»   » ಪೊಲೀಸ್ ಸ್ಟೋರಿ 3ಕ್ಕೆ ರೆಡಿಯಾದ ಡೈಲಾಗ್ ಕಿಂಗ್

ಪೊಲೀಸ್ ಸ್ಟೋರಿ 3ಕ್ಕೆ ರೆಡಿಯಾದ ಡೈಲಾಗ್ ಕಿಂಗ್

Posted By:
Subscribe to Filmibeat Kannada

ಇತ್ತೀಚೆಗಷ್ಟೇ (ಜುಲೈ 27) ತಮ್ಮ 52ನೇ ಹುಟ್ಟುಹಬ್ಬವನ್ನು ಡೈಲಾಗ್ ಕಿಂಗ್ ಸಾಯಿ ಕುಮಾರ್ ಅವರು ಭರ್ಜರಿಯಾಗಿ ಆಚರಿಸಿಕೊಂಡರು. ಈಗ ಅವರು ಮತ್ತೊಮ್ಮೆ 'ಪೊಲೀಸ್ ಸ್ಟೋರಿ'ಯ ಅಗ್ನಿಯಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಸಾಯಿ ಕುಮಾರ್ ಅವರು ಸಾಕಷ್ಟು ಪಾತ್ರಗಳನ್ನು ಪೋಷಿಸಿದ್ದರೂ ಅವರ ವೃತ್ತಿ ಬದುಕಿನಲ್ಲಿ 'ಪೊಲೀಸ್ ಸ್ಟೋರಿ' ಚಿತ್ರ ಅಳಿಸಲಾಗದ ಮುದ್ರೆಯನ್ನು ಹಾಕಿತು. ಆ ಚಿತ್ರದ ಬಳಿಕ ಅವರು ಸಾಕಷ್ಟು ಪೊಲೀಸ್ ಚಿತ್ರಗಳಲ್ಲಿ ಅಭಿನಯಿಸಿದರು.


ಈ ಬಾರಿಯೂ ಅವರು ಭ್ರಷ್ಟರ ಸೊಕ್ಕಡಗಿಸಲಿದ್ದಾರೆ. ಪೊಲೀಸ್ ಲಾಠಿಗಳು ಪೀಸ್ ಪೀಸ್ ಆಗಲಿದೆ. ಜೊತೆಗೆ ಇದ್ದೇ ಇರುತ್ತದೆ ಕಾರು, ಬೈಕು, ಲಾರಿಗಳ ಚೇಸಿಂಗ್, ಫೈಟಿಂಗ್, ಪಂಚಿಂಗ್. ಖಾದಿ ಖದರ್ ಏನೂ ಎಂಬುದನ್ನು ಅವರು ತೋರಿಸಲಿದ್ದಾರೆ.

ಬೆಳ್ಳಿಪರದೆಯ ಮೇಲೆ ಖಾಕಿ ಖದರ್ ನಲ್ಲಿ ಸಾಯಿ ಕುಮಾರ್ ಮಿಂಚಿದಷ್ಟು ಇನ್ಯಾರೂ ಮಿಂಚಿಲ್ಲ ಬಿಡಿ. 'ಪೊಲೀಸ್ ಸ್ಟೋರಿ 2' (2007) ಚಿತ್ರವೂ ಬಂತು. ಆ ಚಿತ್ರವೂ ಬಾಕ್ಸ್ ಆಫೀಸಲ್ಲಿ ಚಿಂದಿ ಉಡಾಯಿಸಿತು. ಈಗ 'ಪೊಲೀಸ್ ಸ್ಟೋರಿ 3'ಕ್ಕೆ ಸಾಯಿಕುಮಾರ್ ರೆಡಿಯಾಗಿದ್ದಾರೆ.

ಈ ಚಿತ್ರದಲ್ಲಿ ಸಾಯಿಕುಮಾರ್ ಸಹೋದರ ರವಿಶಂಕರ್ ಹಾಗೂ ಅವರ ಪುತ್ರ ಆದಿ ಸಹ ಅಭಿನಯಿಸಲಿದ್ದಾರೆ. ತಮ್ಮ ಪುತ್ರ ಆದಿ ಅಭಿನಯಿಸುತ್ತಿರುವ ಎರಡು ಚಿತ್ರಗಳು ಮುಗಿದ ಬಳಿಕವಷ್ಟೇ 'ಪೊಲೀಸ್ ಸ್ಟೋರಿ 3' ಸೆಟ್ಟೇರಲಿದೆಯಂತೆ. ಈ ಚಿತ್ರವನ್ನು ಸ್ವತಃ ಸಾಯಿಕುಮಾರ್ ಅವರೇ ನಿರ್ಮಿಸುತ್ತಿದ್ದಾರೆ. (ಏಜೆನ್ಸೀಸ್)

English summary
Dialouge King Sai Kumar ready to starting work on 'Police Story 3', but nothing has materialised so far. It is one of the most popular films in his career. The film will also feature his brother Ravi and Ayappa along with my son Aadi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada