»   » ತಮಿಳು ಕಾಮಿಡಿ ನಟ ವಿವೇಕ್ ಪುತ್ರನ ಅಕಾಲಿಕ ಮರಣ

ತಮಿಳು ಕಾಮಿಡಿ ನಟ ವಿವೇಕ್ ಪುತ್ರನ ಅಕಾಲಿಕ ಮರಣ

Posted By: ಸೋನು ಗೌಡ
Subscribe to Filmibeat Kannada

ತಮಿಳಿನ ಖ್ಯಾತ ಹಾಸ್ಯ ನಟ ವಿವೇಕ್ ಅವರ 13 ವರ್ಷದ ಮಗ ಪ್ರಸನ್ನ ಅವರು ತೀವ್ರ ಮೆದುಳು ಜ್ವರದಿಂದ ಬಳಲುತ್ತಿದ್ದು, ಚೆನ್ನೈನ ಎಸ್ ಆರ್ ಎಮ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕೆಲವು ದಿನಗಳ ಹಿಂದೆ ಪ್ರಸನ್ನ ವಿವೇಕ್, ಅವರ ಆರೋಗ್ಯ ತೀವ್ರತರವಾಗಿ ಹದಗೆಟ್ಟಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಪೂರ್ಣ ಪ್ರಮಾಣದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು (ಅಕ್ಟೋಬರ್ 30) ಮಧ್ಯಾಹ್ನ ಮರಣವನ್ನಪ್ಪಿದ್ದಾರೆ.

ಪ್ರಸನ್ನ ವಿವೇಕ್ ಅವರು ತಮ್ಮ ತಂದೆ ವಿವೇಕ್, ತಾಯಿ ಅರುಲ್ ಸೆಲ್ವಿ ವಿವೇಕ್ ಹಾಗೂ ಇಬ್ಬರು ತಂಗಿಯರಾದ ಅಮ್ರಿತ ನಂದಿನಿ ವಿವೇಕ್ ಮತ್ತು ತೇಜಸ್ವಿನಿ ವಿವೇಕ್ ಅವರನ್ನು ಅಗಲಿದ್ದಾರೆ.

ಯಾವಾಗಲೂ ಎಲ್ಲರನ್ನು ಬಾಯ್ತುಂಬ ನಗಿಸುತ್ತಿದ್ದ ನಟ ವಿವೇಕ್ ಅವರು ಇಂದು ತಮ್ಮ ಜೀವಕ್ಕೆ ಜೀವವಾಗಿದ್ದ ಪ್ರೀತಿಯ ಮಗನನ್ನು ಕಳೆದುಕೊಂಡು ಕಣ್ಣೀರಾಗಿದ್ದಾರೆ.

ಇದೀಗ ಪ್ರಸನ್ನ ವಿವೇಕ್ ಅವರ ಸಾವಿನ ಸುದ್ದಿ ಕೇಳಿದ ಇಡೀ ತಮಿಳು ಚಿತ್ರರಂಗ ಜೊತೆಗೆ ದೊಡ್ಡ ಸ್ಟಾರ್ ನಟರು-ನಿರ್ದೇಶಕರು ತಮ್ಮ ತಮ್ಮ ಟ್ವಿಟ್ಟರ್ ನಲ್ಲಿ ಸಾಂತ್ವನ ನುಡಿದಿದ್ದಾರೆ. ಮುಂದೆ ಓದಿ...

'ವೇದಲಮ್' ಚಿತ್ರದ ನಿರ್ದೇಶಕ ಕೊಕ್ಕಿ ಕುಮಾರು

'ವೇದಲಮ್' ಚಿತ್ರದ ನಿರ್ದೇಶಕ ಕೊಕ್ಕಿ ಕುಮಾರು ಅವರು ಈ ಸುದ್ದಿ ಕೇಳಿ ಶಾಕ್ ಆಗಿದ್ದು, ನಟ ವಿವೇಕ್ ಅವರ 13 ವರ್ಷದ ಮಗ ಪ್ರಸನ್ನ ವಿವೇಕ್ ಅವರು ಅಕಾಲಿಕ ಮರಣ ಹೊಂದಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ. RIP ಪ್ರಸನ್ನ ಎಂದಿದ್ದಾರೆ.

ತಮಿಳು ನಟಿ ಶ್ರೀಯಾ ರೆಡ್ಡಿ

ವಿವೇಕ್ ಸರ್ ಈ ಸುದ್ದಿ ಕೇಳಿ ತುಂಬಾ ಬೇಸರ ಆಯ್ತು. ನಿಮಗೆ ಹಾಗೂ ನಿಮ್ಮ ಫ್ಯಾಮಿಲಿಗೆ ಧೈರ್ಯ ಇದೆ ಹಾಗೂ ನೀವು ನಿಮ್ಮ ಮನಸ್ಸನ್ನು ಗಟ್ಟಿ ಮಾಡಿಕೊಂಡಿದ್ದೀರಿ ಎಂದು ನಂಬಿದ್ದೇನೆ ಎಂದು ತಮಿಳು ನಟಿ ಶ್ರೀಯಾ ರೆಡ್ಡಿ ಅವರು ಟ್ವೀಟ್ ಮಾಡಿ ವಿವೇಕ್ ಅವರಿಗೆ ಸಾಂತ್ವನ ನುಡಿದಿದ್ದಾರೆ.

ತಮಿಳು ನಟ ಪ್ರಸನ್ನ

'ವಿವೇಕ್ ಸರ್ ಅವರ ಮಗ ತೀರಿಕೊಂಡಿದ್ದು, ತುಂಬಾ ದುಃಖಕರ ಸಂಗತಿ. ನಾನು ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ. ಆ ಚಿಕ್ಕ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ತಮಿಳು ನಟ ಪ್ರಸನ್ನ ಅವರು ಸಂತಾಪ ಸೂಚಿಸಿದ್ದಾರೆ.

ತಮಿಳು ಕಾಮಿಡಿಯನ್ ರೋಬೋ ಶಂಕರ್

ತಮಿಳು ಚಿತ್ರರಂಗದ ಮತ್ತೊಬ್ಬ ಕಾಮಿಡಿ ನಟ ರೋಬೋ ಶಂಕರ್ ಅವರು 'ತಮಿಳು ಚಿತ್ರರಂಗಕ್ಕೆ ಇದೊಂದು ಕೆಟ್ಟ ದಿನ. ಕಾಮಿಡಿ ನಟ ವಿವೇಕ್ ಅವರ ಮಗ ಮೆದುಳು ಜ್ವರದಿಂದ ಮರಣ ಹೊಂದಿದ್ದಾರೆ, ಆ ಯುವ ಹುಡುಗನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.

ತಮಿಳು ನಟ-ನಿರ್ದೇಶಕ ಎಮ್.ಸಸಿಕುಮಾರ್

ತುಂಬಾ ದುಃಖಕರ ವಿಷಯ ಕಾಮಿಡಿ ನಟ ವಿವೇಕ್ ಅವರ ಮಗ ಅಕಾಲಿಕ ಮರಣ ಹೊಂದಿದ್ದು, ಇದು ಯಾವುದೇ ತಂದೆ-ತಾಯಿಯರಿಗೂ ತುಂಬಲಾರದ ನಷ್ಟ. ಆ ಪುಟ್ಟ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಟ-ನಿರ್ದೇಶಕ ಎಮ್ ಸಸಿಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.

English summary
Comedian Vivek's only son Prasanna Kumar Vivek, aged 13, passes away at SRM Hospital in Chennai after losing his battle to brain fever, according to a report.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada