»   » ಪಿಯು ಸ್ಟೂಡೆಂಟ್ ಸಾರಾ ಗೋವಿಂದು ಮಗನ ಡವ್ ಕಹಾನಿ

ಪಿಯು ಸ್ಟೂಡೆಂಟ್ ಸಾರಾ ಗೋವಿಂದು ಮಗನ ಡವ್ ಕಹಾನಿ

Posted By:
Subscribe to Filmibeat Kannada

ಈಗಷ್ಟೇ ಸೆಕೆಂಡ್ ಪಿಯುಸಿ ಮಾಡುತ್ತಿರುವ ಮಗನನ್ನು ನಾಯಕನನ್ನಾಗಿ ಸ್ಯಾಂಡಲ್‍ ವುಡ್‍ಗೆ ಪರಿಚಯಿಸುತ್ತಿದ್ದಾರೆ ನಿರ್ಮಾಪಕ ಕಮ್ ಅಖಿಲ ಕರ್ನಾಟಕ ರಾಜಕುಮಾರ್  ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು.

ಇನ್ನೂ ನಾಲ್ಕೈದು ವರ್ಷದ ನಂತರ ಬಣ್ಣದ ಲೋಕಕ್ಕೆ ಕರೆತರುವ ಆಲೋಚನೆಯಿದ್ದರೂ, ಸ್ನೇಹಿತರ ಒತ್ತಾಯಕ್ಕೆ ಮಣಿದು ಡವ್' ಸಿನಿಮಾದ ಮೂಲಕ ಗ್ರ್ಯಾಂಡ್ ಎಂಟ್ರಿ ಹೀರೋ ಆಗಿ ಮಿಂಚಲು ರೆಡಿಯಾಗುತ್ತಿದ್ದಾರೆ ಗೋವಿಂದು ಪುತ್ರ.

ಬಿ.ಕೆ.ಶ್ರೀನಿವಾಸ್ (ಬೆಂ.ಕೋ.ಶ್ರೀ.) ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅಲೆಮಾರಿ ಚಿತ್ರ ನಿರ್ದೇಶಿಸಿದ್ದ ಸಂತು ಆಕ್ಷನ್ -ಕಟ್ ಹೇಳುತ್ತಿದ್ದಾರೆ. ಮೊದಲಿಗೆ ಮುರಳಿ ಮೊಮ್ಮಗ ಅಥರ್ವನನ್ನು ಡವ್'ಗಾಗಿ ಭೇಟಿ ಮಾಡಲಾಗಿತ್ತು.

 Sa. Ra. Govindu son Anup introduction to Sandalwood as hero in Dove movie

ಆದರೆ ಕಾರಣಾಂತರಗಳಿಂದ ಆತನ ಕಾಲ್‍ಶೀಟ್ ಸಿಗಲಿಲ್ಲ. ಇದೀಗ ಆ ಅದೃಷ್ಟ ಸಾ.ರಾ.ಗೋವಿಂದು ಪುತ್ರ ಅನೂಪ್ ಗೋವಿಂದುಗೆ ಒಲಿದಿದೆ. ಡಿಸೆಂಬರ್ 9ರಂದು ಡವ್' ನಿರ್ಮಾಪಕ ಬೆಂ.ಕೋ.ಶ್ರೀ ಅವರ ಹುಟ್ಟುಹಬ್ಬ.

ಅದೇ ದಿನದಂದು ಚಿತ್ರದ ಮುಹೂರ್ತ ಕೂಡಾ ನಿಗದಿಯಾಗಿದೆ. ಡಾ.ರಾಜ್‍ರೊಂದಿಗೆ ಸುಮಾರು 30 ವರ್ಷಗಳ ಕಾಲ ಒಡನಾಟವಿಟ್ಟುಕೊಂಡಿದ್ದ ಕನ್ನಡಪರ ಹೋರಾಟಗಾರ ಸಾ.ರಾ.ಗೋವಿಂದು ಪುತ್ರನ ಅದ್ದೂರಿ ಎಂಟ್ರಿ ಡವ್' ಮೂಲಕ ನೆರವೇರುತ್ತಿದೆ.

ಇದಕ್ಕೂ ಮುನ್ನ ಮಗನನ್ನು ಇಂಡಸ್ಟ್ರಿಗೆ ಪರಿಚಯಿಸುತ್ತಿರುವ ಸಲುವಾಗಿ ಸಂತೋಷಕೂಟ ಏರ್ಪಡಿಸಿದ್ದರು ಸಾ.ರಾ.ಗೋವಿಂದು. ನನ್ನ ಮಗನನ್ನು ನನ್ನಂತೆಯೇ ಬೆಳೆಸಿ, ಹರಸಿ, ಹಾರೈಸಿ' ಎಂದರು ಗೋವಿಂದು.

ಇದೇ ಸಂದರ್ಭದಲ್ಲಿ ಗೋವಿಂದು ಪುತ್ರನ ಒಂದಷ್ಟು ವಿಡಿಯೋ ಬಿಟ್‍ಗಳನ್ನು ಪ್ರದರ್ಶಿಸಲಾಯಿತು. ಕಥೆ, ಚಿತ್ರಕಥೆ, ಸಾಹಿತ್ಯ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಸಂತು ಸುಮಾರು ನಾಲ್ಕು ತಿಂಗಳುಗಳ ಕಾಲ ಅನೂಪ್‍ ಗೆ ಸಿನಿಮಾಕ್ಕೆ ಬೇಕಾದ ತರಬೇತಿ ನೀಡಿದ್ದಾರೆ.

ಅಲ್ಲದೇ ಜಿಮ್, ಡ್ಯಾನ್ಸ್, ಫೈಟ್ ಸೇರಿದಂತೆ ಮತ್ತಿತರ ತಾಲೀಮುಗಳಲ್ಲಿ ಅನೂಪ್ ಬ್ಯೂಸಿ. ಇವೆಲ್ಲವನ್ನೂ ಹೊರತುಪಡಿಸಿ ಅನೂಪ್ ಕಾಲೇಜಿಗೂ ಹೋಗಿ ಬರಬೇಕಿದೆ.

ಇನ್ನುಳಿದ ತಾರಾಗಣದಲ್ಲಿ ಅಲೆಮಾರಿ' ರಾಕೇಶ್, ಪ್ರಜ್ಞಾ, ಅದಿತಿ ಇದ್ದಾರೆ. ಸಂಗೀತ ಅರ್ಜುನ್ ಜನ್ಯಾ, ಸಂಭಾಷಣೆ ಮಂಜು ಮಾಂಡವ್ಯ ಹಾಗೂ ಕ್ಯಾಮೆರಾ ಕೆಲಸ ಚಂದ್ರಶೇಖರ್ ನಿರ್ವಹಿಸಲಿದ್ದಾರೆ.

English summary
Veteran producer of Kannada cinema, head of Akhila Karnataka Dr. Rajkumar Abhimanigala Sangha, Sa Ra Govindu introducing his son Anup as hero for ‘Dove’ Kannada cinema.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada