For Quick Alerts
  ALLOW NOTIFICATIONS  
  For Daily Alerts

  ಅರುಣಾ ಕುಮಾರಿಯ ಅಸಲಿ ರೂಪ ಬಹಿರಂಗಪಡಿಸಿದ ನಟ ದರ್ಶನ್

  |

  ನಟ ದರ್ಶನ್ ಮತ್ತು ಸ್ನೇಹಿತರ ಹೆಸರಿನಲ್ಲಿ 25 ಕೋಟಿ ರೂಪಾಯಿ ವಂಚನೆ ಮಾಡಲು ಯತ್ನಿಸಿರುವ ಮಹಿಳೆ ಅರುಣಾ ಕುಮಾರಿ ಬಗ್ಗೆ ನಟ ದರ್ಶನ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಅರುಣಾ ಕುಮಾರಿ ಯಾರು? ಆಕೆ ಹೇಗೆ ಪರಿಚಯ ಎಂದು ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದಾರೆ.

  ಅರುಣಾ ಕುಮಾರಿ ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡು ನಿರ್ಮಾಪಕ ಉಮಾಪತಿ, ದರ್ಶನ್ ಹಾಗೂ ಸ್ನೇಹಿತರ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಲು ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಬೆಂಗಳೂರು ಹಾಗೂ ಮೈಸೂರಿನಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ. ಇದೀಗ, ಅರುಣಾ ಕುಮಾರಿಯ ಪತಿಯನ್ನು ಕರೆತಂದಿರುವ ನಟ ದರ್ಶನ್, ಆಕೆಯ ಬ್ಯಾಂಕ್ ಮ್ಯಾನೇಜರ್ ಅಲ್ಲ ಎಂಬ ಸತ್ಯವನ್ನು ಹೊರಹಾಕಿದ್ದಾರೆ. ಮುಂದೆ ಓದಿ...

  ಪಿಯುಸಿ ಪಾಸ್ ಆಗಿಲ್ಲ

  ಪಿಯುಸಿ ಪಾಸ್ ಆಗಿಲ್ಲ

  ಅರುಣಾ ಕುಮಾರಿ ಎನ್ನುವ ಮಹಿಳೆ ಬ್ಯಾಂಕ್ ಮ್ಯಾನೇಜರ್ ಅಲ್ಲ, ಆಕೆ ಪಿಯುಸಿ ಸಹ ಪಾಸ್ ಆಗಿಲ್ಲ. ಹಾಗಿದ್ಮೇಲೆ ಬ್ಯಾಂಕ್ ಹುದ್ದೆ ಹೇಗೆ ಸಿಗಲು ಸಾಧ್ಯ ಎಂದು ನಟ ದರ್ಶನ್ ಮೈಸೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.

  ದರ್ಶನ್ ಹೆಸರಿನಲ್ಲಿ ವಂಚನೆಗೆ ಯತ್ನ: 25 ಕೋಟಿ ಡೀಲ್ ಬಗ್ಗೆ ಸ್ಫೋಟಕ ಅಂಶಗಳನ್ನು ಬಿಚ್ಚಿಟ್ಟ ದಾಸದರ್ಶನ್ ಹೆಸರಿನಲ್ಲಿ ವಂಚನೆಗೆ ಯತ್ನ: 25 ಕೋಟಿ ಡೀಲ್ ಬಗ್ಗೆ ಸ್ಫೋಟಕ ಅಂಶಗಳನ್ನು ಬಿಚ್ಚಿಟ್ಟ ದಾಸ

  ಎರಡನೇ ನಂಬರ್‌ನಿಂದ ಸಿಕ್ಕಿ ಬಿದ್ದರು

  ಎರಡನೇ ನಂಬರ್‌ನಿಂದ ಸಿಕ್ಕಿ ಬಿದ್ದರು

  ''ಆಕೆ ಎರಡು ನಂಬರ್‌ ಬಳಸುತ್ತಿದ್ದರು. ಲೋನ್ ವಿಚಾರವಾಗಿ ಒಂದು ನಂಬರ್‌ನಲ್ಲಿ ವಾಟ್ಸಾಪ್ ಚಾಟ್ ಮಾಡುತ್ತಿದ್ದರು. ಅದೇ ಸಂದರ್ಭದಲ್ಲಿ ಇನ್ನೊಂದು ನಂಬರ್‌ನಿಂದ ''ಕಾಲ್ ಯೂ ಲೇಟರ್'' ಅಂತ ಮೆಸೆಜ್ ಮಾಡಿದರು. ಎರಡನೇ ನಂಬರ್ ಯಾವುದು ಅಂತ ಟ್ರೂ ಕಾಲರ್‌ನಲ್ಲಿ ಪರಿಶೀಲಿಸಿದಾಗ ಅದು ಕುಮಾರ್ ಎನ್ನುವ ಹೆಸರಿನಲ್ಲಿತ್ತು. ಕುಮಾರ್ ಯಾರು ಎಂಬ ಅನುಮಾನ ಉಂಟಾಗಿ ಸ್ನೇಹಿತ ಹರ್ಷಾಗೆ ವಿಷಯ ತಿಳಿಸಿದೆ. ಆಗ ಕುಮಾರ್ ಎಂಬ ವ್ಯಕ್ತಿ ಸಿಕ್ಕರು'' ಎಂದು ನಟ ದರ್ಶನ್ ಬಹಿರಂಗಪಡಿಸಿದರು.

  ಗಂಡನಿಂದ ದೂರವಿರುವ ಮಹಿಳೆ

  ಗಂಡನಿಂದ ದೂರವಿರುವ ಮಹಿಳೆ

  ''ಹರ್ಷಾ ಅವರ ಯೂನಿಯನ್‌ನಲ್ಲಿ ಕುಮಾರ್ ಎಂಬಾತ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡ್ತಾರೆ. ಅವರ ಬಳಿ ಅರುಣಾ ಕುಮಾರಿ ಬಗ್ಗೆ ಫೋಟೋ ತೋರಿಸಿ ವಿಚಾರಿಸಿದಾಗ, 'ಈಕೆ ನನ್ನ ಪತ್ನಿ, ಆದರೆ ನಾವಿಬ್ಬರು ದೂರವಾಗಿ 8 ವರ್ಷ ಆಗಿದೆ. ಈಗ ಅವರೊಂದಿಗೆ ನಾನು ಇಲ್ಲ' ಎಂದರು ತಿಳಿಸಿದರು. ಪಿಯುಸಿ ಪಾಸ್ ಆಗಿಲ್ಲ ಎಂದು ಸಹ ಅವರೇ ಹೇಳಿದರು'' ಎನ್ನುವ ವಿಷಯವನ್ನು ದಾಸ ಹೊರಹಾಕಿದರು.

  ಯಾರೆ ಆದರು ನಾನು ಬಿಡಲ್ಲ; ವಂಚನೆ ಪ್ರಕರಣದ ಬಗ್ಗೆ ನಟ ದರ್ಶನ್ ಪ್ರತಿಕ್ರಿಯೆಯಾರೆ ಆದರು ನಾನು ಬಿಡಲ್ಲ; ವಂಚನೆ ಪ್ರಕರಣದ ಬಗ್ಗೆ ನಟ ದರ್ಶನ್ ಪ್ರತಿಕ್ರಿಯೆ

  ಕುಮಾರಸ್ವಾಮಿಯನ್ನು ಕರಿಯ ಎಂದು ನಿಂದಿಸಿದ ಟ್ರೋಲ್ ಪೇಜ್ ವಿರುದ್ಧ ದೂರು ದಾಖಲು
  ಪ್ರೆಸ್‌ಮೀಟ್‌ಗೆ ಬಂದಿದ್ದ ಅರುಣಾ ಕುಮಾರಿ ಗಂಡ

  ಪ್ರೆಸ್‌ಮೀಟ್‌ಗೆ ಬಂದಿದ್ದ ಅರುಣಾ ಕುಮಾರಿ ಗಂಡ

  ಈ ಪ್ರಕರಣದ ಕುರಿತು ನಟ ದರ್ಶನ್ ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ಮಾಡಿದರು. ಈ ವೇಳೆ ಅರುಣಾ ಕುಮಾರಿ ಅವರ ಪತಿಯನ್ನು ಪ್ರೆಸ್‌ಮೀಟ್‌ಗೆ ಕರೆದುಕೊಂಡು ಬಂದಿದ್ದರು. ಅರುಣಾ ಕುಮಾರಿ ಸಂಬಂಧ ಬ್ಯಾಂಕಿನಲ್ಲೂ ವಿಚಾರಣೆ ಮಾಡಿದ್ದು, ಅಲ್ಲಿಯೂ ಸಿಬ್ಬಂದಿ ಅಲ್ಲ ಎಂದು ತಿಳಿದು ಬಂದಿದೆ.

  English summary
  Rs 25 cr fraud case controversy: Darshan revealed Aruna Kumari Background in Press Meet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X