Don't Miss!
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಎಂಎಸ್ ಸುಬ್ಬುಲಕ್ಷ್ಮಿ ಬಯೋಪಿಕ್ ನಿರ್ಮಾಣಕ್ಕೆ ಮುಂದಾದ ರಾಕ್‌ಲೈನ್ ವೆಂಕಟೇಶ್
ಕನ್ನಡದ ಸ್ಟಾರ್ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳನ್ನು ನಿರ್ಮಿಸಲು ರಾಕ್‌ಲೈನ್ ವೆಂಕಟೇಶ್ ಮನಸ್ಸು ಮಾಡಿದ್ದಾರೆ. ಈಗಾಗಲೇ ರಾಕ್‌ಲೈನ್ ವೆಂಕಟೇಶ್ ಕನ್ನಡದ ಸೂಪರ್‌ಸ್ಟಾರ್‌ಗಳಿಗೆ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇದರ ನಡುವೆಯೇ ಮತ್ತೊಂದು ಸಿನಿಮಾಗೆ ಕೈ ಹಾಕಿದ್ದು, ಇದು ಎಲ್ಲರ ಗಮನ ಸೆಳೆಯುತ್ತಿದೆ.
ರಾಕ್‌ಲೈನ್ ವೆಂಕಟೇಶ್ ಈಗಾಗಲೇ ಕನ್ನಡದಲ್ಲಿ ಎರಡು ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಂಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಇಬ್ಬರಿಗೂ ಸಿನಿಮಾ ಮಾಡುತ್ತಿದ್ದಾರೆ. ಈ ಮಧ್ಯೆನೇ ಭಾರತ ರತ್ನ, ಸಂಗೀತ ಲೋಕದ ದಂತಕಥೆ ಎಂಎಸ್ ಸುಬ್ಬುಲಕ್ಷ್ಮಿ ಬಯೋಪಿಕ್ ಅನ್ನು ತೆರೆಮೇಲೆ ತರಲು ಮುಂದಾಗಿದ್ದಾರೆ. ಈ ಸಿನಿಮಾದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಮುಂದೆ ಓದಿ.
ಶಿವಣ್ಣ-ಪ್ರಭುದೇವ
ಜೊತೆ
ಪ್ಯಾನ್
ಇಂಡಿಯಾಗೆ
ಕೈ
ಹಾಕುತ್ತಿದ್ದಾರಾ
ಭಟ್ರು?

ಎಂಎಸ್ ಸುಬ್ಬುಲಕ್ಷ್ಮಿ ಬಯೋಪಿಕ್‌ಗೆ ಸಿದ್ಧತೆ
ಕನ್ನಡದ ಖ್ಯಾತ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮತ್ತೊಂದು ಸಿನಿಮಾದಿಂದ ಸುದ್ದಿಯಲ್ಲಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಲೋಕದ ದಂತಕಥೆ ಮದುರೈ ಶಣ್ಮುಖವಡಿವು ಸುಬ್ಬುಲಕ್ಷ್ಮಿ ಜೀವನ ಚರಿತ್ರೆಯನ್ನು ತೆರೆಮೇಲೆ ತರುವುದಕ್ಕೆ ಸಜ್ಜಾಗಿದ್ದಾರೆ. ಭಾರತ ರತ್ನ ಎಂಎಸ್‌ಸುಬ್ಬುಲಕ್ಷ್ಮಿ ಬಯೋಪಿಕ್ ಅನ್ನು ರಾಕ್‌ಲೈನ್ ಎಂಟರ್‌ಟೈನ್ಮೆಂಟ್ ಸಂಸ್ಥೆ ಅಡಿಯಲ್ಲಿ ಈ ನಿರ್ಮಾಣ ಆಗಲಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಬಿಬಿಎಂಪಿಗೆ
ಕೋಟ್ಯಂತರ
ಹಣ
ವಂಚನೆ:
ರಾಕ್‌ಲೈನ್
ವಿರುದ್ಧ
ದೂರು

ರಾಕ್‌ಲೈನ್ ವೆಂಕಟೇಶ್ ಹೇಳಿದ್ದೇನು?
ಎಂಎಸ್ ಸುಬ್ಬುಲಕ್ಷ್ಮಿ ಸಿನಿಮಾ ನಿರ್ಮಾಣ ಮಾಡುತ್ತಿರುವ ವಿಷಯವನ್ನು ರಾಕ್‌ಲೈನ್ ವೆಂಕಟೇಶ್ ಒಪ್ಪಿಕೊಂಡಿದ್ದಾರೆ. ಈಗಾಗಲೇ ಸಿನಿಮಾ ಕಥೆ ಫೈನಲ್ ಆಗಿದೆ. ಸದ್ಯ ಎಂಎಸ್ ಸುಬ್ಬುಲಕ್ಷ್ಮಿಯವರ ಬಯೋಪಿಕ್‌ಗೆ ಸ್ಕ್ರೀನ್ ಪ್ಲೇ ಮಾಡಲಾಗುತ್ತಿದೆ. ಇದೇ ವೇಳೆ ಎಂಎಸ್ ಸುಬ್ಬುಲಕ್ಷ್ಮಿ ಪಾತ್ರಕ್ಕೆ ಸೂಕ್ತ ಎನಿಸುವ ನಟಿ ಹಾಗೂ ಉಳಿದ ಪಾತ್ರಗಳಿಗೆ ಕಲಾವಿದರ ಆಯ್ಕೆ ನಡೆಯುತ್ತಿದೆ ಎಂದು ರಾಕ್‌ಲೈನ್ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ತಂತ್ರಜ್ಞರ ಬಗ್ಗೆ ರಾಕ್‌ಲೈನ್ ಯಾವುದೇ ವಿಷಯವನ್ನೂ ಬಿಟ್ಟುಕೊಟ್ಟಿಲ್ಲ. ಆದರೆ, ಈ ಹಿಂದೆ ಎಂಎಸ್ ಸುಬ್ಬುಲಕ್ಷ್ಮಿ ಪಾತ್ರದಲ್ಲಿ ವಿದ್ಯಾಬಾಲನ್ ನಟಿಸಲಿದ್ದಾರೆ ಎಂದು ಸುದ್ದಿಯಾಗಿತ್ತು.

ಓಕೆ ಆದ್ಮೇಲೆನೇ ಅನೌನ್ಸ್‌ಮೆಂಟ್
ರಾಕ್‌ಲೈನ್ ವೆಂಕಟೇಶ್ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ದಕ್ಷಿಣದ ಎಲ್ಲಾ ಭಾಷೆಗಳಲ್ಲೂ ಎಂಎಸ್ ಸುಬ್ಬಲಕ್ಷ್ಮಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಇನ್ನು ಕಥೆ, ಚಿತ್ರಕಥೆ ಮುಗಿದು, ತಂತ್ರಜ್ಞರು ಹಾಗೂ ಕಲಾವಿದರ ಆಯ್ಕೆಯಾದ ಬಳಿಕ ಸಿನಿಮಾ ಅನೌನ್ಸ್ ಮಾಡಲು ತೀರ್ಮಾನಿಸಿದ್ದಾರೆ. ಅಲ್ಲಿವರೆಗೂ ಎಂ ಎಸ್ ಸುಬ್ಬುಲಕ್ಷ್ಮಿ ಬಯೋಪಿಕ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡದೆ ಇರಲು ತೀರ್ಮಾನಿಸಿದ್ದಾರೆ.
ದರ್ಶನ್
'ಮದಕರಿ
ನಾಯಕ'
ಅಪ್ಡೇಟ್
ನೀಡಿದ
ರಾಜೇಂದ್ರ
ಸಿಂಗ್
ಬಾಬು

ವಿಸಾರಣೈ ರಿಮೇಕ್ ಮಾಡುತ್ತಿರೋ ರಾಕ್‌ಲೈನ್
ಎಂ ಎಸ್ ಸುಬ್ಬುಲಕ್ಷ್ಮಿ ಬಯೋಪಿಕ್ ಬಳಿಕ ಇನ್ನೂ ಕೆಲವು ಸಿನಿಮಾಗಳನ್ನು ಬ್ಯಾಕ್ ಟು ಬ್ಯಾಕ್ ನಿರ್ಮಾಣ ಮಾಡುತ್ತಿದ್ದಾರೆ. ತಮಿಳಿನ ಸೂಪರ್ ಹಿಟ್ ಸಿನಿಮಾ 'ವಿಸಾರಣೈ' ಅನ್ನು ಬಾಲಿವುಡ್‌ನಲ್ಲಿ ರಿಮೇಕ್ ಮಾಡಲಾಗುತ್ತಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ವಿಜಯ್ ದೇವರಕೊಂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.