವ 'ಕನ್ನಡತಿ' ರಂಜನಿ ರಾಘವನ್ಮಲೆನಾಡಿನಲ್ಲಿ ಅಡಿಕೆ ಸುಲಿತ ಮಾಡುತ್ತಿರುವ 'ಕನ್ನಡತಿ' ರಂಜನಿ ರಾಘವನ್

  ಅಜ್ಜಿ ಮನೆಯಲ್ಲಿ ಅಡಿಕೆ ಸುಲಿಯುತ್ತಿರುವ ಆಶಾ ಭಟ್

  ಅಜ್ಜಿ ಮನೆಯಲ್ಲಿ ಅಡಿಕೆ ಸುಲಿಯುತ್ತಿರುವ ಆಶಾ ಭಟ್

  ಆಶಾ ಭಟ್ ಸದ್ಯ ತನ್ನ ಅಜ್ಜಿ ಮನೆ ಶಿರಸಿಯಲ್ಲಿದ್ದಾರೆ. ಕುಟುಂಬದ ಜೊತೆಗೆ ಮಲೆನಾಡಿನ ಪ್ರಕೃತಿ ಸೌಂದರ್ಯ ಸವಿಯುತ್ತಾ, ಅಜ್ಜಿಮನೆಯಲ್ಲಿ ಅಡಿಕೆ ಸುಲಿದು ಎಂಜಾಯ್ ಮಾಡಿದ್ದಾರೆ. ಖುಷಿ ಖುಷಿಯಾಗಿ ಅಡಿಕೆ ಸುಲಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ಶೇರ್ ಮಾಡಿ ಅಶಾ ಭಟ್, 'ಅಜ್ಜಿ ಮನೆಯಲ್ಲಿ ಅಡಿಕೆ ಸುಲಿಯುವ ಮಜಾನೇ ಬೇರೆ' ಎಂದು ಬರೆದುಕೊಂಡಿದ್ದಾರೆ.

  ಅಭಿಮಾನಿಗಳಿಂದ ಮೆಚ್ಚುಗೆ

  ಅಭಿಮಾನಿಗಳಿಂದ ಮೆಚ್ಚುಗೆ

  ಆಶಾ ಭಟ್ ವಿಡಿಯೋಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ. ಸ್ಟಾರ್ ನಟಿಯಾಗಿ ಸಾಮಾನ್ಯ ವ್ಯಕ್ತಿಯಂತೆ ಅಡಿಕೆ ಸುಲಿಯುತ್ತಿರುವ ನಿಮ್ಮ ಸರಳತೆ ಇಷ್ಟವಾಯಿತು ಎಂದು ಅನೇಕರು ಹೊಗಳುತ್ತಿದ್ದಾರೆ. ಇನ್ನು ಕೆಲವರು ನೀವು ಪಕ್ಕಾ ಮಲೆನಾಡಿನ ಹುಡುಗಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  ರಾಬರ್ಟ್ ರಿಲೀಸ್ ಗೆ ಕಾಯುತ್ತಿರುವ ನಟಿ

  ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದ ಆಶಾ ಭಟ್ ಜಂಗ್ಲೀ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ರಾಬರ್ಟ್ ಸಿನಿಮಾ ಮೂಲಕ ಆಶಾ ಭಟ್ ಸ್ಯಾಂಡಲ್ ವುಡ್ ಪದಾರ್ಪಣೆ ಮಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ತೆರೆಹಂಚಿಕೊಂಡಿರುವ ಆಶಾ ಭಟ್, ಕನ್ನಡದ ಮೊದಲ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾ ಜೊತೆಗೆ ಹಿಂದಿಯ ದೋಸ್ತಾನಾ-2 ಚಿತ್ರದಲ್ಲೂ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

  ಮಾಲೆನಾಡಿನ ಅಡಿಕೆ ಸುಲಿತದಲ್ಲಿ ನಟಿ ರಂಜನಿ

  ಮಾಲೆನಾಡಿನ ಅಡಿಕೆ ಸುಲಿತದಲ್ಲಿ ನಟಿ ರಂಜನಿ

  ಇತ್ತೀಚಿಗೆ ಸ್ಯಾಂಡಲ್ ವುಡ್ ನಟಿ ರಂಜನಿ ರಾಘವನ್ ಅಡಿಕೆ ಸುಲಿದು ಅಚ್ಚರಿ ಮೂಡಿಸಿದ್ದರು. ಮೊದಲ ಬಾರಿಗೆ ಮಲೆನಾಡಿನ ಅಡಿಕೆ ಕೊಯ್ಲಿನಲ್ಲಿ ಭಾಗಿಯಾಗಿದ್ದ ರಂಜನಿ ವಿಡಿಯೋ ಸಹ ವೈರಲ್ ಆಗಿತ್ತು. ರಂಜನಿಗೆ ಅಡಿಕೆ ಕೊಯ್ಲು ಹೊಸದು, ಹಾಗಾಗಿ ಸ್ಥಳಿಯರ ಸಹಾಯ ಪಡೆದು ಅಡಿಕೆ ಸುಲಿಯುವುದನ್ನು ಕಲಿಯುತ್ತಿದ್ದ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು. ಅಂದಹಾಗೆ ರಂಜನಿ ಅಡಿಕೆ ಸುಲಿತ ಮಾಡಿದ್ದು ಅವರ ಮುಂದಿನ ಸಿನಿಮಾಗಾಗಿ.

  English summary
  Roberrt Actress Asha Bhat shares Arecanut harvesting Video in her Grandmother's house at Malnad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X