For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಆಕ್ರೋಶದ ಫಲ: 'ರಾಬರ್ಟ್' ಬಿಡುಗಡೆಗಿದ್ದ ತೊಡಕು ನಿವಾರಣೆ

  |

  ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾದ ಬಿಡುಗಡೆಗೆ ತೆಲುಗು ರಾಜ್ಯಗಳಲ್ಲಿ ಅಡ್ಡಿ ಎದುರಾಗಿತ್ತು. ಆದರೆ ಈಗ ಆ ತಡೆ ನಿವಾರಣೆಯಾಗಿದೆ.

  ದರ್ಶನ್ ಮುಂದೆ ಮಂಡಿಯೂರಿದ ತೆಲುಗು ಚಿತ್ರ ವಿತರಕರು | Filmibeat Kannada

  ತಮ್ಮ ಸಿನಿಮಾದ ಬಿಡುಗಡೆಗೆ ತಡೆ ಒಡ್ಡುತ್ತಿರುವ ತೆಲುಗು ಚಿತ್ರರಂಗದ ವಿರುದ್ಧ ನಟ ದರ್ಶನ್ ಗುಡುಗಿದ್ದರು. ಫಿಲಂ ಛೇಂಬರ್‌ಗೆ ದೂರು ಸಹ ನೀಡಿದ್ದರು ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ.

  ಇದೀಗ ದರ್ಶನ್ ಆಕ್ರೋಶಕ್ಕೆ ಸೂಕ್ತ ಫಲ ದೊರೆತಿದ್ದು, ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ಬಿಡುಗಡೆಗೆ ಇದ್ದ ಅಡ್ಡಿ ತೊಲಗಿದೆ. ಮಾರ್ಚ್ 11 ರಂದು ರಾಬರ್ಟ್ ಸಿನಿಮಾ ತೆರೆಗೆ ಬರಲಿದ್ದು, ಅದೇ ದಿನ ತೆಲುಗಿನಲ್ಲಿಯೂ ಸಹ ಎರಡು ತೆಲುಗು ರಾಜ್ಯಗಳಲ್ಲಿಯೂ ಸಿನಿಮಾ ಬಿಡುಗಡೆ ಆಗಲಿದೆ.

  ತೆಲುಗು ರಾಜ್ಯಗಳಲ್ಲಿ 400 ಕ್ಕೂ ಚಿತ್ರಮಂದಿರಗಳಲ್ಲಿರಾಬರ್ಟ್

  ತೆಲುಗು ರಾಜ್ಯಗಳಲ್ಲಿ 400 ಕ್ಕೂ ಚಿತ್ರಮಂದಿರಗಳಲ್ಲಿರಾಬರ್ಟ್

  ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿಯೇ 400 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ರಾಬರ್ಟ್' ಸಿನಿಮಾದ ತೆಲುಗು ಅವತರಣಿಕೆ ಬಿಡುಗಡೆ ಆಗಲಿದೆ. 'ರಾಬರ್ಟ್' ಸಿನಿಮಾದ ತೆಲುಗು ಡಬ್ ಸಿನಿಮಾದಲ್ಲಿ ದರ್ಶನ್ ಅವರೇ ತಮ್ಮ ಪಾತ್ರಕ್ಕೆ ಧ್ವನಿ ನೀಡಿದ್ದಾರೆ.

  ಮೂರು ತೆಲುಗು ಸಿನಿಮಾಗಳು ಬಿಡುಗಡೆ ಆಗುತ್ತಿವೆ

  ಮೂರು ತೆಲುಗು ಸಿನಿಮಾಗಳು ಬಿಡುಗಡೆ ಆಗುತ್ತಿವೆ

  'ರಾಬರ್ಟ್' ಸಿನಿಮಾ ಬಿಡುಗಡೆ ಆಗುವ ದಿನ ತೆಲುಗಿನ ಮೂರು ಸಿನಿಮಾಗಳು ಬಿಡುಗಡೆ ಆಗಲಿವೆ. ತಮ್ಮ ಭಾಷೆಯ ಸಿನಿಮಾ ಬಿಡುಗಡೆ ಆಗುವ ದಿನ ಬೇರೆ ಭಾಷೆಯ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ತೆಲುಗು ಚಿತ್ರರಂಗದ ಕೆಲವರು ಖ್ಯಾತೆ ತೆಗೆದಿದ್ದರು.

  ಕನ್ನಡ ಅಭಿಮಾನ ಬೆಳೆಸಿಕೊಳ್ಳಬೇಕು: ದರ್ಶನ್

  ಕನ್ನಡ ಅಭಿಮಾನ ಬೆಳೆಸಿಕೊಳ್ಳಬೇಕು: ದರ್ಶನ್

  ಈ ಬಗ್ಗೆ ನಿನ್ನೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು ನಟ ದರ್ಶನ್. 'ಅವರ (ತೆಲುಗು) ಸಿನಿಮಾಗಳು ಇಲ್ಲಿ ಯಾವುದೇ ಆತಂಕ ಇಲ್ಲದೆ ಬಿಡುಗಡೆ ಆಗುತ್ತವೆ. ನಾವು ತೊಂದರೆ ಕೊಟ್ಟಿದ್ದೀವಾ? ಎಂದು ಪ್ರಶ್ನಿಸಿದ ದರ್ಶನ್, 'ನಮ್ಮಲ್ಲಿರೋರು ಮೊದಲು ಕನ್ನಡ ಅಭಿಮಾನ ಬೆಳೆಸಿಕೊಳ್ಳಬೇಕು' ಎಂದರು.

  ವಿನೋದ್ ಪ್ರಭಾಕರ್-ಜಗಪತಿಬಾಬು ನಟನೆ

  ವಿನೋದ್ ಪ್ರಭಾಕರ್-ಜಗಪತಿಬಾಬು ನಟನೆ

  'ರಾಬರ್ಟ್' ಸಿನಿಮಾದಲ್ಲಿ ದರ್ಶನ್ ಜೊತೆಗೆ ನಾಯಕಿಯಾಗಿ ಆಶಾ ಭಟ್ ನಟಿಸಿದ್ದಾರೆ. ಸಿನಿಮಾದಲ್ಲಿ ಜನ ವಿನೋದ್ ಪ್ರಭಾಕರ್, ತೆಲುಗಿನ ಜಗಪತಿ ಬಾಬು, ಸಹನಟ ಧರ್ಮಣ್ಣ ಇನ್ನೂ ಅನೇಕರು ಇದ್ದಾರೆ. ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶಿಸಿದ್ದಾರೆ. ನಿರ್ಮಾಣ ಉಮಾಪತಿ ಅವರದ್ದು.

  English summary
  Roberrt Going to Release in Telugu States with over 400+ Screens , Confirms Producer Umapathi Shrinivas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X