For Quick Alerts
  ALLOW NOTIFICATIONS  
  For Daily Alerts

  ಸಾಯಿ ಬಾಬಾ ಪಾತ್ರದಲ್ಲಿ ನಿರ್ದೇಶಕ ಸಾಯಿಪ್ರಕಾಶ್

  By Rajendra
  |

  ಕನ್ನಡ ಚಿತ್ರಗಳ ನಿರ್ದೇಶಕ ಸಾಯಿಪ್ರಕಾಶ್ ಅವರು ಸಾಯಿ ಬಾಬಾ ಅವರ ಮಹಾನ್ ಆರಾಧಕರು. ಹಾಗೆಯೇ ಅವರು ಕರುಳು ಮಿಡಿಯುವಂತಹ ಸೆಂಟಿಮೆಂಟ್ ಪ್ರಧಾನ ಚಿತ್ರಗಳನ್ನು ಕೊಟ್ಟಂತಹವರು. ಈಗವರು ಸಾಯಿ ಬಾಬಾ ಆಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

  'ನೀನೇನಾ ಭಗವಂತ' ಚಿತ್ರದಲ್ಲಿ ಸಾಯಿ ಬಾಬಾ ಪಾತ್ರ ಮಾಡುವಂತೆ ಅವರಿಗೆ ಕೇಳಲಾಗಿ, ಸಾಯಿಪ್ರಕಾಶ್ ಮರುಮಾತನಾಡದೆ ಆ ಪಾತ್ರವನ್ನು ಒಪ್ಪಿಕೊಂಡರಂತೆ. ಪ್ರೀತಂ ಸಾಗರ್ ಚಿತ್ರದ ನಿರ್ಮಾಣದ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಶರತ್ ಬಿಳಿನೆಲೆ.

  ಗಿರಿಧರ್ ದಿವಾನ್ ಅವರ ಸಂಗೀತವಿರುವ ಚಿತ್ರದ ನಾಯಕ ನಟ ಸಾಯಿ ಕುಮಾರ್. ಸುದೀರ್ಘ ಗ್ಯಾಪ್ ನ ಬಳಿಕ ಕನ್ನಡಕ್ಕೆ ಮರಳಿರುವ ಸಾಕ್ಷಿ ಶಿವಾನಂದ್ ಈ ಚಿತ್ರದ ಮೂಲಕ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.

  ಇದೊಂದು ಭಕ್ತಿ ಪ್ರಧಾನ ಚಿತ್ರವಾಗಿದ್ದು ಕೌಟುಂಬಿಕ ಕಥಾಹಂದರನ್ನೂ ಒಳಗೊಂಡಿದೆ. ನಾಸ್ತಿಕನಾದವನು ಆಸ್ತಿಕನಾಗಿ ಬದಲಾಗುವ ಕಥೆಯೇ ನೀನೇನಾ ಭಾಗವಂತ. ಮಂಗಳೂರು, ಉಡುಪಿ, ಬೆಂಗಳೂರಿನಲ್ಲಿ ನಲವತ್ತು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.

  ಚಿತ್ರದಲ್ಲಿ ಆರು ಹಾಡುಗಳಿದ್ದು ಅವುಗಳಲ್ಲಿ ಮೂರು ಭಕ್ತಿ ಪ್ರಧಾನ ಹಾಡುಗಳು. ಒಂದು ಹಾಡನ್ನು ಶಿರಡಿಯಲ್ಲಿ ಚಿತ್ರೀಕರಿಸಲಾಗುತ್ತದೆ. ರಾಷ್ಟ್ರ ಪ್ರಶಸ್ತಿ ವಿಜೇತ ಸುಂದರನಾಥ ಸುವರ್ಣ ಅವರ ಛಾಯಾಗ್ರಹಣವಿದೆ ಚಿತ್ರಕ್ಕಿದೆ.

  ಈಗಾಗಲೆ ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಸಾಯಿ ಸಾಗರ್ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಿಸಿರುವ ಈ ಚಿತ್ರದ ಬಜೆಟ್ ಒಟ್ಟು ರು.3 ಕೋಟಿ. ಅಜಯ್‌, ಮಂಡ್ಯ ರಮೇಶ್‌, ಮಿತ್ರ ಮಮತಾ ರಾವುತ್‌, ಬೇಬಿ ನಿಹಿತಾ ಪೈ, ಶೃಂಗೇರಿ ರಾಮಣ್ಣ, ದಿನೇಶ್‌ ಅತ್ತಾವರ ಅವರು ತಾರಾಗಣದಲ್ಲಿದ್ದಾರೆ. ನವರಾತ್ರಿ, ದೀಪಾವಳಿ ನಡುವೆ ಚಿತ್ರ ತೆರೆಕಾಣಲಿದೆ. (ಏಜೆನ್ಸೀಸ್)

  English summary
  Kannada sentiment films director Sai Praksh plays a Sai Baba role in Kannada film Neenena Bhagavantha. The film is a maiden venture by Sai Sagar Creations. Sai Kumar is the hero of the film while Sakshi Shivanand is the heroine.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X