For Quick Alerts
  ALLOW NOTIFICATIONS  
  For Daily Alerts

  ಬಯಲಾಯ್ತು ರಾಕಿಂಗ್ ಸ್ಟಾರ್ ಯಶ್ ಸ್ಟೈಲ್ ಹಿಂದಿನ ರಹಸ್ಯ

  |

  ನ್ಯಾಷನಲ್ ಸ್ಟಾರ್ ರಾಕಿಭಾಯ್ ಸ್ಟೈಲ್ ಸೀಕ್ರೆಟ್ ಏನು ಎನ್ನುವುದು ರಿವೀಲ್ ಆಗಿದೆ. ಮೊದಲ ಬಾರಿಗೆ ಯಶ್ ತನ್ನ ಸ್ಟೈಲಿಶ್ ಲುಕ್ ಬಗ್ಗೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡಿರುವ ರಾಕಿಂಗ್ ಸ್ಟಾರ್ ಯಶ್ ಸ್ಟೈಲ್ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

  ರಾಕಿ ಭಾಯ್ ಆಗಿ ಇಡೀ ದೇಶದಾದ್ಯಂತ ಸಂಚಲನ ಸೃಷ್ಟಿಸಿರೋ ಯಶ್, ಕೆ.ಜಿ.ಎಫ್ ಸಿನಿಮಾ ನಂತರ ರಾಷ್ಟ್ರ ವ್ಯಾಪಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ರಾಕಿಂಗ್ ಸ್ಟಾರ್ ಅಟಿಟ್ಯೂಡ್, ನಡೆ ನುಡಿ ಎಷ್ಟು ಸ್ಫೂರ್ತಿದಾಯಕವೋ, ಅವರ ಸ್ಟೈಲ್ ಕೂಡ ಅಷ್ಟೇ ಅಟ್ರ್ಯಾಕ್ಟೀವ್ ಆಗಿರುತ್ತೆ. ಸಿಂಪಲ್ ಅಂಡ್ ಹ್ಯಾಂಡ್ ಸಮ್ ಆಗಿ ಕಾಣಿಸಿಕೊಳ್ಳುವ ರಾಕಿಭಾಯ್ ಗೆ ಹಲವಾರು ಅಭಿಮಾನಿಗಳು ಕೇಳುವ ಪ್ರಶ್ನೆ ಸ್ಟೈಲ್ ಸೀಕ್ರೆಟ್ ಬಗ್ಗೆ. ಹಾಗಾಗಿ ಈ ಬಗ್ಗೆ ಮೊದಲ ಬಾರಿಗೆ ಹೇಳಿಕೊಂಡಿದ್ದಾರೆ ಯಶ್.

  ಅಭಿಮಾನಿಗಳಿಗೆ ನಿರಾಸೆ ಮಾಡಿದ ಬಹು ನಿರೀಕ್ಷೆಯ ಸಿನಿಮಾಗಳುಅಭಿಮಾನಿಗಳಿಗೆ ನಿರಾಸೆ ಮಾಡಿದ ಬಹು ನಿರೀಕ್ಷೆಯ ಸಿನಿಮಾಗಳು

  ಸ್ಟೈಲಿಶ್ ಪೋಟೋಗಳನ್ನು ಶೇರ್ ಮಾಡಿರುವ ಯಶ್

  ಸ್ಟೈಲಿಶ್ ಪೋಟೋಗಳನ್ನು ಶೇರ್ ಮಾಡಿರುವ ಯಶ್

  ಹಾಗಾಗಿ ಮೊದಲ ಬಾರಿಗೆ ಯಶ್ ತನ್ನ ಸ್ಟೈಲ್ ಹಿಂದಿನ ಸೂತ್ರಧಾರಿ ಯಾರೂ ಅನ್ನೋದನ್ನ ಬಹಿರಂಗಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಯಶ್ ಒಂದಿಷ್ಟು ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಯಶ್ ್ವರ ಈ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಹರಿದು ಬರುತ್ತಿವೆ.

  ಅಜೇಯ್ ರಾವ್ ಮುದ್ದು ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಕಿ ಭಾಯ್ಅಜೇಯ್ ರಾವ್ ಮುದ್ದು ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಕಿ ಭಾಯ್

  ಸ್ಟೈಲ್ ಹಿಂದಿನ ಸೂತ್ರಧಾರಿ ಸಾನಿಯಾ

  ಸ್ಟೈಲ್ ಹಿಂದಿನ ಸೂತ್ರಧಾರಿ ಸಾನಿಯಾ

  ಯಶ್ ಸ್ಟೈಲ್ ಹಿಂದಿರೋದು ಸಾನಿಯಾ ಸರ್ದಾರಿಯಾ ಅವ್ರ ಕೈಗಳು ಅನ್ನೋ ವಿಚಾರ ಬಹಿರಂಗ ಪಡಿಸಿದ್ದಾರೆ. ಸಾನಿಯಾ ಸರ್ದಾರಿಯಾ ಎಲ್ಲಾರಿಗೂ ಗೊತ್ತಿರೋ ಹಾಗೇ ಕನ್ನಡ ಚಿತ್ರೋದ್ಯಮದ ಒನ್ ಆಫ್ ದಿ ಬೆಸ್ಟ್ ಸ್ಟೈಲಿಸ್ಟ್ ಮತ್ತು ಡಿಸೈನರ್. ಇದೀಗ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಭಿನ್ನ ವಿಭಿನ್ನ ಸ್ಟೈಲ್ ಡಿಸೈನ್ ಮಾಡುವ ಮೂಲಕ, ರಾಕಿ ಭಾಯ್ ನಂತೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ.

  ಯಶ್ ಸ್ಟೈಲ್ ಮೇಲೆ ಪರಭಾಷಿಕರ ಕಣ್ಣು

  ಯಶ್ ಸ್ಟೈಲ್ ಮೇಲೆ ಪರಭಾಷಿಕರ ಕಣ್ಣು

  ಯಶ್ ರಾಕಿ ಭಾಯ್ ಆಗಿ ಮಾತ್ರವಲ್ಲದೆ ಸ್ಟೈಲ್ ಮತ್ತು ಆಟಿಟ್ಯೂಡ್ ಮೂಲಕವೂ ಪರಭಾಷಿಕರನ್ನು ಸೆಳೆಯುತ್ತಿದ್ದಾರೆ. ಯಶ್ ಅವರ ಈ ಸ್ಟೈಲ್ ಮೇಲೆ ಪರಭಾಷಿಕರು ಕೂಡ ಕಣ್ಣಿಟ್ಟಿದ್ದಾರೆ. ಎಷ್ಟೋ ಜನ ಯಶ್ ಸಾನಿಯಾ ಕಾಂಬಿನೇಷನ್ ನ ರೆಫೆರ್ನ್ಸ್ ತೆಗೆದುಕೊಳ್ಳುತ್ತಿದ್ದಾರಂತೆ.

  ಫಿಲಿಪ್ಪೀನ್ಸ್ ನಿಂದ ಬಂದಿದ್ದ ಅಭಿಮಾನಿಯನ್ನು ಭೇಟಿಯಾಗಿ ಖುಷಿ ಪಟ್ಟ ಯಶ್ಫಿಲಿಪ್ಪೀನ್ಸ್ ನಿಂದ ಬಂದಿದ್ದ ಅಭಿಮಾನಿಯನ್ನು ಭೇಟಿಯಾಗಿ ಖುಷಿ ಪಟ್ಟ ಯಶ್

  ಯಶ್ ಜೊತೆಗೆ ಡಿಸೈನರ್ ಕೂಡ ಫೇಮಸ್

  ಯಶ್ ಜೊತೆಗೆ ಡಿಸೈನರ್ ಕೂಡ ಫೇಮಸ್

  ರಾಕಿಂಗ್ ಸ್ಟಾರ್ ಕೇವಲ ಅವ್ರಷ್ಟೇ ಅಲ್ಲದೇ ಅವ್ರೊಟ್ಟಿಗಿನ ಅಪ್ರತಿಮ ಪ್ರತಿಭಾವಂತರನ್ನೂ ರಾಷ್ಟ್ರ ಮಟ್ಟದಲ್ಲಿ ಪರಿಚಯಿಸುತ್ತಿದ್ದಾರೆ. ಅವರಲ್ಲಿನ ಆ ಪ್ರತಿಭೆ ಪ್ರಜ್ವಲಿಸುವಂತೆ ಮಾಡ್ತಿದ್ದಾರೆ. ಅವರು ಬೆಳೆಯುವುತ್ತಿರುವುದಲ್ಲದೆ ಅವರ ಅಕ್ಕಪಕ್ಕದವರನ್ನು ಜೊತೆಯಲ್ಲಿಯೆ ಕರೆದುಕೊಂಡು ಹೇಗುತ್ತಿದ್ದಾರೆ. ಯಶ್ ಅವರ ಗುಣಗಳು ಅಭಿಮಾಮಿಗಳ ಮೆಚ್ಚುಗೆ ಗಳಿಸುತ್ತಿದೆ.

  English summary
  Kannada actor Yash revealed hi style secret. Saniya Sardhariya is the costume designer for Yash.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X