Don't Miss!
- News
ತ್ರಿಪುರಾ ವಿಧಾನಸಭೆ ಚುನಾವಣೆ: 17 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
- Sports
ಮತ್ತೊಮ್ಮೆ ನಮಗೆ ಆತನೇ ಬಲು ದೊಡ್ಡ ಕಂಟಕ: ಭಾರತೀಯ ಆಟಗಾರನ ಬಗ್ಗೆ ಆಸಿಸ್ ಕ್ರಿಕೆಟಿಗನ ಆತಂಕ!
- Finance
ಅದಾನಿ ಗ್ರೂಪ್ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್ಗಳು
- Technology
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Automobiles
ಬಾಕ್ಸ್ ಆಫೀಸ್ನಲ್ಲಿ 'ಪಠಾಣ್' ಅಬ್ಬರ: ಈ ಚಿತ್ರದಲ್ಲಿ ಕಾಣಿಸಿಕೊಂಡ ಆಕರ್ಷಕ ಕಾರುಗಳಿವು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಾಕಿಂಗ್ ಜೋಡಿಗೆ 6ನೇ ವಿವಾಹ ವಾರ್ಷಿಕೋತ್ಸವ: 'ಮದುವೆ ಜೀವನ ಮ್ಯಾಜಿಕಲ್ ಅನಿಸಿದರೂ ರಿಯಲ್' ಎಂದ ರಾಧಿಕಾ ಪಂಡಿತ್!
ಸ್ಯಾಂಡಲ್‌ವುಡ್‌ನ ಸೂಪರ್‌ಸ್ಟಾರ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟು ಇಂದಿಗೆ (ಡಿಸೆಂಬರ್ 9)6 ವರ್ಷಗಳಾಗಿವೆ. ಅದೆಷ್ಟೇ ಬ್ಯುಸಿಯಾಗಿದ್ದರೂ, ಕೌಟುಂಬಿಕ ಜೀವನವನ್ನು ಅಷ್ಟೇ ಖುಷಿ ಖುಷಿಯಾಗಿ ನಿಭಾಯಿಸುತ್ತಿದ್ದಾರೆ.
6ನೇ ವಿವಾಹ ವಾರ್ಷಿಕೋತ್ಸವದ ಈ ಸಂದರ್ಭದಲ್ಲಿ ರಾಧಿಕಾ ಪಂಡಿತ್ ತನ್ನ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಹಾಗೇ ಪತಿ ರಾಕಿಂಗ್ ಸ್ಟಾರ್ ಯಶ್‌ಗೆ ಥ್ಯಾಂಕ್ಯೂ ಕೂಡ ಹೇಳಿದ್ದಾರೆ. ರಾಧಿಕಾ ಪಂಡಿತ್ ಹಾಗೂ ಯಶ್ ಜೊತೆಯಿರುವ ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಯಶ್ ಹಾಗೂ ರಾಧಿಕಾ ಪಂಡಿತ್ ಇಬ್ಬರೂ ಹೆಚ್ಚು ಕಡಿಮೆ ಒಟ್ಟಿಗೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಹಾಗೇ ಸಿನಿಮಾಗೂ ಕೂಡ ಕಾಲಿಟ್ಟಿದ್ದರು. ಇಲ್ಲಿಂದ ಒಟ್ಟೊಟ್ಟಿಗೆ ಯಶ್ ಹಾಗೂ ರಾಧಿಕಾ ಪಂಡಿತ್ ಪಯಣ ವೈವಾಹಿಕ ಜೀವನದವರೆಗೂ ಸಾಗಿ ಬಂದಿದೆ. 6ನೇ ವರ್ಷದ ಕೌಟುಂಬಿಕ ಜೀವನದ ಈ ಶುಭ ಸಂದರ್ಭದಲ್ಲಿ ಪತಿ ಯಶ್‌ಗೆ ಸ್ವೀಟ್ ಆಗಿ ನಾಲ್ಕು ಸಾಲುಗಳನ್ನು ಬರೆದಿದ್ದಾರೆ.

'ಮ್ಯಾಜಿಕಲ್ ಆದರೂ ರಿಯಲ್' ಎಂದ ರಾಧಿಕಾ
6ನೇ ವಿವಾಹ ವಾರ್ಷಿಕೋತ್ಸವದ ಈ ಸಂದರ್ಭದಲ್ಲಿ ರಾಧಿಕಾ ಪಂಡಿತ್ ಫುಲ್ ಖುಷಿಯಾಗಿದ್ದಾರೆ. ಹೀಗಾಗಿ ಇನ್‌ಸ್ಟಾಗ್ರಾಂನಲ್ಲಿ ಪತಿ ಯಶ್ ಜೊತೆಗಿನ ಫೋಟೊಗಳನ್ನು ಹಂಚಿಕೊಂಡಿದ್ದು, ನಾಲ್ಕು ಸಾಲುಗಳನ್ನು ಬರೆದುಕೊಂಡಿದ್ದಾರೆ. "ನಾವಿಬ್ಬರೂ ಹೀಗೆನೇ.. ನಾನು ಸ್ವಲ್ಪ ಫಿಲ್ಮಿ, ನಾವು ಸ್ವಲ್ಪ ತಮಾಷೆ ಅಂತ ಅನಿಸಬಹುದು, ಸ್ವಲ್ಪ ಆಧ್ಯಾತ್ಮಿಕ ಅಂತ ಅನಿಸಬಹುದು, ಸ್ವಲ್ಪ ಗಂಭೀರ ಅಂತ ಅನಿಸಬಹುದು. ಆದರೆ, ಸಿಕ್ಕಾಪಟ್ಟೆ ರಿಯಲ್ ಆಗಿದ್ದೇವೆ. ಈ 6 ವರ್ಷಗಳ ವೈವಾಹಿಕ ಜೀವನವನ್ನು ಮ್ಯಾಜಿಕಲ್ ಅನಿಸಿದರೂ ರಿಯಲ್ ಮಾಡಿದ್ದಕ್ಕೆ ಧನ್ಯವಾದಗಳು" ಎಂದು ಹೇಳಿದ್ದಾರೆ.

