»   » ಮಾ.9ರಿಂದ ಯಶ್ 'ಮಾಸ್ಟರ್ ಪೀಸ್' ಮೇಕಿಂಗ್ ಶುರು

ಮಾ.9ರಿಂದ ಯಶ್ 'ಮಾಸ್ಟರ್ ಪೀಸ್' ಮೇಕಿಂಗ್ ಶುರು

By: ಜೀವನರಸಿಕ
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಸ್ಯಾಂಡಲ್ ವುಡ್ ಬಾಕ್ಸಾಫೀಸ್ ಕಾ ಸುಲ್ತಾನ್. ಯಶ್ ಮುಟ್ಟಿದ್ದೆಲ್ಲಾ ಚಿನ್ನವಾಗ್ತಿರೋ ಸಮಯ ಇದು. ಇದಕ್ಕೆಲ್ಲ ಕಾರಣ ಯಶ್ ಇಡೋ ಎಚ್ಚರಿಕೆಯ ಹೆಜ್ಜೆಗಳು. ತೆರೆಯ ಮೇಲೆ ಮತ್ತು ತೆರೆಯ ಹಿಂದೇನೂ ಯಶ್ ಸಖತ್ ಲೆಕ್ಕಾಚಾರದ ಬದುಕು ಕಟ್ಟಿಕೊಳ್ತಿರೋ ವ್ಯಕ್ತಿ.

ಸದ್ಯ ಯಶ್ ಅಭಿನಯದ 'ಮಾಸ್ಟರ್ ಪೀಸ್' ಸಿನಿಮಾ ಹೇಗಿರುತ್ತೆ. ಸಿನಿಮಾದಲ್ಲಿ ಯಶ್ ಏನಾಗಿರ್ತಾರೆ. ಫಸ್ಟ್ ಲುಕ್ ನಲ್ಲಿ ಭಗತ್ ಸಿಂಗ್ ಗೆಟಪ್ ನಲ್ಲಿರೋ ಯಶ್ ಗೆ ಯಾವ್ಯಾವ ಶೇಡ್ ಗಳಿರ್ತವೆ. ಇದು ಮತ್ತೊಂದು ಮಾಸ್ ಸಿನಿಮಾನಾ? [ಯಶ್ ಹುಟ್ಟುಹಬ್ಬಕ್ಕೆ 'ಮಾಸ್ಟರ್ ಪೀಸ್' ಗಿಫ್ಟ್]


Rocking Star Yash's Masterpiece starts from 9th March

ಇಂತಹಾ ಹತ್ತು ಹಲವು ಕುತೂಹಲಗಳನ್ನ ಮೂಡಿಸ್ತಿದೆ ರಾಕಿಂಗ್ ಸ್ಟಾಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಮಾಸ್ಟರ್ ಪೀಸ್. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುವ ದಿನ ದೂರವಿಲ್ಲ. ಶೂಟಿಂಗ್ ಆರಂಬಿಸೋಕೆ ಎಲ್ಲ ತಯಾರಿ ಮಾಡಿಕೊಳ್ತಿದ್ದಾರೆ ನಿರ್ದೇಶಕ ಮಂಜು ಮಾಂಡವ್ಯ.


ಈಗಾಗಲೇ ಚಿತ್ರಕ್ಕೆ ನಾಯಕಿಯನ್ನಾಗಿ 'ಚಂದ್ರಲೇಖ' ಚೆಲುವೆ ಶಾನ್ವಿ ಶ್ರೀವಾಸ್ತವ್ ರನ್ನ ಆಯ್ಕೆ ಮಾಡಿದ್ದಾರೆ. ಸದ್ಯಕ್ಕಿರೋ ಮಾಹಿತಿಯ ಪ್ರಕಾರ ಯಶ್ ಚಿತ್ರದಲ್ಲಿ ಭಗತ್ ಸಿಂಗ್ ಪಾತ್ರ ಮಾಡ್ತಿದ್ದಾರೆ. ಈ ಕುರಿತಾ ಸಂಪೂರ್ಣ ಮಾಹಿತಿಗಳು ಸದ್ಯದಲ್ಲೇ ಹೊರಬರಲಿವೆ. [ಚಂದ್ರಲೇಖ ಚಿತ್ರ ವಿಮರ್ಶೆ]


Masterpiece trailer

ಈಗಾಗಲೆ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು "ಇನ್ ಖಿಲಾಬ್ ಜಿಂದಾಬಾದ್" ಅನ್ನುವ ಘೋಷವಾಕ್ಯದಿಂದ ಶುರುವಾಗುವ ಟೀಸರ್ ನಲ್ಲಿ 'ರಾಜಾಹುಲಿ' ಸಿಡಿದಿದ್ದಾರೆ. ಖಾದಿ ತೊಟ್ಟು, ಹುರಿಗಟ್ಟಿದ ಮೀಸೆ ಬಿಟ್ಟು, ತಲೆಗೆ ಪೇಟಾ ತೊಟ್ಟು, ಕೈಲಿ ಬಂದೂಕು ಹಿಡಿದಿರುವ ಯಶ್ ಕ್ರಾಂತಿಕಾರಿಯಾಗಿ ಕಾಣಿಸಿಕೊಂಡಿರುವ ಲುಕ್ ಖಡಕ್ ಆಗಿದೆ.
English summary
Rocking Star Yash's upcoming movie 'Masterpiece' shooting starts from 9th March. Kannada dialogue writer Manju Mandavya directed movie is being produced by Vijay Kumar Kiragandur under the Hombale Films Banner.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada