For Quick Alerts
  ALLOW NOTIFICATIONS  
  For Daily Alerts

  ಲಾಕ್ ಡೌನ್ ನಡುವೆಯೂ ಕಿತ್ತಾಟ: ಜೈ ಜಗದೀಶ್ ವಿರುದ್ಧ ಪೊಲೀಸರಿಗೆ ಸಾ.ರಾ ಗೋವಿಂದು ದೂರು

  |

  ಲಾಕ್ ಡೌನ್ ನಡುವೆ ಸಿನಿಮಾ ಚಿತ್ರೀಕರಣ ಸಂಬಂಧಿತ ಚಟುವಟಿಕೆಗಳು ಸ್ಥಗಿತಗೊಂಡು ಎರಡು ತಿಂಗಳಾಗಿವೆ. ಸಿನಿಮಾ ಕಾರ್ಮಿಕರಿಗೆ ಸಹಾಯ ಮಾಡುವಂತಹ ಕಾರ್ಯಗಳಷ್ಟೇ ನಡೆಯುತ್ತಿದೆ. ಸೆಲೆಬ್ರಿಟಿಗಳು ಜನರಿಗೆ ಸಂದೇಶ ನೀಡುತ್ತಾ, ಮನೆಯಲ್ಲಿಯೇ ಕುಳಿತು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಆದರೆ ಚಿತ್ರರಂಗದ ಇತರೆ ಜಂಜಾಟಗಳು ಮಾತ್ರ ನಿಂತಿಲ್ಲ.

  Roberrt : ಒಂದೇ ಗಂಟೆಯಲ್ಲಿ 2 ಲಕ್ಷ ವೀವ್ಸ್ ದಾಟಿದ ರಾಬರ್ಟ್ ಹಾಡು | Darshan | Roberrt Kannada

  ಹಿರಿಯ ನಿರ್ಮಾಪಕ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಹಾಗೂ ಹಿರಿಯ ನಟ, ನಿರ್ಮಾಪಕ ಜೈ ಜಗದೀಶ್ ನಡುವೆ ಜಗಳ ನಡೆದಿದ್ದು, ಇದು ಪೊಲೀಸರ ತನಕವೂ ಹೋಗಿದೆ. ಜೈ ಜಗದೀಶ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಾ.ರಾ. ಗೋವಿಂದು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಮುಂದೆ ಓದಿ...

  ಸಾ.ರಾ ಗೋವಿಂದು-ಜೈ ಜಗದೀಶ್ ಜಗಳ?

  ಸಾ.ರಾ ಗೋವಿಂದು-ಜೈ ಜಗದೀಶ್ ಜಗಳ?

  ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಸಿನಿಮಾ ಕಾರ್ಮಿಕರಿಗೆ ದಿನಸಿ ಹಂಚಿಕೆ ಮತ್ತು ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ವಿಚಾರವಾಗಿ ಕಳೆದ ಮಂಗಳವಾರ ಇಬ್ಬರು ಪರಸ್ಪರ ಕೈ ಕೈ ಮಿಲಾಯಿಸಿದ್ದರು. ಸ್ಥಳದಲ್ಲಿದ್ದ ಇತರರು ಅವರ ಜಗಳ ಬಿಡಿಸಿ ಸಮಾಧಾನ ಪಡಿಸಿದ್ದಾರೆ ಎನ್ನಲಾಗಿದೆ.

  ಆಡಿಯೋ ಕ್ಲಿಪ್ ವೈರಲ್

  ಆಡಿಯೋ ಕ್ಲಿಪ್ ವೈರಲ್

  ವಾಣಿಜ್ಯಮಂಡಳಿಯಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸಾ.ರಾ. ಗೋವಿಂದು ಕೆಲವು ಕೆಲಸಗಳನ್ನು ಮಾಡಿದ್ದರು. ಈ ಬಗ್ಗೆ ಜೈ ಜಗದೀಶ್ ಇತ್ತೀಚೆಗೆ ಟೀಕೆ ಮಾಡಿದ್ದರು. ಸಾ.ರಾ. ಗೋವಿಂದು ಬಗ್ಗೆ ಅವರು ಅವಾಚ್ಯವಾಗಿ ಮಾತನಾಡಿದ್ದರು ಎನ್ನಲಾದ ಆಡಿಯೋ ಕ್ಲಿಪ್ ಒಂದು ಹರಿದಾಡಿತ್ತು.

  ದೂರು ನೀಡಿದ ಸಾ.ರಾ. ಗೋವಿಂದು

  ದೂರು ನೀಡಿದ ಸಾ.ರಾ. ಗೋವಿಂದು

  ಜೈ ಜಗದೀಶ್ ಅವರ ವರ್ತನೆಯಿಂದ ಕೋಪಗೊಂಡಿರುವ ಸಾ.ರಾ. ಗೋವಿಂದು, ಪೊಲೀಸ್ ಆಯುಕ್ತ ಭಾಸ್ಕರ ರಾವ್ ಅವರಿಗೆ ದೂರು ನೀಡಿದ್ದಾರೆ. ಜೈ ಜಗದೀಶ್ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.

  ಅಬಾಚ್ಯ ಶಬ್ಧಗಳಿಂದ ನಿಂದನೆ

  ಅಬಾಚ್ಯ ಶಬ್ಧಗಳಿಂದ ನಿಂದನೆ

  'ಜೈ ಜಗದೀಶ್ ಅವರು ನನ್ನ ಹಾಗೂ ನನ್ನ ಸ್ನೇಹಿತರ ವಿರುದ್ಧ ಉದ್ದೇಶಪೂರ್ವಕವಾಗಿ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ, ತೀರಾ ಕೆಳಮಟ್ಟದಲ್ಲಿ ಮಾತನಾಡಿದ್ದಾರೆ. ಬಾಯಿಗೆ ಬಂದಂತೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ. ಈ ಸಂಭಾಷಣೆಯನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ನನ್ನ ತೇಜೋವಧೆ ಮಾಡಲಾಗಿದೆ' ಎಂದು ಆರೋಪಿಸಿದ್ದಾರೆ.

  ಮಾನಸಿಕ ನೆಮ್ಮದಿ ಹಾಳು ಮಾಡಿದ್ದಾರೆ

  ಮಾನಸಿಕ ನೆಮ್ಮದಿ ಹಾಳು ಮಾಡಿದ್ದಾರೆ

  'ಇದರಿಂದ ನನ್ನ ಕುಟುಂಬದವರು, ಹಿತೈಷಿಗಳು ಮತ್ತು ಸಹೋದ್ಯೋಗಿಗಳು ಮಾನಸಿಕವಾಗಿ ಜರ್ಝರಿತರಾಗಿದ್ದಾರೆ. ನಾನು ಇಷ್ಟ ವರ್ಷ ಸಂಪಾದಿಸಿದ ಮಾನ ಮರ್ಯಾದೆ ಹಾಳಾಗಿದೆ. ಅವರು ಉದ್ದೇಶಪೂರ್ವಕವಾಗಿ ನನ್ನ ತೇಜೋವಧೆ, ಮಾನನಷ್ಟ, ಮಾನಸಿಕ ನೆಮ್ಮದಿ ಹಾಳು ಮಾಡಿದ್ದಾರೆ. ಅದಕ್ಕಾಗಿ ಅವರ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು' ಎಂದು ದೂರಿನಲ್ಲಿ ಬರೆದಿದ್ದಾರೆ. ಪತ್ರದ ಜತೆಗೆ ಆಡಿಯೋ ಕ್ಲಿಪ್ ಅನ್ನು ಕೂಡ ನೀಡಿದ್ದಾರೆ.

  English summary
  Producer Sa Ra Govindu files a complaint against senior actor Jai Jagadish to Police Commissioner for scolding him with bad words.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X