»   » 'ಗಜಕೇಸರಿ'ಯ ಗರ್ವದ ಮರ್ಮ ನಿಮಗ್ಗೊತ್ತಾ?

'ಗಜಕೇಸರಿ'ಯ ಗರ್ವದ ಮರ್ಮ ನಿಮಗ್ಗೊತ್ತಾ?

By: ಜೀವನರಸಿಕ
Subscribe to Filmibeat Kannada

'ಗಜಕೇಸರಿ' ಸಿನಿಮಾ ಮುಗಿಸೋವಾಗ ರಾಕಿಂಗ್ ಸ್ಟಾರ್ ಯಶ್ ಉಸ್ಸಪ್ಪಾ ಅಂತಿದ್ದಾರೆ. ಯಶ್ ಗೆ ಗಜಕೇಸರಿ ಸಿನಿಮಾ ಕೊಟ್ಟ ಖುಷಿ ಮತ್ತು ಟಾರ್ಚರನ್ನ ಬೇರ್ಯಾವ ಸಿನಿಮಾ ಕೂಡ ಕೊಟ್ಟಿರೋದಿಲ್ಲ. ಯಾಕಂದ್ರೆ ಗಜಕೇಸರಿ ಅನ್ನೋ ಸಿನಿಮಾ ಮುಗಿಸೋದ್ರೊಳಗೆ ಯಶ್ ಯರ್ರಾಬಿರ್ರಿ ಸುಸ್ತಾಗಿ ಹೋಗಿದ್ದಾರೆ.

ಜಯಣ್ಣ-ಭೋಗೇಂದ್ರ ಪ್ರೊಡಕ್ಷನ್ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿರೋ ಯಶ್ ಮೊದಲಿಂದ್ಲೂ ಪ್ರತೀ ಸಿನಿಮಾದಲ್ಲೂ ಏನನ್ನಾದ್ರೂ ವಿಭಿನ್ನವಾದದನ್ನ ಮಾಡ್ಬೇಕು. ನಮ್ಗೆ ಲೈಫ್ ಕೊಡೋ ಅಭಿಮಾನಿಗಳಿಗೆ ಹಳೇ ಕಥೆ ಹಳೇ ಲುಕ್ಕನ್ನೇ ಕೊಡೋದಕ್ಕಿಂತ ಸ್ವಲ್ಪ ವಿಭಿನ್ನವಾದದ್ದೇನನಾದ್ರೂ ಪ್ರಯತ್ನ ಮಾಡ್ಬಬೇಕು ಅಂತ ಯೋಚಿಸೋ ನಾಯಕ. [ಈ ಸ್ಯಾಂಡಲ್ ವುಡ್ ಜೋಡಿಹಕ್ಕಿಗಳು ಲವ್ ಮಾಡ್ತವ್ರಾ?]

ಅದಕ್ಕೆ ಯಶ್ ಪ್ರತಿ ಸಿನಿಮಾದಲ್ಲಿ ಮಾಡೋ ಪಾತ್ರಗಳು ಹಿಂದಿನ ಸಿನಿಮಾಗಿಂತ ಸ್ವಲ್ಪ ಅಥವಾ ಕಂಪ್ಲೀಟ್ಲೀ ಭಿನ್ನವಾಗಿರ್ತವೆ. 'ಮೊಗ್ಗಿನಮನಸ್ಸಿ'ನ ಯಶ್ 'ಕಳ್ಳರಸಂತೆ'ಗೆ ಬಂದು ನಿರುದ್ಯೋಗಿಯಾಗಿ 'ಕಿರಾತಕ'ದಲ್ಲಿ ಕಿಕ್ಕರ್ ಆಗಿ 'ಲಕ್ಕಿ'ಯಲ್ಲಿ ಲವ್ಲೀ ಹುಡ್ಗನಾಗಿ ಮಿಂಚಿದ್ದು.

ವಿಭಿನ್ನವಾದದ್ದನ್ನ ಕೊಟ್ಟರೆ ಜನರು ನೋಡೋದು ಅಂತ ಯೋಚಿಸೋ ಯಶ್ ನಿರ್ದೇಶಕ ಕ್ಯಾಮೆರಾಮನ್ ಕೃಷ್ಣ ಅವರು 'ಗಜಕೇಸರಿ' ಸಬ್ಜೆಕ್ಟ್ ತಂದಾಗ ಜೈ ಅಂದಿದ್ದು ಎರಡು ಕಾರಣಗಳಿಗೆ. ಒಂದು ಕೃಷ್ಣ ಅವರ ಸ್ನೇಹ ಮತ್ತು ನಿರ್ದೇಶನದ ಸಾಮರ್ಥ್ಯ ಗೊತ್ತಿದ್ದರಿಂದ. [ಗಜಕೇಸರಿ ಗ್ಯಾಲರಿ]

ಇನ್ನೊಂದು ಸ್ವಲ್ಪ ಭಿನ್ನವಾಗಿ ಏನನ್ನಾದ್ರೂ ಮಾಡೋ ಯೋಚನೆ ಇದ್ದಿದ್ದರಿಂದ. ಆದರೆ ಗಜಕೇಸರಿ ಸಿನಿಮಾ ಮುಗಿಸೋದ್ರೊಳಗೆ ಯಶ್ ಗೆ ಸಖತ್ ಸ್ಪೆಷಲ್ ಅನುಭವಗಳಾಗಿವೆ. ಅದೇನು ಅಂತ ಸ್ಲೈಡ್ ನಲ್ಲಿ ನೋಡ್ಕೊಂಡು ಬರೋಣ ಬನ್ನಿ.

ಗಜಕೇಸರಿಯ ಕೇಸರದ ಕಥೆ

ಗಂಡು ಸಿಂಹಕ್ಕೆ ಕುತ್ತಿಗೆಯ ಸುತ್ತ ಕೇಸರ ಇರೋ ಹಾಗೆ ತನ್ನ ತಲೆಗೆ ಹೇರ್ ಎಕ್ಷಟೆನ್ಷನ್ ಮಾಡಿಸಿಕೊಂಡ ಯಶ್ ಗೆ ಈ ಹೇರ್ ಎಕ್ಷಟೆನ್ಷನ್ನೇ ದೊಡ್ಡ ಟೆನ್ಷನ್ ಆಗಿತ್ತಂತೆ. ಯಶ್ ಈ ಕೂದಲನ್ನ ಮೇಂಟೇನ್ ಮಾಡೋಕೆ ಕಷ್ಟಪಟ್ಟು ನಿರ್ದೇಶಕರಿಗೆ ಕೈಮುಗಿದು ಬಿಟ್ರಂತೆ.

ಫಾರಿನಲ್ಲಿ ಯಶ್ ಪರದಾಟ

ರಾಜನ ಗೆಟಪ್ ನಲ್ಲಿ ಯಶ್ ಹಾಡೊಂದರ ಶೂಟಿಂಗ್ ಮಾಡ್ತಿದ್ದಾಗ ಹೇರ್ ಸ್ಪೆಷಲಿಸ್ಟ್ ಇಲ್ಲದೇ ಯಶ್ ಎಕ್ಸ್ ಟೆಂಡೆಡ್ ಹೇರ್ ನ ಸರಿಮಾಡೋಕೆ ಮೇಕಪ್ ಮನ್ ಗಳು ಪರದಾಡೋ ಹಾಗಾಯ್ತಂತೆ. ಅಯ್ಯೋ ಬೇಗ ಕೂದಲು ತೆಗಿಸಿ ಅಂತ ಯಶ್ ಅಂದ್ರೆ ನಿರ್ದೇಶಕ ಕಿಟ್ಟಪ್ಪ ಸ್ವಲ್ಪ ದಿನ ತಡ್ಕೊಳ್ಳಿ ಅಂತ ಯಶ್ ಗೆ ರಿಟರ್ನ್ ಕೈ ಮುಗಿದ್ರಂತೆ.

ಡಬಲ್ ಆಕ್ಟಿಂಗ್ ನಲ್ಲಿ ಯಶ್

ಮೊದಲ ಬಾರಿಗೆ ಯಶ್ ಡಬಲ್ ಆಕ್ಟಿಂಗ್ ಮಾಡ್ತಿದ್ದಾರೆ. ಒಂದು ಆನೆಯನ್ನ ಪ್ರೀತಿಸುವ ಕಾಡಿನ ಗೆಟಪ್ ಆದ್ರೆ, ಮತ್ತೊಂದು ರಾಕಿಂಗ್ ಸ್ಟಾರ್ ನ ಸ್ಟೈಲಿಷ್ ಗೆಟಪ್. ಎರಡರಲ್ಲೂ ಯಶ್ ಸೂಪರ್ ಅಂತೆ.

ಹೀಗಿರುತ್ತೆ ಅಂದುಕೊಂಡಿರಲಿಲ್ಲ

ಕಿರಾತಕದ ಹಳ್ಳಿಹೈದನ ಪಾತ್ರ ಗೂಗ್ಲಿಯ ಲವರ್ ಬಾಯ್ ಪಾತ್ರ ಈಸಿ. ಆದರೆ ಗಜಕೇಸರಿಯಂತಹಾ ಪಾತ್ರ ಮಾಡೋದು ಅಷ್ಟು ಸುಲಭವಲ್ಲ. ಪಾತ್ರಕ್ಕೆ ತಯಾರಿ ಮಾಡಿಕೊಂಡ ಮೇಲೆ ಹೀಗಿರುತ್ತೆ ಅಂದುಕೊಂಡಿರಲಿಲ್ಲ ಅಂತಾರೆ ಯಶ್.

ಮೆಚ್ಯೂರ್ಡ್ ಪಾತ್ರದಲ್ಲಿ ಅಮೂಲ್ಯ

ಇಲ್ಲೀವರೆಗೂ ಐಸೂ, ಶ್ರಾವಣಿ ತರಹದ ಚೈಲ್ಡಿಶ್ ಶೇಡ್ ನ ಪಾತ್ರಗಳಲ್ಲಿ ಮಿಂಚ್ತಿದ್ದ ಅಮೂಲ್ಯ ಇಲ್ಲಿ ಮೆಚ್ಯೂರ್ಡ್ ಪಾತ್ರ ಮಾಡಿದ್ದಾರೆ. ಅದರ ನಡುವೇನೂ ಚೈಲ್ಡಿಶ್ ಅಮೂಲ್ಯರ ಝಲಕ್ ಇದ್ರೆ... ಅದೂ ಇಷ್ಟವಾಗುತ್ತೆ ಬಿಡಿ.

10 ಕೆ.ಜಿ ತೂಕ ಇಳಿಸಿದ ಅಮೂಲ್ ಬೇಬಿ

ಗಜಕೇಸರಿಯಲ್ಲಿ ಅಮೂಲ್ಯರನ್ನ ನೋಡಿದ್ರೆ ಇವರೇನಾ ಆ ಐಸೂ ಅಮೂಲ್ಯ ಅಂತ ನೀವು ದಂಗಾಗಿರ್ತೀರ. ಇಲ್ಲಿ ಅಮೂಲ್ಯ ಗ್ಲಾಮರ್ ಬೇಬಿ ಮೊದಲಬಾರಿಗೆ ಶಾರ್ಟ್ ಟೀಶರ್ಟ್ ಹಾಕಿದ್ದಾರೆ.

ರಾಜನ ಗೆಟಪ್ ನಲ್ಲಿ ಯಶ್

'ರಾಜಹುಲಿ'ಯ ನಂತರ ರಾಜಗಾಂಭಿರ್ಯದ ಮಾಸ್ ಪಾತ್ರಗಳಿಗೂ ಸೈ ಅನ್ನಿಸಿಕೊಳ್ಳೋ ಮನಸ್ಸು ಮಾಡಿರೋ ಮಂಡ್ಯದ ಹುಲಿ ಯಶ್ ಗಜಕೇಸರಿಯಾಗಿ ರಾಜನಾಗಿ ಬರೋದು ಹೇಗಿರುತ್ತೆ ಅಂತ ಯಶ್ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾದಿದ್ದಾರೆ.

English summary
Rocking Star Yash who is basking in the success of Drama, Googly and Raja Huli appearing in dual role in new Kannada Film ‘Gajakesari’ is all set to give another Blockbuster for 2014. In Kannada for the very first time hair weaving technology introduced in this film.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada