»   » ಸೈಮಾ ಪ್ರಶಸ್ತಿ ಪಡೆದು ಯಶ್ ಏನೇನೂ ಹೇಳಿದ್ರು

ಸೈಮಾ ಪ್ರಶಸ್ತಿ ಪಡೆದು ಯಶ್ ಏನೇನೂ ಹೇಳಿದ್ರು

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಮತ್ತೊಮ್ಮೆ ಇಡೀ ಪ್ರೇಕ್ಷಕ ವರ್ಗ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಈ ಬಾರಿ ದುಬೈನಲ್ಲಿ ನಡೆದ 2015ರ ಸೈಮಾ ಆವಾರ್ಡ್ ನಲ್ಲಿ ಯಶ್ ಅಭಿನಯದ 'ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ' 10 ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು.

ಈ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್ ಕನ್ನಡ ಚಿತ್ರರಂಗದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಸಮಾರಂಭದಲ್ಲಿ ವೇದಿಕೆ ಏರಿದ ಯಶ್ ಏನೇನೂ ಹೇಳಿದ್ರು ಅಂತ ತಿಳಿಯಲು ಈ ವಿಡಿಯೋ ನೋಡಿ.....

Rocking Star yash Speech at SIIMA 2015

ವೇದಿಕೆ ಏರಿದ ತಕ್ಷಣ ಯಶ್ ಅವರು 'ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ' ಚಿತ್ರದ ಎಲ್ಲಾ ತಂಡದವರಿಗೂ ಜೊತೆಗೆ ಧಾರಾವಾಹಿ ಮೂಲಕ ಜೊತೆಯಾಗಿ ಬೆಳ್ಳಿತೆರೆ ಪ್ರವೇಶ ಮಾಡಿದ ರಾಧಿಕಾ ಪಂಡಿತ್ ಅವರಿಗೂ ಧನ್ಯವಾದ ಸಲ್ಲಿಸಿದರು, ಜೊತೆಗೆ ನಿರ್ದೇಶಕ ಸಂತೋಷ್ ಅವರು ಯಶ್ ಅವರನ್ನು ಅವರ ಚಿತ್ರಕ್ಕೆ ಆರಿಸಿಕೊಂಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. [ಸೈಮಾ ಪ್ರಶಸ್ತಿ : ಯಶ್ -ರಾಧಿಕಾ ಸೇರಿ ತಾರೆಯರ ರಂಗು]

ಇಲ್ಲಿ ಮುಖ್ಯವಾಗಿ 'ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ' ಚಿತ್ರದ ಯಶಸ್ಸಿಗೆ ಪ್ರಮುಖ ಕಾರಣಕರ್ತರೆಂದರೆ ಅದು ಡಾ.ವಿಷ್ಣುವರ್ಧನ್ ಹಾಗೂ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಯಾಕಂದ್ರೆ 'ನಾಗರಹಾವು' ಎನ್ನುವ ಚಿತ್ರದಿಂದಾಗಿ ನನ್ನ ಈ ಚಿತ್ರ ಪೂರ್ಣಗೊಂಡಿದೆ ಎಂದು ಕನ್ನಡ ಚಿತ್ರರಂಗದ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ 'ಅಣ್ಣ್ ತಮ್ಮ' ಅಂತಾನೇ ಫೇಮಸ್ ಆಗಿರುವ ಡೈಲಾಗ್ ಅನ್ನು ದುಬೈಗೂ ತಲುಪಿಸಿ ಪ್ರೇಕ್ಷಕರನ್ನು ಹುರಿದುಂಬಿಸಿದರು.[ಸೈಮಾ ಅವಾರ್ಡ್ಸ್ ನಲ್ಲೂ ದಾಖಲೆ ಬರೆದ ಯಶ್ 'ರಾಮಾಚಾರಿ']

ಮತ್ತೆ ಮಾತು ಮುಂದುವರಿಸಿದ ಯಶ್ ಇದು ಜಸ್ಟ್ ಬಿಗಿನಿಂಗ್ ಮಾತ್ರ , ಕನ್ನಡ ಸಿನೆಮಾ ನೋಡ್ತಾ ಇರಿ, ಕನ್ನಡ ಚಿತ್ರರಂಗ ಇನ್ನೂ ಎತ್ತರಕ್ಕೇರುತ್ತೆ ಎಂದು ಕನ್ನಡ ಪ್ರೇಕ್ಷಕರನ್ನು ಬಡಿದೆಬ್ಬಿಸಿದರು.

ಒಟ್ನಲ್ಲಿ ಇತ್ತೀಚೆಗೆ ಕನ್ನಡದಲ್ಲಿ ಒಂದೊಳ್ಳೆ ಚಿತ್ರ ಬಂದಿದ್ದಕ್ಕಾಗಿ ಪ್ರೇಕ್ಷಕರು ಫುಲ್ ಖುಷ್ ಆಗಿದ್ದಾರೆ ಅಂದ್ರೂ ತಪ್ಪಾಗ್ಲಿಕ್ಕಿಲ್ಲ.

English summary
Rocking Star Yash has again made the whole industry watch him! The handsome hunk is in the news for bagging four awards at SIIMA 2015 for his acting in Mr And Mrs Ramchari. The grand event SIIMA was recently held in Dubai. After receiving his first award on stage, addressed the event in Kannada and through this Yash has won the hearts of Kannada audiences.The 2:51 seconds video shows Yash's love for Kannada fim industry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada