»   » 'ಫೇಸ್ ಬುಕ್ ಲೈವ್'ನಲ್ಲಿ ಯಶ್ ಬಿಚ್ಚಿಟ್ಟ 5 ಇಂಟ್ರೆಸ್ಟಿಂಗ್ ವಿಷ್ಯಗಳು

'ಫೇಸ್ ಬುಕ್ ಲೈವ್'ನಲ್ಲಿ ಯಶ್ ಬಿಚ್ಚಿಟ್ಟ 5 ಇಂಟ್ರೆಸ್ಟಿಂಗ್ ವಿಷ್ಯಗಳು

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಸದ್ಯ ಕನ್ನಡದ ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ 'ಕೆಜಿಎಫ್' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ಹಾಗೂ ಯಶ್ ಅವರ ಗೆಟಪ್ ನಿಂದ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿರುವ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

'ಕೆಜಿಎಫ್' ಚಿತ್ರದಲ್ಲಿ ನಟಿಸುತ್ತಿರುವ ಯಶ್ ಬಿಡುವಿನ ವೇಳೆಯಲ್ಲಿ ಏನ್ಮಾಡ್ತಾರೆ? ರಾಧಿಕಾ ಪಂಡಿತ್ ಅವರ ಜೊತೆ ಮತ್ತೆ ಸಿನಿಮಾ ಮಾಡ್ತಾರಾ? 'ಕೆಜಿಎಫ್' ಚಿತ್ರ ಯಾವಾಗ ಬಿಡುಗಡೆಯಾಗುತ್ತೆ? ಹೀಗೆ ಇನ್ನೂ ಹಲವು ಪ್ರಶ್ನೆಗಳು ನಿಮ್ಮನ್ನ ಕಾಡುತ್ತಿದ್ಯಾ?

ಯೋಚನೆ ಮಾಡ್ಬೇಡಿ. ಈ ಎಲ್ಲ ಪ್ರಶ್ನೆಗಳಿಗೆ ಸ್ವತಃ ಯಶ್ ಅವರೇ ಫೇಸ್ ಬುಕ್ ಲೈವ್ ನಲ್ಲಿ ಉತ್ತರ ಕೊಟ್ಟಿದ್ದಾರೆ.

'ಕೆಜಿಎಫ್' ರಿಲೀಸ್ ಯಾವಾಗ?

''ಮೊದಲು ಚಿತ್ರದ ಟೀಸರ್ ರಿಲೀಸ್ ಮಾಡ್ಬೇಕು. ಸದ್ಯಕ್ಕೆ ಕೆಲಸ ಆಗ್ತಿದೆ. ಕ್ವಾಲಿಟಿಯಲ್ಲಿ ಬೇರೆಯವರಿಗಿಂತ ಚೆನ್ನಾಗಿ ಇರಲಿದೆ. ಇನ್ನು 20 ದಿನಗಳಲ್ಲಿ ಸಿನಿಮಾ ಯಾವಾಗ ಬಿಡುಗಡೆ ಮಾಡ್ಬೇಕು ಅಂತ ನಿರ್ಧಾರ ಮಾಡ್ತೀವಿ'' - ಯಶ್, ನಟ

'ಕೆ.ಜಿ.ಎಫ್' ಚಿತ್ರದ ಫಸ್ಟ್ ಡೈಲಾಗ್ ಬಹಿರಂಗ ಪಡಿಸಿದ ರಾಕಿಂಗ್ ಸ್ಟಾರ್.!

ನೀವು ಜಿಮ್, ವರ್ಕೌಟ್ ಮಾಡ್ತೀರಾ?

''ನನಗೆ ಪಾನಿಪೂರಿ ಕಿಟ್ಟಿ ಅವರು ಟ್ರೇನ್ ಮಾಡ್ತಾರೆ. ಸಾಮಾನ್ಯವಾಗಿ ನನಗೆ ಜಿಮ್, ವರ್ಕೌಟ್ ಮಾಡೋಕೆ ಆಸಕ್ತಿ ಇಲ್ಲ. ಸಿನಿಮಾಗೋಸ್ಕರ ಪಾತ್ರಕ್ಕೆ ಬೇಕಂತೆ ತಯಾರಾಗಬೇಕು ಅಂತ ವರ್ಕೌಟ್ ಮಾಡ್ತೀನಿ. ಆದಷ್ಟೂ ನ್ಯಾಚುರಲ್ ಆಗಿರೋಕೆ ಇಷ್ಟ ಪಡ್ತೀನಿ'' - ಯಶ್, ನಟ

ರಾಧಿಕಾ ಪಂಡಿತ್ ಎದುರಲ್ಲೇ ಯಶ್ ಗೆ ಗೂಗ್ಲಿ ಹಾಕಿದ ಅಭಿಮಾನಿ.!

ಭಾನುವಾರ ನಿಮ್ಮ ದಿನ ಹೇಗಿರುತ್ತೆ?

''ಮದುವೆ ಆದ್ಮೇಲೆ ಭಾನುವಾರ ಕೆಲಸಕ್ಕೆ ಹೋಗಲ್ಲ. ಯಾವಾಗಲೂ ಕೆಲಸ, ಶೂಟಿಂಗ್ ನಲ್ಲಿ ಬಿಜಿ ಇರ್ತಿವಿ. ಅದಕ್ಕೆ ಭಾನುವಾರ ಆದಷ್ಟೂ ಫ್ರಿ ಆಗಿ, ರಾಧಿಕಾ ಜೊತೆಯಲ್ಲಿ ಸಮಯ ಕಳೆಯುತ್ತೇನೆ'' - ಯಶ್, ನಟ

ರಾಧಿಕಾ ಜೊತೆ ಮತ್ತೆ ಸಿನಿಮಾ ಮಾಡ್ತೀರಾ?

''ಖಂಡಿತಾ ಮಾಡ್ತೀನಿ. ಆ ತರಹ ಸ್ಕ್ರಿಪ್ಟ್ ಬರಬೇಕು. ಚೆನ್ನಾಗಿದ್ರೆ ಪಕ್ಕಾ ಮಾಡ್ತೀವಿ''- ಯಶ್, ನಟ

ಈ ಚಿತ್ರ ಮಾಡಿದ್ರೆ, ಯಶ್ ಇಮೇಜ್ ಕಂಪ್ಲೀಟ್ ಬದಲಾಗುತ್ತಂತೆ.!

ಹಳ್ಳಿ ಕಥೆ ಹೊಂದಿರುವ ಸಿನಿಮಾ ಮಾಡಿ...

''ನನಗೂ ಹಳ್ಳಿಕಥೆ ಹೊಂದಿರುವ ಸಿನಿಮಾ ಮಾಡುವುದಕ್ಕೆ ತುಂಬ ಇಷ್ಟ. ವರ್ಷಕ್ಕೆ ಒಂದು ಹಳ್ಳಿ ಸಿನಿಮಾ ಕೊಟ್ರೂ ನಾನು ಮಾಡ್ತೀನಿ, ತುಂಬ ನ್ಯಾಚುರಲ್ ಆಗಿ ಬರುತ್ತೆ. ತುಂಬ ಖುಷಿಯಿಂದ ಆಕ್ಟ್ ಮಾಡ್ತೀನಿ'' - ಯಶ್, ನಟ

ಯಶ್ ಫೇಸ್ ಬುಕ್ ಲೈವ್ ಮಾತನಾಡಿರುವ ವಿಡಿಯೋ ಇಲ್ಲಿದೆ ನೋಡಿ

English summary
Kannada Actor, Rocking star Yash speaks About KGF Movie in Facebook Live. 'ಫೇಸ್ ಬುಕ್ ಲೈವ್'ನಲ್ಲಿ ರಾಕಿಂಗ್ ಸ್ಟಾರ್ ಯಶ್ ಕೆ.ಜಿ.ಎಫ್ ಚಿತ್ರದ ಬಗ್ಗೆ ಮಾತನಾಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada