For Quick Alerts
  ALLOW NOTIFICATIONS  
  For Daily Alerts

  'ರೂಟ್ ನಂ.1'ನಲ್ಲಿ ಪ್ರಯಾಣ ಮಾಡಿ ಪ್ರಪಂಚ ನೋಡಿ!

  |
  <ul id="pagination-digg"><li class="next"><a href="/news/short-film-route-no-1-deepak-gowda-divya-release-069180.html">Next »</a></li></ul>

  ಸಿನಿಮಾ ಜಗತ್ತು ಸಾಕಷ್ಟು ವೈವಿಧ್ಯಮಯ, ಕಲರ್ ಫುಲ್. ಅದರ ಒಂದು ಭಾಗವಾಗಿರುವ ಕಿರುತೆರೆ ಜಗತ್ತು ಕೂಡ ಅಷ್ಟೇ ಪ್ರಭಾವಶಾಲಿಯಾಗಿ ಬೆಳೆಯುತ್ತಿದೆ. ಇತ್ತೀಚಿಗೆ, ಅದೇ ಉದ್ಯಮದ ಇನ್ನೊಂದು ವಿಭಾಗವಾಗಿರುವ ಕಿರುಚಿತ್ರಗಳೂ (ಶಾರ್ಟ್ ಫಿಲಂ) ಬಹಳಷ್ಟು ವೇಗವಾಗಿ ಬೆಳೆಯುತ್ತಿವೆ. ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಕಿರುಚಿತ್ರಗಳು ಮೊದಲಿನಿಂದಲೂ ತಯಾರಾಗುತ್ತಿದ್ದರೂ ಅವು ಕನ್ನಡದಲ್ಲಿ ಇತ್ತೀಚಿಗೆ ಹೇರಳವಾಗಿ ಬರುತ್ತಿವೆ.

  ಕನ್ನಡ ನಟ ಕಿಚ್ಚ ಸುದೀಪ್ ತೆಲುಗು ಚಿತ್ರ 'ಈಗ'ದಲ್ಲಿ ನಟಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಾಶಿಸುತ್ತಿರುವ ಈ ವೇಳೆ, ಯಾವುದೇ ಅಳುಕಿಲ್ಲದೇ ಸ್ವತಃ ಹೊಸತನವಿರುವ ಕಿರುಚಿತ್ರದ ನಿರ್ದೇಶನವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಅದನ್ನು ಉಳಿದೆಲ್ಲ ಸಿನಿಮಾಗಳಂತೆ ಥಿಯೇಟರಿನಲ್ಲಿ ಬಿಡುಗಡೆಯನ್ನೂ ಮಾಡಲಿದ್ದಾರಂತೆ ಸುದೀಪ್. ಅವರಿಗೆ ನಟ ಚಿರಂಜೀವಿ ಸರ್ಜಾ ಸಾಥ್ ನೀಡುತ್ತಿದ್ದಾರೆ. ಸುದೀಪ್ ಕಿರುಚಿತ್ರ ನಿರ್ದೇಶನಕ್ಕೆ ತೊಡಗಿಕೊಳ್ಳುತಿದ್ದಂತೆ, ಆ ಮೊದಲೇ ಕಿರುಚಿತ್ರ ಪ್ರಾರಂಭಿಸಿದ್ದ ಹಲವು ಜನರಿಗೆ ಟಾನಿಕ್ ದೊರೆತಂತಾಗಿದೆ.

  ಸದಾ ಹೊಸತನಕ್ಕೆ ತುಡಿಯುವ ಸುದೀಪ್ ಅವರೆಲ್ಲರಿಗೆ ಸ್ಪೂರ್ತಿ ಎಂಬಂತೆ, ಒಬ್ಬೊಬ್ಬರಾಗಿ ಕಿರುಚಿತ್ರವನ್ನು ಪ್ರಾರಂಭಿಸುತ್ತಿದ್ದಾರೆ, ಅಥವಾ ಈ ಮೊದಲೇ ಮಾಡಿರುವವರು ಅದನ್ನು ಪರದೆ ಮೇಲೆ ಪ್ರೇಕ್ಷಕರಿಗೆ ತೋರಿಸಲು ಮುಂದಾಗುತ್ತಿದ್ದಾರೆ. ಆ ಸಾಲಿನಲ್ಲೀಗ 'ರೂಟ್ ನಂ.1,' ಪ್ರಯಾಣ ಮಾಡಿ ಪ್ರಪಂಚ ನೋಡಿ' ಎಂಬ ಹೆಸರಿನಲ್ಲಿ ಕಿರುಚಿತ್ರ ಮಾಡಿ ಅದನ್ನು ಪರದೆಗೆ ತರಲು ಮುಂದಾಗಿರುವ ನವೀನ್ ಹಾಗೂ ದೀಪಕ್ ಚಿತ್ರತಂಡವೂ ಸೇರಿದೆ. (ರೂಟ್ ನಂ.1 ಹಾಡು)

  'ರೂಟ್ ನಂ.1', ಪ್ರಯಾಣ ಮಾಡಿ ಪ್ರಪಂಚ ನೋಡಿ' ಹೆಸರಿನ ಕಿರುಚಿತ್ರವು ಕಾರ್ಪೋರೇಟ್ ಜಗತ್ತಿನ ಕಥೆ ಹೊಂದಿದೆ. ಅಲ್ಲಿನ ಯಾಂತ್ರಿಕ ಜೀವನ ಹಾಗೂ ವೇಳೆ ಅಭಾವದ ನಡುವೆ ಸಾಗುವ ಅವರ ಜೀವನದಲ್ಲಿ ಸಂಬಂಧಗಳ ಯೋಚಿಸಲು ಅವರಿಗೆ ಸಿಗುವ ಕಾಲ ತೀರಾ ಕಡಿಮೆ. ಶಿಕ್ಷಣ ಮುಗಿಸಿ ಸಾಫ್ಟ್ ವೇರ್ ಅಥವಾ ಕಾರ್ಪೋರೇಟ್ ಕಂಪನಿಗಳಲ್ಲಿ ಕೆಲಸ ಗಿಟ್ಟಿಸುವುದೇ ಒಂದು ಮಹತ್ಸಾದನೆ ಎಂಬಂತಿರುವಾಗ ಉಳಿದಿದ್ದು ಇಲ್ಲಿ ಗೌಣವಾಗಿಬಿಡುತ್ತಿದೆ.

  ಪ್ರೀತಿ-ಪ್ರೇಮ, ಮದುವೆ, ಸಂಬಂಧಗಳು ಹಾಗೂ ಕೌಟುಂಬಿಕ ಜೀವನದ ಕನಸು ಎಲ್ಲರಂತೆ ಅವರಿಗೂ ಇರುತ್ತದೆಯಾದರೂ, ಅವೆಲ್ಲವೂ ಹೆಚ್ಚಾಗಿ ನಡೆಯುವುದು 'ಅನುಕೂಲ ಸಿಂಧು' ತತ್ವದಡಿ. ಅಂದರೆ, ಸಂಬಳ ಹಾಗೂ ವಿದ್ಯಾರ್ಹತೆಯೇ ಅವರ ಸಂಬಂಧಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ದಿನದಲ್ಲಿರುವ 24 ಗಂಟೆಗಳಲ್ಲಿ 9-10 ಗಂಟೆಗಳನ್ನು ಕೆಲಸದಲ್ಲಿ ಕಳೆಯುವ ಅವರು ಸುಮಾರು 4-5 ಗಂಟೆಗಳನ್ನು ಆಫೀಸಿಗೆ ಓಡಾಡುವುದಕ್ಕಾಗಿ ಮೀಸಲಿಡಬೇಕಾಗುತ್ತದೆ. ಮುಂದಿನ ಪುಟ ನೋಡಿ...

  <ul id="pagination-digg"><li class="next"><a href="/news/short-film-route-no-1-deepak-gowda-divya-release-069180.html">Next »</a></li></ul>
  English summary
  The part of the Films, short movies are now coming into limelight. Here is Kannada Short Film titled 'Route No 1' to release nex month, on 10th November 2012. Deepak R Gowda and Divya are in lead role for this Naveen Kumar GG Directed movie. &#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X