»   » ಮೂರನೇ ಬಾರಿ ಗೋವಾದಲ್ಲಿ ರಾಕಿಂಗ್ ಸ್ಟಾರ್ ಯಶ್

ಮೂರನೇ ಬಾರಿ ಗೋವಾದಲ್ಲಿ ರಾಕಿಂಗ್ ಸ್ಟಾರ್ ಯಶ್

By: ಉದಯರವಿ
Subscribe to Filmibeat Kannada

ಚಿತ್ರರಂಗದ ಪಾಲಿನ ಸ್ವರ್ಗ ಎಂದರೆ ಗೋವಾ. ಕೇವಲ ಚಿತ್ರರಂಗದ ಪಾಲಿಗಷ್ಟೇ ಅಲ್ಲ, ಪ್ರೇಮಿಗಳ ಸ್ವರ್ಗವೂ ಹೌದು. ನಮ್ಮ ರಾಕಿಂಗ್ ಸ್ಟಾರ್ ಯಶ್ ಪಾಲಿಗೂ ಇದು ಹಾಟ್ ಫೇವರಿಟ್. ಇದುವರೆಗೂ ಎರಡು ಬಾರಿ ಅಲ್ಲಿಗೆ ಹೋಗಿ ಬಂದಿರುವ ಯಶ್ ಇದೀಗ ಮೂರನೇ ಬಾರಿ ಪ್ರಯಾಣಕ್ಕೆ ಸಿದ್ಧವಾಗಿದ್ದಾರೆ.

ಈ ಹಿಂದೆ ಗೋವಾದಲ್ಲಿ ರಾಧಿಕಾ ಪಂಡಿತ್ ಜೊತೆ ಯಶ್ ಕಾಣಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ತಮ್ಮ ಮಹತ್ವಾಕಾಂಕ್ಷಿ ಚಿತ್ರ 'ಮಾಸ್ಟರ್ ಪೀಸ್' ಚಿತ್ರದ ಶೂಟಿಂಗ್ ಗಾಗಿ ಗೋವಾಗೆ ತೆರಳಲಿದ್ದಾರೆ. ಮೈಕೊರೆಯುವ ಚಳಿಯಲ್ಲಿ ರಾಧಿಕಾ ಜೊತೆಗೆ ಹೊಸ ವರ್ಷದ ಆಚರಣೆಗೆ ಹೋಗಿದ್ದರು. [ಯಶ್ ಹುಟ್ಟುಹಬ್ಬಕ್ಕೆ 'ಮಾಸ್ಟರ್ ಪೀಸ್' ಗಿಫ್ಟ್]


ಆದರೆ ಈಗ ಮೈ ಸುಡುವ ಬಿಸಿಲು. ಆದರೂ ಕಥೆ ಈ ಪ್ರದೇಶವನ್ನು ಬಯಸುವುದರಿಂದ ಹೋಗಲೇಬೇಕಾಗಿದೆ ಎನ್ನುತ್ತಾರೆ ಯಶ್. ಒಂದು ತಿಂಗಳ ಕಾಲ ಅಲ್ಲಿ ಚಿತ್ರೀಕರಣ. ಇದರಲ್ಲಿ ನನ್ನ ವೈಯಕ್ತಿಕ ಹಿತಾಸಕ್ತಿಯೇನೂ ಇಲ್ಲ, ಸ್ಕ್ರಿಪ್ಟ್ ಗಾಗಿ ಮತ್ತೊಮ್ಮೆ ಗೋವಾಗೆ ಹೋಗುತ್ತಿದ್ದೇನೆ. ಈ ಹಿಂದೆ 'ರಾಜಧಾನಿ' ಹಾಗೂ 'ರಾಮಾಚಾರಿ' ಚಿತ್ರಗಳನ್ನು ಇಲ್ಲೇ ಚಿತ್ರೀಕರಿಸಲಾಗಿತ್ತು ಎನ್ನುತ್ತಾರೆ ಯಶ್.


ಮಾಸ್ಟರ್ ಪೀಸ್ ಗೂ ಗೋವಾ ನಂಟು

ಆ ಎರಡೂ ಚಿತ್ರಗಳು ಸೂಪರ್ ಹಿಟ್ ಆಗಿದ್ದು ಗೊತ್ತೇ ಇದೆ. ಇದೀಗ ಮಾಸ್ಟರ್ ಪೀಸ್ ಚಿತ್ರವನ್ನೂ ಅಲ್ಲೇ ಚಿತ್ರೀಕರಿಸಲಾಗುತ್ತಿದೆ. ಇದೂ ಸೂಪರ್ ಹಿಟ್ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂಬ ವಿಶ್ವಾಸ ಚಿತ್ರತಂಡದ್ದು.


ರೊಮ್ಯಾಂಟಿಕ್ ಮೂಡ್ ನಲ್ಲಿ ಜೋಡಿ

ಹೊಸ ವರ್ಷದ ಸಂಭ್ರಮಕ್ಕಾಗಿ ರಾಧಿಕಾ ಪಂಡಿತ್ ಕುಟುಂಬದ ಜೊತೆ ಯಶ್ ಸಹ ಗೋವಾಗೆ ಭೇಟಿ ನೀಡಿದ್ದರು. ಇಬ್ಬರೂ ರೊಮ್ಯಾಂಟಿಕ್ ಮೂಡ್ ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಥ್ರಿಲ್ ಕೊಟ್ಟಿದ್ದರು.


ಎಲ್ಲರ ಕಣ್ಣರಳಿಸಿದ್ದ ಯಶ್, ರಾಧಿಕಾ

ರಾಧಿಕಾ ಅವರ ತಂದೆತಾಯಿ, ಒಂದಷ್ಟು ಗೆಳೆಯರು ಯಶ್ ಗೆ ಜೊತೆಯಾಗಿದ್ದರು. ಗೋವಾದಲ್ಲಿ ಎಲ್ಲರೂ ಸಖತ್ ಎಂಜಾಯ್ ಮಾಡಿದ ಫೋಟೋಗಳು ಬಿಡುಗಡೆಯಾಗಿದ್ದವು. ಇವರಿಬ್ಬರೂ ಯಾವಾಗ ಮದುವೆಯಾಗುತ್ತಾರೆ ಎಂದು ಎಲ್ಲರೂ ಕಣ್ಣರಳಿಸಿ ನೋಡುವಂತಾಗಿತ್ತು.


ಯಶ್ ಚಿತ್ರಗಳಿಗೆ ಗೋವಾ ಸೆಂಟಿಮೆಂಟ್?

ಸಿನಿಮಾ ಮಂದಿಗೆ ಸೆಂಟಿಮೆಂಟ್ ಜಾಸ್ತಿ. ಒಂದು ಚಿತ್ರ ಇಂತಹ ಕಡೆ ಚಿತ್ರೀಕರಿಸಿದ್ದಕ್ಕೇ ಹಿಟ್ ಆಯಿತು ಎಂದು ಅವರ ಮನಸ್ಸಿಗೆ ಬಂದಿದ್ದರೆ, ಸ್ಕ್ರಿಪ್ಟ್ ಬಯಸಲಿ ಬಿಡಲಿ ಮುಂದಿನ ಚಿತ್ರವನ್ನೂ ಅಲ್ಲೇ ಚಿತ್ರೀಕರಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.


ಮಂಜು ಮಾಂಡವ್ಯ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ

ಬಹುಶಃ ಮಾಸ್ಟರ್ ಪೀಸ್ ಚಿತ್ರವನ್ನೂ ಈ ಉದ್ದೇಶಕ್ಕೆ ಚಿತ್ರೀಕರಿಸಲು ಹೋಗಿರಬಹುದಾ? ಕಾಲವೇ ಉತ್ತರ ಹೇಳಬೇಕು. ಸಂಭಾಷಣಾಕಾರನಾಗಿದ್ದ ಮಂಜು ಮಾಂಡವ್ಯ 'ಮಾಸ್ಟರ್ ಪೀಸ್' ಚಿತ್ರದ ಮೂಲಕ ಮೊದಲ ಬಾರಿ ಡೈರೆಕ್ಟರ್ ಕುರ್ಚಿ ಮೇಲೆ ಕೂರುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಗಾಗಿ 'ನಿನ್ನಿಂದಲೇ' ಚಿತ್ರಕ್ಕೆ 'ಹೊಂಬಾಳೆ ಫಿಲ್ಮ್ಸ್'ನಡಿ ಬಂಡವಾಳ ಹಾಕಿದ್ದ ವಿಜಯ್ ಕಿರಗಂದೂರ್ 'ಮಾಸ್ಟರ್ ಪೀಸ್'ನ ರಿಚ್ಚಾಗಿ ನಿರ್ಮಾಣ ಮಾಡುತ್ತಿದ್ದಾರೆ.


ಶಾನ್ವಿ ಶ್ರೀವಾತ್ಸವ್ ಚಿತ್ರದ ನಾಯಕಿ

ರಾಕಿಂಗ್ ಸ್ಟಾರ್ ಜೊತೆ ಮೊದಲ ಬಾರಿ ಜೋಡಿಯಾಗಿರುವುದು ನಟಿ 'ಶಾನ್ವಿ ಶ್ರೀವಾಸ್ತವ'. 'ಇನ್ ಕ್ವಿಲಾಬ್ ಜಿಂದಾಬಾದ್' ಅನ್ನುವ ಘೋಷದಿಂದ ಶುರುವಾಗುವ ಟೀಸರ್ ನಲ್ಲಿ ಮಂಡ್ಯದ ಸಿಡಿಗುಂಡು ಅಕ್ಷರಶಃ ಸಿಡಿದಿದ್ದಾರೆ. 'ಯಶ್' ಹುಟ್ಟುಹಬ್ಬದಂದೇ ಇಂತಹ 'ಮಾಸ್ಟರ್ ಪೀಸ್' ಗಿಫ್ಟ್ ಸಿಕ್ಕಿರುವಾಗ ಅಭಿಮಾನಿಗಳಿಗೆ ಇದ್ದಕ್ಕಿಂತ ಬೇರೇನು ಬೇಕು ಹೇಳಿ..?!


English summary
Rocking Star Yash lead Kannada film Masterpiece are gearing up for a month-long shoot in Goa. Earlier Rajadhani and for Mr and Mrs Ramachari in shot in Goa. Yash visiting third time to Goa for shooting.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada