»   » ಮತ್ತೆ ಕನ್ನಡದಲ್ಲಿ 'ವಿಷ್ಣುವರ್ಧನ' ಟೈಟಲ್ ಗಲಾಟೆ ಶುರುವಾಗುತ್ತಾ.?

ಮತ್ತೆ ಕನ್ನಡದಲ್ಲಿ 'ವಿಷ್ಣುವರ್ಧನ' ಟೈಟಲ್ ಗಲಾಟೆ ಶುರುವಾಗುತ್ತಾ.?

Posted By:
Subscribe to Filmibeat Kannada

ಕನ್ನಡದ ಹೆಮ್ಮೆಯ ನಟ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಈಗ ಮತ್ತೊಂದು ಸಿನಿಮಾ ಬರುತ್ತಿದೆ. ಚಿತ್ರಕ್ಕೆ 'S/O ವಿಷ್ಣುವರ್ಧನ' ಎಂಬ ಟೈಟಲ್ ಇಡಲಾಗಿದ್ದು, ಅನೇಕ ಗೊಂದಲಗಳಿಗೆ ಕಾರಣವಾಗಿದೆ.

'ವಿಷ್ಣುವರ್ಧನ' ಟೈಟಲ್ ಪದೇ ಪದೇ ಕನ್ನಡದಲ್ಲಿ ಸದ್ದು ಮಾಡುತ್ತಿದೆ. ನಟ ಸುದೀಪ್ 'ಒನ್ಲಿ ವಿಷ್ಣುವರ್ಧನ' ಹೆಸರಿನಲ್ಲಿ ಈಗಾಗಲೇ ಸಿನಿಮಾ ಮಾಡಿದ್ದಾರೆ. ಜೊತೆಗೆ ನಿರ್ದೇಶಕ ನಾಗಶೇಖರ್ 'ರಾಜ ವಿಷ್ಣುವರ್ಧನ' ಹೆಸರಿನಲ್ಲಿ ಸಿನಿಮಾ ಮಾಡುವ ಬಗ್ಗೆ ಸುದ್ದಿ ಇದೆ. ಇವೆಲ್ಲರ ನಡುವೆ 'S/O ವಿಷ್ಣುವರ್ಧನ' ಎಂಬ ಮತ್ತೊಂದು ಸಿನಿಮಾ ಈಗ ಶುರುವಾಗುತ್ತಿದೆ.

'ನಾಗರಹಾವು' ನಂತರ ಮತ್ತೆ ತೆರೆಮೇಲೆ ಅಬ್ಬರಿಸಲಿರುವ ವಿಷ್ಣು ದಾದ!

ಸದ್ಯ ಶುರುವಾಗಿರುವ 'S/O ವಿಷ್ಣುವರ್ಧನ' ಚಿತ್ರದ ಟೈಟಲ್ ದೊಡ್ಡ ಗೊಂದಲವನ್ನು ಹುಟ್ಟಿಸಿದೆ. ಮುಂದೆ ಓದಿ...

'S/O ವಿಷ್ಣುವರ್ಧನ'

ಸದ್ಯ ಕನ್ನಡದಲ್ಲಿ 'S/O ವಿಷ್ಣುವರ್ಧನ' ಎಂಬ ಸಿನಿಮಾ ಬರುತ್ತಿದ್ದು, ಚಿತ್ರದ ಟೈಟಲ್ ಬಗ್ಗೆ ಗೊಂದಲ ಉಂಟಾಗಿದೆ. ಹೋಯ್ಸಳ ಮೂರ್ತಿ ಈ ಚಿತ್ರದ ನಾಯಕ ಮತ್ತು ನಿರ್ದೇಶಕರಾಗಿದ್ದಾರೆ.

ಟೈಟಲ್ ಸಿಕ್ಕಿದೆ

''S/O ವಿಷ್ಣುವರ್ಧನ' ಎಂಬ ಟೈಟಲ್ ಈಗಾಗಲೇ ಫಿಲ್ಮ್ ಛೆಂಬರ್ ನಲ್ಲಿ ನಾವು ನೋಂದಣಿ ಮಾಡಿದ್ದೇವೆ'' ಎಂದು ಚಿತ್ರದ ನಾಯಕ ಕಂ ನಿರ್ದೇಶಕ ಹೊಯ್ಸಳ ಮೂರ್ತಿ ಹೇಳುತ್ತಾರೆ.

ಮತ್ತೆ ಅಭಿಮಾನದ ಹೂಮಳೆಯಲ್ಲಿ ಮುಳುಗಿದ 'ಸಾಹಸಸಿಂಹ'!

ಉಮೇಶ್ ಬಣಕಾರ್ ಸ್ಪಷ್ಟನೆ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾದ್ಯಕ್ಷ ಉಮೇಶ್ ಬಣಕಾರ್ ''S/O ವಿಷ್ಣುವರ್ಧನ' ಹೆಸರಿನಲ್ಲಿ ಯಾವುದೇ ಟೈಟಲ್ ರಿಜಿಸ್ಟರ್ ಆಗಿಲ್ಲ'' ಅಂತ 'ಫಿಲ್ಮಿಬೀಟ್ ಕನ್ನಡ'ಕ್ಕೆ ತಿಳಿಸಿದ್ದಾರೆ.

ಗೊಂದಲ ಹುಟ್ಟಿಸಿದೆ

ಚಿತ್ರದ ನಟ, ನಿರ್ದೇಶಕ ಹೊಯ್ಸಳ ಮೂರ್ತಿ ಟೈಟಲ್ ಸಿಕ್ಕಿದೆ ಅಂತ ಹೇಳಿದ್ರೆ, ಫಿಲ್ಮ್ ಛೆಂಬರ್ ಉಪಾದ್ಯಕ್ಷರು ಟೈಟಲ್ ನೊಂದಣಿ ಆಗಿಲ್ಲ ಅಂತ ಹೇಳುತ್ತಾರೆ. ಈ ಎರಡು ಹೇಳಿಕೆಗಳು ಸದ್ಯ ದೊಡ್ಡ ಗೊಂದಲವನ್ನು ಹುಟ್ಟಿಸಿದೆ.

ರಿಯಲ್ ಸ್ಟೋರಿ

ಹೊಯ್ಸಳ ಮೂರ್ತಿ ಹೇಳುವ ಪ್ರಕಾರ ಇದು ರಿಯಲ್ ಸ್ಟೋರಿಯ ಸಿನಿಮಾ. 1981 ರಲ್ಲಿ ನಡೆದ ಈ ಘಟನೆ ಅಂಡರ್ ವರ್ಲ್ಡ್ ಕಥೆ ಹೊಂದಿದೆಯಂತೆ.

Dr. Vishnuvardhan fans justify that 'Mysore Ratna' title should not be given to young stars

ವಿವಾದ ಹುಟ್ಟಿಸುತ್ತಾ..?

ಸಿನಿಮಾದ ಕಥೆ ಒಬ್ಬ ವಿಷ್ಣುವರ್ಧನ್ ಅಭಿಮಾನಿ ಮತ್ತು ಡಾನ್ ಜಯರಾಜ್ ನಡುವೆ ನಡೆಯುವ ಕಥೆಯಂತೆ. ಈ ರೀತಿಯ ಕಥೆಗೆ 'S/O ವಿಷ್ಣುವರ್ಧನ' ಎಂಬ ಹೆಸರು ಇಟ್ಟಿರುವುದು ಮುಂದೆ ವಿವಾದ ಸೃಷ್ಟಿ ಮಾಡುತ್ತದೆಯಾ ಎಂಬ ಅನುಮಾನ ಮೂಡಿಸಿದೆ.

English summary
Kannada movie 'S/O Vishnuvardhana' might create title controversy in Sandalwood
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada