»   »  ಬಾಕ್ಸ್ ಆಫೀಸಲ್ಲಿ ಧೂಳೆಬ್ಬಿಸಲು ಬರುತ್ತಿದೆ ಗಜಕೇಸರಿ

ಬಾಕ್ಸ್ ಆಫೀಸಲ್ಲಿ ಧೂಳೆಬ್ಬಿಸಲು ಬರುತ್ತಿದೆ ಗಜಕೇಸರಿ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಧೂಳೆಬ್ಬಿಸಲು ಬರುತ್ತಿದೆ ಮತ್ತೊಂದು ಭಾರಿ ಬಜೆಟ್ ಚಿತ್ರ. ಇಷ್ಟು ದಿನ 'ಮಾಣಿಕ್ಯ' ಚಿತ್ರದ ಸಲುವಾಗಿ ಹಿಂದಡಿಯಿಟ್ಟಿದ್ದ ರಾಕಿಂಗ್ ಸ್ಟಾರ್ ಯಶ್ ಅವರ ಗಜಕೇಸರಿ ಚಿತ್ರದ ಬಿಡುಗಡೆಗೆ ಇದೀಗ ದಾರಿ ಸುಗಮವಾಗಿದೆ. ಈ ಚಿತ್ರ ಮೇ.23ಕ್ಕೆ ಚಿತ್ರಮಂದಿರಕ್ಕೆ ದಾಂಗುಡಿ ಇಡುತ್ತಿದೆ.

ತನ್ನ ಮೇಕಿಂಗ್ ಹಾಗೂ ಟೈಟಲ್ ಮೂಲಕ ಚಿತ್ರರಸಿಕರ ಗಮನಸೆಳೆದಿರುವ ಚಿತ್ರ ಗಜಕೇಸರಿ. ಯಶ್ ಹಾಗೂ ಅಮೂಲ್ಯ ಚಿತ್ರ‌ದ ನಾಯಕಿ. ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸಿರುವ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಖ್ಯಾತರಾಗಿರುವ ಎಸ್.ಕೃಷ್ಣ ಕಥೆ ಬರೆದು ನಿರ್ದೇಶಿಸಿದ್ದು ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ['ಗಜಕೇಸರಿ'ಯ ಗರ್ವದ ಮರ್ಮ ನಿಮಗ್ಗೊತ್ತಾ?]


ಇನ್ನು ಗಜಕೇಸರಿ ಚಿತ್ರದ ವಿಶೇಷಗಳು ಒಂದೆರಡಲ್ಲ. ಬಹುತೇಕ ಚಿತ್ರೀಕರಣ ಥಾಯ್ಲೆಂಡ್ ನ‌ಲ್ಲಿ ನಡೆಸಲಾಗಿದೆ. ಥಾಯ್ಲೆಂಡಿನಲ್ಲಿ ಇಲ್ಲಿಗಿಂತ ಚೆನ್ನಾಗಿ ಪಳಗಿದ ಆನೆಗಳಿರುವುದು ಒಂದು ಕಾರಣ ಎನ್ನುತ್ತದೆ ಚಿತ್ರ ತಂಡ.

ಥಾಯ್ಲೆಂಡಿನ ಎಲಿಫೆಂಟ್ ಪಾರ್ಕ್ ನಲ್ಲಿ 30 ಆನೆಗಳ ನಡುವೆ ಚಿತ್ರೀಕರಣ ನಡೆಸಲಾಗಿದೆ. ಕೇರಳದ 15 ಅಡಿ ಎತ್ತರದ ಅರ್ಜುನ ಎಂಬ ಆನೆ ಗಜಕೇಸರಿ ಯಶ್ ಸಂಗಾತಿಯಾಗಿ ವಿಶೇಷವಾಗಿ ಕಾಣಿಸಿಕೊಳ್ಳಲಿದೆ.

ಸತ್ಯಹೆಗ್ಡೆ ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ಹರ್ಷ ನೃತ್ಯ ನಿರ್ದೇಶನ, ನಂಜುಂಡಸ್ವಾಮಿ ಕಲಾನಿರ್ದೇಶನ, ಗಣೇಶ್, ರವಿವರ್ಮ ಸಾಹಸ ನಿರ್ದೇಶನ ಹಾಗೂ ವಿಜಯಕುಮಾರ್, ಭರತ್ ಅವರ ನಿರ್ಮಾಣ ನಿರ್ವಹಣೆ 'ಗಜಕೇಸರಿ' ಚಿತ್ರಕ್ಕಿದೆ.

<center><iframe width="100%" height="360" src="//www.youtube.com/embed/Tog4G2HkbL8?feature=player_embedded" frameborder="0" allowfullscreen></iframe></center>

ಯಶ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಅಮೂಲ್ಯ. ಶ್ರೀನಿವಾಸ ಪ್ರಭು, ರಂಗಾಯಣರಘು, ಅಶೋಕ್, ಶಿವರಾಂ, ಸಾಧುಕೋಕಿಲ, ಪ್ರಭಾಕರ್, ಜಾನ್ ವಿಜಯ್, ಶಬಾಸ್ ಖಾನ್ ಮುಂತಾದವರು ಈ ಚಿತ್ರದ ತಾರಾಬಳಗಗದಲ್ಲಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Rocking Star Yash lead much expected Kannada epic action movie 'Gajakesari' will release on 23rd May. The movie directed by cinematographer Krishna of Mungaaru Male fame and produced by Jayanna. The film also prominently features an elephant named Arjuna from Waynad, Kerala.&#13;
Please Wait while comments are loading...