»   » ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ 'ಕೆಜಿಎಫ್'

ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ 'ಕೆಜಿಎಫ್'

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ಹೊಸ ಭರವಸೆ ಮೂಡಿಸುತ್ತಿರುವ ನಟ ರಾಕಿಂಗ್ ಸ್ಟಾರ್ ಯಶ್. 'ಗಜಕೇಸರಿ' ಚಿತ್ರದ ಬಳಿಕ ಯಶ್ ಚಿತ್ರಗಳ ಬಗ್ಗೆ ಚಿತ್ರೋದ್ಯಮ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಇದೀಗ ಅವರು 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗುತ್ತಿದ್ದಾರೆ.

ಇದರ ಜೊತೆಗೆ ಯಶ್ ಮತ್ತೊಂದು ಚಿತ್ರಕ್ಕೆ ಸಜ್ಜಾಗಿದ್ದಾರೆ. 'ಉಗ್ರಂ' ಚಿತ್ರದ ಮೂಲಕ ಚಿತ್ರೋದ್ಯಮದ ಗಮನಸೆಳೆದ ಯುವ ನಿರ್ದೇಶಕ ಪ್ರಶಾಂತ್ ನೀಲ್. ಈ ಬಾರಿ ಯಶ್ ಗೆ ಅವರು ಆಕ್ಷನ್ ಕಟ್ ಹೇಳಲು ಹೊರಟಿದ್ದಾರೆ. ಯಶ್ ಜೊತೆಗಿನ ನೀಲ್ ಚಿತ್ರಕ್ಕೆ 'ಕೆಜಿಎಫ್' ಎಂದು ಹೆಸರಿಡಲಾಗಿದೆ. [ಉಗ್ರಂ ಚಿತ್ರ ವಿಮರ್ಶೆ]

Rocking Star Yash

ಬಹುಶಃ 'ಕೆಜಿಎಫ್' ಚಿತ್ರ ಜನವರಿ 2015ಕ್ಕೆ ಸೆಟ್ಟೇರುವ ಸಾಧ್ಯತೆಗಳಿವೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ಪ್ರಶಾಂತ್ ನೀಲ್ ಚಿತ್ರವೊಂದನ್ನು ಮಾಡಲಿದ್ದಾರೆ ಎಂಬ ಸುದ್ದಿ ಇತ್ತು. ಯಶ್ ಜೊತೆಗಿನ ಚಿತ್ರ ಮುಗಿದ ಬಳಿಕ ಪುನೀತ್ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ ಎಂಬುದು ಸದ್ಯದ ಮಾಹಿತಿ.

ಸದ್ಯಕ್ಕೆ 'ಕೆಜಿಎಫ್'ನ ಪ್ರೀ ಪ್ರೊಡಕ್ಷನ್ ವರ್ಕ್ ಭರದಿಂದ ಸಾಗಿದೆ ಎನ್ನುತ್ತವೆ ಮೂಲಗಳು. ಇನ್ನೊಂದು ಕಡೆ ಯಶ್ ಹಾಗೂ ರಾಧಿಕಾ ಪಂಡಿತ್ ಜೋಡಿಯ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ತೆರೆಗೆ ಬರಲು ಸಿದ್ಧವಾಗುತ್ತಿದೆ.

ನಟ ಶ್ರೀಮುರಳಿ ಅವರು ಫೀನಿಕ್ಸ್ ನಂತೆ ಎದ್ದು ಬರುವಂತೆ ಮಾಡಿದ ಚಿತ್ರ 'ಉಗ್ರಂ'. ಭೂಗತ ಕಥಾಹಂದರದ ಚಿತ್ರದ ಕಥೆ ಕೆಜಿಎಫ್, ಕೋಲಾರ ಸುತ್ತಮುತ್ತ ಹಿನ್ನೆಲೆಯಲ್ಲಿ ಸಾಗುತ್ತದೆ. ಆದರೆ ಕೆಜಿಎಫ್ ಚಿತ್ರದ ಕಥೆ ಏನು,ಎತ್ತ ಎಂಬುದು ಗೊತ್ತಾಗಬೇಕಾದರೆ ಸ್ವಲ್ಪ ಸಮಯ ಕಾಯಲೇಬೇಕು. (ಏಜೆನ್ಸೀಸ್)

English summary
After 'Ugramm' movie with Sri Murali, filmmaker Prashanth Neel took another project with Rocking Star Yash. Sources says, the movie tentatively titled KGF, scheduled to start in January , 2015.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada