»   » ವೆಂಕಟ್ 'ಡಿಕ್ಟೇಟರ್'ಗೆ ಎಸ್.ನಾರಾಯಣ್ ಆಕ್ಷನ್-ಕಟ್

ವೆಂಕಟ್ 'ಡಿಕ್ಟೇಟರ್'ಗೆ ಎಸ್.ನಾರಾಯಣ್ ಆಕ್ಷನ್-ಕಟ್

Posted By:
Subscribe to Filmibeat Kannada

ಬಿಗ್ ಬಾಸ್ ಖ್ಯಾತಿಯ ಹುಚ್ಚ ವೆಂಕಟ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಬಿ.ವಿಜಯ್ ಕುಮಾರ್ ಅವರ 'ಡಿಕ್ಟೇಟರ್' ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ನಾವು ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ ತಾನೇ.

'ಡಿಕ್ಟೇಟರ್' ಚಿತ್ರಕ್ಕೆ ಫೈರಿಂಗ್ ಸ್ಟಾರ್ ವೆಂಕಟ್ ಅವರು ಸರಿಯಾದ ಹೀರೋ ಎಂದು ನಿರ್ಧರಿಸಿ ಅವರನ್ನು ನಾಯಕನಾಗಿ ಆರಿಸಲಾಗಿದೆ. ಆದರೆ ನಾಯಕಿ ಯಾರು ಎಂಬುದು ಇನ್ನೂ ಗೊತ್ತಾಗಿಲ್ಲವಾದರೂ ಚಿತ್ರಕ್ಕೆ ನಿರ್ದೇಶನ ಮಾಡುವ ಜವಾಬ್ದಾರಿ ಹೊತ್ತಿರುವವರು ಖ್ಯಾತ ನಿರ್ದೇಶಕ ಎಸ್.ನಾರಾಯಣ್ ಅವರು.['ಡಿಕ್ಟೇಟರ್' ಆದ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್]

S Narayan To Say Action-Cut For Huccha Venkat's 'Dictator'

ಹೌದು 'ಜಮೀನ್ದಾರರು' 'ಸಿಂಹಾದ್ರಿಯ ಸಿಂಹ' 'ಚೆಲುವಿನ ಚಿತ್ತಾರ' ಮುಂತಾದ ಸಿನಿಮಾಗಳ ಖ್ಯಾತಿಯ ನಿರ್ದೇಶಕ ಎಸ್.ನಾರಾಯಣ್ ಅವರು ಯೂಟ್ಯೂಬ್ ಸ್ಟಾರ್ ವೆಂಕಟ್ ಅವರ 'ಡಿಕ್ಟೇಟರ್'ಗೆ ಆಕ್ಷನ್-ಕಟ್ ಹೇಳಲು ತಯಾರಾಗಿದ್ದಾರೆ.

ಸಂಕ್ರಾತಿ ಹಬ್ಬದಂದು 'ಡಿಕ್ಟೇಟರ್'ಗೆ ಪೂಜೆ ನೇರವೇರಿಸಿ ಸಿನಿಮಾ ಸೆಟ್ಟೇರಲಿದ್ದು, ಜನವರಿ ತಿಂಗಳ ಕೊನೆಗೆ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ. ಸದ್ಯಕ್ಕೆ ನಟ ನಿರ್ಮಾಪಕ ಮತ್ತು ನಿರ್ದೇಶಕರು ಯಾರು ಎಂಬುದು ಪಕ್ಕಾ ಆಗಿದ್ದು, ಇನ್ನುಳಿದಂತೆ ನಟಿ ಮತ್ತು ಉಳಿದ ತಾರಾಗಣ ಇನ್ನು ಅಂತಿಮವಾಗಿಲ್ಲ.[ಪುಸ್ತಕದಲ್ಲಿ ವೆಂಕಟ್ - ಹುಚ್ಚು ಮನಸ್ಸಿನ ನೂರು ಮುಖಗಳು! ]

S Narayan To Say Action-Cut For Huccha Venkat's 'Dictator'

ಎಸ್ ನಾರಾಯಣ್ ಅವರು ಕೊನೆಯದಾಗಿ ದುನಿಯಾ ವಿಜಯ್ ಅವರಿಗೆ 'ದಕ್ಷ' ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ ನಂತರ ಇದೀಗ ವೆಂಕಟ್ ಅವರಿಗೆ 'ಡಿಕ್ಟೇಟರ್' ಗೆ ನಿರ್ದೇಶನ ಮಾಡಲು ತಯಾರಾಗಿದ್ದಾರೆ. ಈ ಮೊದಲು ಎಸ್.ನಾರಾಯಣ್ ಮತ್ತು ನಿರ್ಮಾಪಕ ವಿಜಯ್ ಪ್ರಸಾದ್ ಅವರ ಜುಗಲ್ ಬಂದಿಯಲ್ಲಿ ಮೂಡಿಬಂದಿದ್ದ 'ಸಿಂಹಾದ್ರಿಯ ಸಿಂಹ' ಸೂಪರ್ ಹಿಟ್ ಆಗಿತ್ತು.

ಅಂದಹಾಗೆ 'ಸಿಂಹಾದ್ರಿಯ ಸಿಂಹ' ಚಿತ್ರದಲ್ಲಿ ದಿವಂಗತ ನಟ ಸಾಹಸಸಿಂಹ ವಿಷ್ಣುವರ್ಧನ್ ಅವರು ಮಿಂಚಿದ್ದರು. ಮಾತ್ರವಲ್ಲದೆ ಫೈರಿಂಗ್ ಸ್ಟಾರ್ ವೆಂಕಟ್ ಅವರು ಡಾ. ವಿಷ್ಣು ಅವರ ದೊಡ್ಡ ಅಭಿಮಾನಿ ಕೂಡ.

English summary
Senior director S Narayan is all set to direct a new film with Huchcha Venkat in the lead role titled Dictator. Former Karnataka Film Chamber of Commerce president B Vijaykumar will produce the film. More details of the project are awaited and as of now there is no confirmation of the other cast and crew members.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada