For Quick Alerts
  ALLOW NOTIFICATIONS  
  For Daily Alerts

  ಬೇಸಿಗೆಯಲ್ಲಿ ಸ್ಟಾರ್ ನಟರ ಕಾಳಗ: ಒಂದೇ ತಿಂಗಳಲ್ಲಿ ಬರ್ತಿವೆ ಬಿಗ್ ಸಿನಿಮಾಗಳು

  |
  ಒಂದೇ ಟೈಮ್ ನಲ್ಲಿ ತೆರೆ ಮೇಲೆ ಬಿಗ್ ಸಿನಿಮಾಗಳು | YUVARATHNA | ROBERT | KOTIGOBBA |

  ಚಿತ್ರರಂಗದಲ್ಲಿ ಸ್ಟಾರ್ ವಾರ್, ಬಾಕ್ಸ್ ಆಫೀಸ್ ವಾರ್ ಎಲ್ಲಾ ಸಾಮಾನ್ಯ. ಅದರಲ್ಲೂ ಸ್ಯಾಂಡಲ್ ನಲ್ಲಿ ಸ್ಟಾರ್ ನಟರ ಸಿನಿಮಾಗಳು ಒಮ್ಮೆಗೆ ತೆರೆಗೆ ಬರಲು ಸಿದ್ಧವಾಗಿರುತ್ತವೆ. ಬಾಲಿವುಡ್, ಟಾಲಿವುಡ್, ಕಾಲಿವುಡ್ ನಲ್ಲಿ ಬಹುತೇಕ ಸಿನಿಮಾಗಳು ಸೆಟ್ಟೇರುವ ಸಮಯದಲ್ಲೆ ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿರುತ್ತೆ.

  'ಕೋಟಿಗೊಬ್ಬ 3' ಸಿನಿಮಾದ ಬಗ್ಗೆ ಸುದೀಪ್ ಟ್ವೀಟ್'ಕೋಟಿಗೊಬ್ಬ 3' ಸಿನಿಮಾದ ಬಗ್ಗೆ ಸುದೀಪ್ ಟ್ವೀಟ್

  ಆದರೆ ಸ್ಯಾಂಡಲ್ ವುಡ್ ನಲ್ಲಿ ರಿಲೀಸ್ ಬಗ್ಗೆ ಮೊದಲೆ ಪ್ಲಾನ್ ಮಾಡಿರುವುದಿಲ್ಲ. ಚಿತ್ರೀಕರಣ ಮುಗಿದ ಬಳಿಕ ಸಿನಿಮಾ ರಿಲೀಸ್ ಡೇಟ್ ನಿಗದಿ ಮಾಡುತ್ತಾರೆ. ಪ್ಲಾನ್ ಇಲ್ಲದೆ ದಿಢೀರನೆ ಎಂಟ್ರಿ ಕೊಡುವುದರಿಂದ ಬಾಕ್ಸ್ ಆಫೀಸ್ ವಾರ್ ಜೊತೆಗೆ ಉಳಿದ ಸಿನಿಮಾಗಳ ರಿಲೀಸ್ ಗೂ ದೊಡ್ಡ ಸಮಸ್ಯೆಯಾಗುತ್ತೆ. ಈ ವರ್ಷ ಸ್ಟಾರ್ ನಟ ಬಿಗ್ ಬಜೆಟ್ ಸಿನಿಮಾಗಳು ಒಂದೆ ಸಮಯದಲ್ಲಿ ತೆರೆಗೆ ಬರಲು ರೆಡಿಯಾಗುತ್ತಿವೆ. ಹಾಗಾದರೆ ಯಾವೆಲ್ಲ ಸಿನಿಮಾಗಳು? ಯಾವಾಗ? ಮುಂದೆ ಓದಿ..

  ಏಪ್ರಿಲ್ ನಲ್ಲಿ ಬರ್ತಿವೆ ಬಿಗ್ ಬಜೆಟ್ ಸಿನಿಮಾಗಳು

  ಏಪ್ರಿಲ್ ನಲ್ಲಿ ಬರ್ತಿವೆ ಬಿಗ್ ಬಜೆಟ್ ಸಿನಿಮಾಗಳು

  ಸ್ಯಾಂಡಲ್ ವುಡ್ ನಲ್ಲಿ ಈ ವರ್ಷ ಬಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾಗಳು ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರಲು ಸಿದ್ಧವಾಗಿವೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ, ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಮತ್ತು ದರ್ಶನ್ ಅಭಿನಯದ ರಾಬರ್ಟ್ ಸಿನಿಮಾಗಳು ಒಂದೆ ತಿಂಗಳಲ್ಲಿ, ಅದೂ ಒಂದೆ ಸಮಯದಲ್ಲಿ ತೆರೆಗೆ ಬರಲು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

  ಆಂಜನೇಯನ ಅವತಾರವೆತ್ತಲು ಮಾಂಸಾಹಾರ ತ್ಯಜಿಸಿದ್ದ 'ರಾಬರ್ಟ್' ದರ್ಶನ್.!ಆಂಜನೇಯನ ಅವತಾರವೆತ್ತಲು ಮಾಂಸಾಹಾರ ತ್ಯಜಿಸಿದ್ದ 'ರಾಬರ್ಟ್' ದರ್ಶನ್.!

  ಏಪ್ರಿಲ್ 9ಕ್ಕೆ ರಾಬರ್ಟ್?

  ಏಪ್ರಿಲ್ 9ಕ್ಕೆ ರಾಬರ್ಟ್?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ರಿಲೀಸ್ ಡೇಟ್ ಬಹುತೇಕ ಖಚಿತವಾಗಿದೆ. ಈಗಾಗಲೆ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ ರಾಬರ್ಟ್ ಸಿನಿಮಾ ಏಪ್ರಿಲ್ 9ಕ್ಕೆ ತೆರೆಗೆ ಬರುತ್ತಿದೆ. ಏಪ್ರಿಲ್ 10 ಗುಡ್ ಫ್ರೈಡೇ, ವಿಶೇಷ ದಿನದ ಪ್ರಯುಕ್ತ ರಾಬರ್ಟ್ ಅಭಿಮಾನಿಗಳ ಮುಂದೆ ಬರಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೆ ಚಿತ್ರೀಕರಣ ಮುಗಿಸಿರುವ ರಾಬರ್ಟ್ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ತರುಣ್ ಸಾರಥ್ಯದಲ್ಲಿ ಸಿನಿಮಾ ಮೂಡಿ ಬರುತ್ತಿರುವ ಸಿನಿಮಾ.

  ಏಪ್ರಿಲ್ 10ಕ್ಕೆ ಕೋಟಿಗೊಬ್ಬ-3

  ಏಪ್ರಿಲ್ 10ಕ್ಕೆ ಕೋಟಿಗೊಬ್ಬ-3

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾ ಕೂಡ ಏಪ್ರಿಲ್ ನಲ್ಲಿ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ವಿಶೇಷ ಅಂದರೆ ಕೋಟಿಗೊಬ್ಬ-3 ಏಪ್ರಿಲ್ 10 ಗುಡ್ ಫ್ರೈಡೇ ದಿನ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ರಾಬರ್ಟ್ ರಿಲೀಸ್ ಆದ ಮರು ದಿನವೆ ಕೋಟಿಗೊಬ್ಬ-3 ತೆರೆಗೆ ಬರಲು ರೆಡಿಯಾಗಿದೆ, ಆದರೆ ಈ ಬಗ್ಗೆ ಚಿತ್ರತಂಡ ಇನ್ನು ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ. ಒಂದು ವೇಳೆ ರಾಬರ್ಟ್ ಮತ್ತು ಕೋಟಿಗೊಬ್ಬ-3 ಒಂದೆ ಸಮಯದಲ್ಲಿ ತೆರೆಗೆ ಬಂದರೆ ಬಾಕ್ಸ್ ವಾರ್ ಜೊತೆಗೆ ಅಭಿಮಾನಿಗಳ ವಾರ್ ಕೂಡ ಜೋರಾಗುವ ಸಾಧ್ಯತೆ ಇದೆ.

  ಪವರ್ ಸ್ಟಾರ್ ಫ್ಯಾನ್ಸ್ ಗೆ ಗುಡ್ ನ್ಯೂಸ್: ಕಿರುಚಿತ್ರವಾಗಿದೆ ಪುನೀತ್ ಜೀವನಚರಿತ್ರೆ.!ಪವರ್ ಸ್ಟಾರ್ ಫ್ಯಾನ್ಸ್ ಗೆ ಗುಡ್ ನ್ಯೂಸ್: ಕಿರುಚಿತ್ರವಾಗಿದೆ ಪುನೀತ್ ಜೀವನಚರಿತ್ರೆ.!

  ಏಪ್ರಿಲ್ ನಲ್ಲಿ ಯುವರತ್ನ ಎಂಟ್ರಿ ಸಾಧ್ಯತೆ

  ಏಪ್ರಿಲ್ ನಲ್ಲಿ ಯುವರತ್ನ ಎಂಟ್ರಿ ಸಾಧ್ಯತೆ

  ಪವರ್ ಸ್ಟಾರ್ ಪುನೀತ್ ಅಭಿನಯದ 'ಯುವರತ್ನ' ಸಿನಿಮಾ ಕೂಡ ಏಪ್ರಿಲ್ ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಸಂತೋಷ್ ಆನಂದ್ ರಾಮ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ 'ಯುವರತ್ನ' ಸಿನಿಮಾ ಕೊನೆಯ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ. ಚಿತ್ರೀಕರಣ ಮುಗಿ ಪೋಸ್ಟ್ ಪ್ರೊಡಕ್ಷನಲ್ಲಿ ಬ್ಯುಸಿಯಾಗುವ ಯುವರತ್ನ ಬೇಸಿಗೆಯಲ್ಲಿ ರಿಲೀಸ್ ಮಾಡುವ ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಕೂಡ ಏಪ್ರಿಲ್ ನಲ್ಲಿ ಬಂದರೆ ದರ್ಶನ್ ಮತ್ತು ಸುದೀಪ್ ಜೊತೆ ಪುನೀತ್ ಕೂಡ ಫೈಟ್ ಮಾಡಬೇಕಾಗುತ್ತೆ.

  English summary
  Darshan Starrer Robert, Sudeep starrer Kotigobba-3 and Puneet starrer Yuvarathna movies are release same time on April.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X