For Quick Alerts
  ALLOW NOTIFICATIONS  
  For Daily Alerts

  ತಪ್ಪಲ್ವಾ ಇದು.. ನೀವೇನಾದ್ರು ಸಲ್ಯೂಷನ್ ಕೊಡ್ತೀರಾ?, ಮಾಧ್ಯಮದವರಿಗೆ ದರ್ಶನ್ ಪ್ರಶ್ನೆ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಉಮಾಪತಿ ಹೆಸರಿನಲ್ಲಿ 25 ಕೋಟಿ ರೂ. ವಂಚನೆ ಯತ್ನ ಪ್ರಕರಣಕ್ಕೆ ಬಹುತೇಕ ತೆರೆಬಿದ್ದಿದೆ. ದರ್ಶನ್ ಮತ್ತು ಉಮಾಪತಿ ಇಬ್ಬರೂ ಸಂದಾನ ಮಾಡಿಕೊಳ್ಳುವ ಮೂಲಕ ವಿವಾದಕ್ಕೆ ಅಂತ್ಯ ಹಾಡಿದ್ದಾರೆ. ಆದರೆ ಕಾನೂನು ಹೋರಾಟ ಮುಂದುವರೆಯಲಿದೆ ಎಂದು ನಿರ್ಮಾಪಕ ಉಮಾಪತಿ ಸ್ಪಷ್ಟಪಡಿಸಿದ್ದಾರೆ.

  ದರ್ಶನ್ ಮತ್ತು ಉಮಾಪತಿ ನಡುವೆ ವೈಮನಸ್ಸು ಮೂಡಿದೆ, ಇಬ್ಬರ ಸ್ನೇಹ ಮುರಿದುಬಿದ್ದಿದೆ ಎನ್ನುವ ಎನ್ನುವ ಮಾತು ಕೇಳಿಬರುತ್ತಿತ್ತು. ಆದರೆ ನಿನ್ನೆ ಇಬ್ಬರು ಒಟ್ಟಿಗೆ ಕಾಣಿಸಿಕೊಂಡು ಒಂದಾಗಿದ್ವಿ, ಒಂದಾಗಿರೋಣ ಎನ್ನುವ ಸಂದೇಶ ರವಾನಿಸುವ ಮೂಲಕ ಮುಂದೆಯೂ ಸ್ನೇಹಿತರಾಗಿಯೇ ಇರುತ್ತೇವೆ ಎನ್ನುವುದನ್ನು ಹೇಳಿದ್ದಾರೆ.

  ಇನ್ನು ನಿರ್ಮಾಪಕ ಉಮಾಪತಿ ಕೂಡ ಮಾಧ್ಯಮದವರ ಜೊತೆ ಮಾತನಾಡಿ, ದರ್ಶನ್ ಸರ್ ಕೂಡ ಹೇಳಿದ್ದಾರೆ ನಿರ್ಮಾಪಕರನ್ನು ಬಿಟ್ಟುಕೊಡುವುದಿಲ್ಲ ಎಂದು, ಇಬ್ಬರ ಸ್ನೇಹ ಹಾಗೆ ಇದೆ ಎಂದಿದ್ದಾರೆ.

  ಈ ಎಲ್ಲಾ ಬೆಳವಣಿಗೆ ಬಳಿಕ ದರ್ಶನ್ ಹೇಳಿಕೆ ಪಡೆಯಲು ಮನೆ ಬಳಿ ಹೋಗಿದ್ದ ಮಾಧ್ಯಮದವರ ವಿರುದ್ಧ ದರ್ಶನ್ ಅಸಮಾಧಾನ ಹೊರಹಾಕಿದ್ದಾರೆ. 'ನಾನು, ನನ್ನ ಸ್ನೇಹಿತರು ಮತ್ತು ಉಮಾಪತಿ ಎಲ್ಲರೂ ಹೇಳಿಕೆ ನೀಡಿ ಆಗಿದೆ. ಪದೇ ಪದೇ ಹೀಗೆ ಮಾಡುವುದು ತಪ್ಪಲ್ವಾ' ಎಂದು ಪ್ರಶ್ನೆ ಮಾಡಿದ್ದಾರೆ.

  ಮಾಧ್ಯಮದವರನ್ನು ನೋಡಿ ಮನೆಯಿಂದ ಹೊರಬಂದ ದರ್ಶನ್, ಮಾಧ್ಯಮದವರನ್ನೇ ಪ್ರಶ್ನೆ ಮಾಡಿದ್ರು. "ಪದೇ ಪದೇ ಹೀಗ್ ಹಿಡ್ಕೊಂಡ್ರೆ ತಪ್ಪಲ್ವಾ?. ನೀವೇನಾದ್ರು ಸಲ್ಯೂಷನ್ ಕೊಡ್ತೀರಾ? ಸದ್ಯ ಪೊಲೀಸ್ ಬಳಿ ಇದೆ, ನಾನು ಮಾತನಾಡುತ್ತೇನೆ. ಮಾಧ್ಯಮದವರು ನೀವು ಇದಕ್ಕೇನಾದ್ರು ಸಲ್ಯೂಷನ್ ಕೊಡ್ತೀರಾ? ಉಮಾಪತಿ ಹೇಳಿ ಆಯ್ತು, ಸ್ನೇಹಿತರು ಮತ್ತು ನಾನು ಹೇಳಿ ಆಯ್ತು. ಈಗ ಪೊಲೀಸ್ ಬಳಿ ಇದೆ. ಸಮಯ ವ್ಯರ್ಥ ಮಾಡಬೇಡಿ" ಎಂದು ಹೇಳಿ ಮನೆಯೊಳಗೆ ಹೊರಟು ಹೋದ್ರು.

  ನಮ್ಮ ನಿರ್ಮಾಪಕರ ಕೈವಾಡ ಇಲ್ಲ ಎಂದು ಆರೋಪ-ಪ್ರತ್ಯಾರೋಪಕ್ಕೆ ಬ್ರೇಕ್ ಹಾಕಿದ Darshan | Filmibeat Kannada

  ಸದ್ಯ ಈ ಪ್ರಕರಣ ಪೊಲೀಸರ ಬಳಿ ಇದೆ. ಆದರೆ ಇತ್ತ ಲೋನ್ ಲೇಡಿ ಅರುಣಾ ಕುಮಾರಿ, ಉಮಾಪತಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. "ಇದಕ್ಕೆಲ್ಲ ಕಾರಣ ಉಮಾಪತಿ, ನನ್ನನ್ನು ಉಪಾಯೋಗಿಸಿಕೊಂಡು ತಪ್ಪು ಮಾಡಿದ್ರು, ಅವರನ್ನು ನಾನು ಸುಮ್ಮನೆ ಬಿಡಲ್ಲ" ಎಂದು ಕಿಡಿಕಾರುತ್ತಿದ್ದಾರೆ. ಈ ಪ್ರಕರಣ ಇನ್ನೆಲ್ಲಿಗೆ ಹೋಗಿ ತಲುಪುತ್ತೊ ಕಾದು ನೋಡಬೇಕು.

  English summary
  Rs 25 Crore Fraud Case: Darshan asks Media to give solution for the case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X