ಯಶ್, ರಾಧಿಕಾ ಭೇಟಿಯಾಗಿದ್ದೆಲ್ಲಿ?
ಯಶ್ ಹಾಗೂ ರಾಧಿಕಾ ಪಂಡಿತ್ ಇಬ್ಬರೂ ಕಿರುತೆರೆಯಿಂದಲೇ ಲೈಮ್ ಲೈಟ್‌ಗೆ ಬಂದವರು. ರಾಧಿಕಾ ಪಂಡಿತ್ ಮೊದಲು ಶೂಟಿಂಗ್ ಸೆಟ್ಟಿನಲ್ಲಿ ಯಶ್ ನೋಡಿದ್ದರು. ಆಗ ಯಶ್ ಮಾತಾಡಿಸಲು ಪ್ರಯತ್ನ ಪಟ್ಟಿದ್ದರು. ಆ ವೇಳೆ ಯಶ್‌ಗೆ ಸಿಕ್ಕಾಪಟ್ಟೆ ಜಂಬ ಇದೆ ಎಂದುಕೊಂಡಿದ್ದರು. ಇಬ್ಬರೂ ಒಟ್ಟಿಗೆ ಕೆಲಸ ಮಾಡೋಕೆ ಶುರು ಮಾಡಿದ ಬಳಿಕ ಸ್ನೇಹ ಬೆಳೆದಿತ್ತು. ಅದೇ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಪ್ರೇಮ ಪಕ್ಷಿಗಳಾಗಿದ್ದ ಈ ಜೋಡಿ ಡಿಸೆಂಬರ್ 9, 2016ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು.

ನಟನೆಗೆ ಬ್ರೇಕ್ ಕೊಟ್ಟರೂ ಅಭಿಮಾನಿಗಳು ಕಮ್ಮಿಯಾಗಿಲ್ಲ
ರಾಧಿಕಾ ಪಂಡಿತ್ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಸಿನಿಮಾದಿಂದ ದೂರ ಉಳಿದಿದ್ದಾರೆ. ಮದುವೆ ಬಳಿಕ ಕೇವಲ ಒಂದೇ ಸಿನಿಮಾ 'ಆದಿ ಲಕ್ಷ್ಮಿ ಪುರಾಣ'ದಲ್ಲಿ ಕಾಣಿಸಿಕೊಂಡಿದ್ದರು. ರಾಕ್‌ಲೈನ್ ವೆಂಕಟೇಶ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಅಲ್ಲಿಂದ ಮತ್ತೆ ರಾಧಿಕಾ ಪಂಡಿತ್ ಬಣ್ಣ ಹಚ್ಚಿಕೊಂಡಿಲ್ಲ. ಹೀಗಾಗಿ ಮುಂದೆ ರಾಧಿಕಾ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬಹುದು ಎಂದು ಅವರ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಸಿನಿಮಾದಲ್ಲಿ ನಟಿಸೋಕೆ ಅದ್ಯಾವಾಗ ಗ್ರೀನ್ ಸಿಗ್ನಲ್ ಕೊಡುತ್ತಾರೋ ಗೊತ್ತಿಲ್ಲ. ಸದ್ಯಕ್ಕಂತೂ ಆ ಸುಳಿವು ಇಲ್ಲ.

ಯಶ್ ಸಿಕ್ಕಾಪಟ್ಟೆ ಬ್ಯುಸಿ
'ಕೆಜಿಎಫ್ 2' ಸಿನಿಮಾ ಮೂಲಕ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿ ಫೇಮಸ್ ಆಗಿದ್ದಾರೆ. 2022ರಲ್ಲಿ ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದ ಯಶ್ ಮುಂದಿನ ಸಿನಿಮಾಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. 'ಕೆಜಿಎಫ್ 2' ರಿಲೀಸ್ ಆಗಿ ಹೆಚ್ಚು ಆರೇಳು ತಿಂಗಳಾದರೂ ಇನ್ನೂ ಹೊಸ ಸಿನಿಮಾ ಅನೌನ್ಸ್ ಮಾಡಿಲ್ಲ. ಹೀಗಾಗಿ ರಾಕಿಂಗ್ ಸ್ಟಾರ್ ಅಭಿಮಾನಿಗಳು 19ನೇ ಸಿನಿಮಾ ಯಾವುದು? ಯಾವಾಗ? ರಿಲೀಸ್ ಆಗುತ್ತೆ ಅನ್ನೋದನ್ನು ಎದುರು ನೋಡುತ್ತಿದ್ದಾರೆ.