twitter
    For Quick Alerts
    ALLOW NOTIFICATIONS  
    For Daily Alerts

    ರಾಬರ್ಟ್ ಪೈರಸಿ: 'ಬಿಗ್ ಬ್ರದರ್ಸ್' ವಿರುದ್ಧ ಉಮಾಪತಿ ಶ್ರೀನಿವಾಸ್ ಗುಡುಗು

    |

    ನಾಟಕಗಳನ್ನು ನೋಡಬೇಕು ಅಂದ್ರೆ ರಂಗಮಂದಿರಕ್ಕೆ ಹೋಗಬೇಕಿತ್ತು. ಸಿನಿಮಾಗಳನ್ನು ನೋಡಬೇಕಂದ್ರೆ ಚಿತ್ರಮಂದಿರಕ್ಕೆ ಹೋಗಬೇಕಿತ್ತು. ಟೆಲಿವಿಷನ್ ಯುಗ ಆರಂಭವಾದ ಮೇಲೆ ಸಿನಿಮಾಗಳನ್ನು ಟಿವಿಯಲ್ಲಿ ನೋಡಲು ಜನ ಆರಂಭಿಸಿದರು. ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಬಹಳ ದಿನಗಳ ನಂತರ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕಾರಣ ಪೈರಸಿ ಎಂಬ ಸಂಪ್ರದಾಯ ಇರಲೇ ಇಲ್ಲ. ಈಗ ಕಾಲ ಬದಲಾಗಿದೆ. ಚಿತ್ರಮಂದಿರಕ್ಕೂ ಮೊದಲೇ ಮೊಬೈಲ್‌ನಲ್ಲಿ ಸಿನಿಮಾ ನೋಡುವಂತಾಗಿದೆ.

    ತಾಂತ್ರಿಕತೆ ಬೆಳೆಯುತ್ತಿದ್ದಂತೆ ಅದರಿಂದ ದುಷ್ಪರಿಣಾಮಗಳು ಹೆಚ್ಚಾಗುತ್ತಲೇ ಹೋಗುತ್ತಿದೆ. ಒಳ್ಳೆಯದನ್ನು ಸ್ವೀಕರಿಸುವುದಕ್ಕಿಂತ ಕೆಟ್ಟದನ್ನು ಹೆಚ್ಚು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಸಿನಿಮಾರಂಗಕ್ಕೆ ಪೈರಸಿ ಎನ್ನುವುದು ಬಹಳ ಗಂಭೀರವಾಗಿ ಕಾಡುತ್ತಿದೆ. ಕೋಟ್ಯಾಂತರ ರೂಪಾಯಿ ಬಂಡವಾಳ ಹಾಕಿ ಸಿನಿಮಾ ಮಾಡುವ ನಿರ್ಮಾಪಕರು ಪೈರಸಿಯಿಂದ ತೊಂದರೆ ಅನುಭವಿಸುವ ಪರಿಸ್ಥಿತಿ ಬಂದಿದೆ. ಈ ದುಸ್ಥಿತಿಗೆ ಪರೋಕ್ಷವಾಗಿ ಟೆಲಿಕಾಂ ಕಂಪನಿಗಳು ಕಾರಣ ಎಂದು ರಾಬರ್ಟ್ ನಿರ್ಮಾಪಕ ಉಮಾಪತಿ ಗೌಡ ಗುಡುಗಿದ್ದಾರೆ.. ಮುಂದೆ ಓದಿ...

    ಹೆಚ್ಚು ಡೇಟಾ ಕೊಟ್ಟಿದ್ದೇ ತಪ್ಪು

    ಹೆಚ್ಚು ಡೇಟಾ ಕೊಟ್ಟಿದ್ದೇ ತಪ್ಪು

    ಕಡಿಮೆ ಬೆಲೆಗೆ ಮೊಬೈಲ್, ಕಡಿಮೆ ಬೆಲೆ ಜಿಬಿ ಗಟ್ಟಲೇ ಇಂಟರ್‌ನೆಟ್ ಆಫರ್‌ಗಳನ್ನು ಟೆಲಿಕಾಂ ಕಂಪನಿ ಕೊಡ್ತಿದೆ. ಇದರಿಂದ ಸದುಪಯೋಗಕ್ಕಿಂತ ದುರುಪಯೋಗವೇ ಹೆಚ್ಚಾಗುತ್ತಿದೆ ಎಂದು ನಿರ್ಮಾಪಕ ಉಮಾಪತಿ ಗೌಡ ಟೀಕಿಸಿದ್ದಾರೆ. ಟೆಲಿಕಾಂ ಕಂಪನಿಗಳು ಅಗ್ಗದ ಬೆಲೆಯಲ್ಲಿ ಇಂಟರ್‌ನೆಟ್ ಸೌಲಭ್ಯ ಕೊಡುತ್ತಿರುವ ಪರಿಣಾಮ ಪೈರಸಿ ಮಾಡುವುದು ಹಾಗೂ ಪೈರಸಿ ಕಾಪಿ ನೋಡುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    'ರಾಬರ್ಟ್'ಗೆ ಪೈರಸಿ ಕಾಟ: 3 ಸಾವಿರಕ್ಕೂ ಅಧಿಕ ಲಿಂಕ್ ಡಿಲೀಟ್'ರಾಬರ್ಟ್'ಗೆ ಪೈರಸಿ ಕಾಟ: 3 ಸಾವಿರಕ್ಕೂ ಅಧಿಕ ಲಿಂಕ್ ಡಿಲೀಟ್

    ಬಿಗ್ ಬ್ರದರ್ಸ್ ಕಾರಣ?

    ಬಿಗ್ ಬ್ರದರ್ಸ್ ಕಾರಣ?

    ಉಚಿತ ಡೇಟಾ ಯಾವ ಕಂಪನಿಯೂ ಕೊಡ್ತಿಲ್ಲ. ಮೊದಲಿಗೆ ಹೋಲಿಸಿಕೊಂಡರೆ ಕಡಿಮೆ ಬೆಲೆಗೆ ಹೆಚ್ಚು ಜಿಬಿ ಡೇಟಾ ಸಿಗುತ್ತಿದೆ ಎನ್ನುವುದು ಉಮಾಪತಿ ಅವರ ವಾದ. ಜನರು ತಮ್ಮ ಕೆಲಸಗಳನ್ನು ಬಿಟ್ಟು ಮೊಬೈಲ್‌ ಮೇಲೆ ಅವಲಂಬಿತರಾಗುತ್ತಿದ್ದಾರೆ. ಇಂದಿನ ಯುವಕರು ಹೆಚ್ಚು ಡೇಟಾ ಸಿಗುತ್ತಿರುವ ಕಾರಣ ಅದನ್ನು ಒಳ್ಳೆಯದಕ್ಕೂ ಬಳಸಿಕೊಳ್ಳುತ್ತಿಲ್ಲ. ಇದಕ್ಕೆಲ್ಲಾ ಟಲಿಕಾಂ ಕಂಪನಿಗಳು, ''ಸೋ ಕಾಲ್ಡ್ ಬಿಗ್ ಬ್ರದರ್ಸ್'' ಕಾರಣ ಎಂದು ಉಮಾಪತಿ ಖಂಡಿಸಿದ್ದಾರೆ. ಉಮಾಪತಿ ಅವರು ಹೇಳಿದ ಸೋ ಕಾಲ್ಡ್ ಬಿಗ್ ಬ್ರದರ್ಸ್ ಅನಿಲ್ ಅಂಬಾನಿ ಮತ್ತು ಮುಖೇಶ್ ಅಂಬಾನಿ ಎನ್ನುವುದು ಸಾಮಾನ್ಯರಿಗೂ ತಿಳಿಯುತ್ತದೆ.

    ಪೈರಸಿಯಿಂದ ನಮಗೆ ತೊಂದರೆಯಾಗಿಲ್ಲ

    ಪೈರಸಿಯಿಂದ ನಮಗೆ ತೊಂದರೆಯಾಗಿಲ್ಲ

    ರಾಬರ್ಟ್ ಸಿನಿಮಾ ಪೈರಸಿಯಾಗಿದೆ. ಅನಧಿಕೃತ ವೆಬ್‌ಸೈಟ್‌ಗಳಲ್ಲಿ ರಾಬರ್ಟ್ ಸಿನಿಮಾ ಎನ್ನಲಾದ ಲಿಂಕ್‌ಗಳು ಹರಿದಾಡುತ್ತಿವೆ. ಈ ಸಂಬಂಧ ಚಿತ್ರತಂಡ ಈಗಾಗಲೇ ಕ್ರಮ ತೆಗೆದುಕೊಂಡಿದೆ. ವಿಶೇಷ ತಂಡವೊಂದನ್ನು ರಚಿಸಿ, ಆ ಲಿಂಕ್‌ಗಳನ್ನು ಡಿಲೀಟ್ ಮಾಡುವ ಕೆಲಸ ಮಾಡುತ್ತಿದೆ. ''ಪೈರಸಿಯಿಂದ ನಮ್ಮ ಚಿತ್ರಕ್ಕೆ ಯಾವುದೇ ತೊಂದರೆಯಾಗಿಲ್ಲ. ನಮ್ಮ ಸಿನಿಮಾ ಚೆನ್ನಾಗಿದೆ. ಜನರು ಥಿಯೇಟರ್‌ನಲ್ಲೇ ನೋಡ್ತಿದ್ದಾರೆ' ಎಂದು ನಿರ್ಮಾಪಕ ತಿಳಿಸಿದ್ದಾರೆ.

    'ರಾಬರ್ಟ್' ಹೆಸರಲ್ಲಿ ನಡೆಯುತ್ತಿದೆ ಮೋಸ: ಎಚ್ಚರ ಎಂದ ನಿರ್ಮಾಪಕ'ರಾಬರ್ಟ್' ಹೆಸರಲ್ಲಿ ನಡೆಯುತ್ತಿದೆ ಮೋಸ: ಎಚ್ಚರ ಎಂದ ನಿರ್ಮಾಪಕ

    ಕಲೆಕ್ಷನ್‌ನಲ್ಲಿ ದಾಖಲೆ

    ಕಲೆಕ್ಷನ್‌ನಲ್ಲಿ ದಾಖಲೆ

    ರಾಬರ್ಟ್ ಸಿನಿಮಾ ಎರಡು ದಿನ 30 ಕೋಟಿಗೂ ಅಧಿಕ ಹಣ ಗಳಿಸಿದೆ. ಕರ್ನಾಟಕದಲ್ಲಿ ಮಾತ್ರ ಮೊದಲ ದಿನ 17 ಕೋಟಿ ಹಾಗೂ ಎರಡನೇ ದಿನ 12 ಕೋಟಿ ಬಾಚಿಕೊಂಡಿದೆ. ಶನಿವಾರ ಮತ್ತು ಭಾನುವಾರದ ಗಳಿಕೆ ಮತ್ತಷ್ಟು ಹೆಚ್ಚಾಗುವ ಲೆಕ್ಕಾಚಾರ ಇದೆ.

    Recommended Video

    ಹೊಸ ನಿರ್ದೇಶಕರ ಆಸೆಗೆ ನಿರಾಸೆ ಮೂಡಿಸಿದ ಚಾಲೆಂಜಿಂಗ್ ಸ್ಟಾರ್ | Filmibeat Kannada

    English summary
    Roberrt Piracy: Umpathi Gowda blames telecom companies free data reason behind rise in movie piracy.
    Saturday, March 13, 2021, 13:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X