»   » ಕನ್ನಡ ಕಿರುತೆರೆಯಲ್ಲಿ ಸಲ್ಮಾನ್ ಖಾನ್ 'ಬಿಗ್ ಬಾಸ್'

ಕನ್ನಡ ಕಿರುತೆರೆಯಲ್ಲಿ ಸಲ್ಮಾನ್ ಖಾನ್ 'ಬಿಗ್ ಬಾಸ್'

Posted By:
Subscribe to Filmibeat Kannada

ಹಿಂದಿ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದ ಧಾರಾವಾಹಿಗಳು ಕನ್ನಡದಲ್ಲೂ ರಿಮೇಕ್ ಆಗಿದೆ, ಆಗತ್ತಲೂ ಇದೆ. ಅದಕ್ಕೆ ಕೊಡಬಹುದಾದ ತಾಜಾ ಉದಾಹರಣೆಯೆಂದರೆ ಈಟಿವಿ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಪುಟ್ಟಗೌರಿಯ ಮದುವೆ'. ಇದು ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಬಾಲಿಕಾ ವಧು' ಹಿಂದಿ ಧಾರಾವಾಹಿಯ ರಿಮೇಕ್.

ಅಮಿತಾಬ್ ಬಚ್ಚನ್ ವೃತ್ತಿಜೀವನಕ್ಕೆ ಹೊಸ ತಿರುವು ನೀಡಿದ ಕಿರುತೆರೆಯ ಗೇಮ್ ಶೋ 'ಕೌನ್ ಬನೇಗಾ ಕರೋಡ್ ಪತಿ'. ಇದರ ಕನ್ನಡ ಅವತರಿಣಿಕೆ ಪುನೀತ್ ನಡೆಸಿಕೊಟ್ಟ 'ಕನ್ನಡದ ಕೋಟ್ಯಾಧಿಪತಿ'. ಯಾವಾಗ ಕೋಟ್ಯಾಧಿಪತಿ ಕಾರ್ಯಕ್ರಮ TRP ಯಲ್ಲಿ ಭರ್ಜರಿ ಮುನ್ನುಗಿತೋ, ಕನ್ನಡದ ಇನ್ನೊಂದು ಜನಪ್ರಿಯ ವಾಹಿನಿ ಮತ್ತೊಂದು ಸಾಹಸಕ್ಕೆ ಕೈಹಾಕಿದೆ.

ಸಲ್ಮಾನ್ ಖಾನ್ ನಿರೂಪಕರು

ಕಲರ್ಸ್ ವಾಹಿನಿಯಲ್ಲಿ ಹಿಂದಿ 'ಬಿಗ್ ಬಾಸ್ 6' ಪ್ರಸಾರವಾಗುತ್ತಿದೆ. ಸಲ್ಮಾನ್ ಖಾನ್ ಕಾರ್ಯಕ್ರಮದ ನಿರೂಪಕರು. ಈ ಕಾರ್ಯಕ್ರಮದಲ್ಲಿ ಗೆದ್ದವರಿಗೆ ರು.5 ಲಕ್ಷ ನಗದು ಬಹುಮಾನ ಸಿಗುತ್ತದೆ. ಈ ಹಿಂದಿನ ಸೀಸನ್ ಗಳಲ್ಲಿ ರು.50 ಲಕ್ಷ ನೀಡಲಾಗುತ್ತಿತ್ತು.

ಬಿಗ್ ಬಾಸ್ ರಿಯಾಲಿಟಿ ಶೋ

ಹಿಂದಿ ಬಿಗ್ ಬಾಸ್ ರಿಯಾಲಿಟಿ ಶೋ ಅನ್ನು ಶಿಲ್ಪಾ ಶೆಟ್ಟಿ, ಸಂಜಯ್ ದತ್ ಮತ್ತು ಅಮಿತಾಬ್ ಬಚ್ಚನ್ ಕೂಡಾ ನಡೆಸಿಕೊಟ್ಟಿದ್ದರು. ಸಾಕಷ್ಟು ಸಲ ವಿವಾದಕ್ಕೆ, ಚರ್ಚೆಗೆ ಗುರಿಯಾಗಿದ್ದ ಈ ರಿಯಾಲಿಟಿ ಶೋ ಸೀಸನ್‌ನಿಂದ ಸೀಸನ್‌ಗೆ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ.

ಪಬ್ಲಿಕ್ ವೋಟ್ ಅಗತ್ಯ

ಈ ಕಾರ್ಯಕ್ರಮದಲ್ಲಿ ಪ್ರತಿವಾರ ಭಾಗವಹಿಸುವವರು (ಹೌಸ್ ಮೇಟ್ ) ಇಬ್ಬರನ್ನುಶೋನಿಂದ ಹೊರಹಾಕಲು ಪ್ರಯತ್ನಿಸುತ್ತಾರೆ. ಹಾಗೇ ಇವರು ಪಬ್ಲಿಕ್ ವೋಟನ್ನು ಕೂಡಾ ಎದುರಿಸಬೇಕಾಗುತ್ತದೆ. ಬಿಗ್ ಬಾಸ್' ಸೀಸನ್ 4ರಲ್ಲಿ ಪಮೇಲಾ ಆಂಡರ್‌ಸನ್‌, ಸೀಸನ್ 5ಕ್ಕೆ ಸನ್ನಿ ಲಿಯೋನ್ ಮತ್ತು ಸೀಸನ್ 6ಗೆ ಹಾಲಿವುಡ್‌ನ ಜನಪ್ರಿಯ ತಾರೆ ಕಿಮ್ ಕರ್ದಶಿಯನ್‌ರನ್ನು ಕರೆಸಲಾಗಿತ್ತು.

ಬಿಗ್ ಬಾಸ್ ಮೊದಲು ಪ್ರಸಾರವಾಗಿದ್ದು ಸೋನಿ ಟಿವಿಯಲ್ಲಿ

ಹಿಂದಿಯ ಬಿಗ್ ಬಾಸ್ ಕಾರ್ಯಕ್ರಮ ಮೊದಲು ಪ್ರಸಾರವಾಗಿದ್ದು ಸೋನಿ ಟಿವಿಯಲ್ಲಿ. ಅರ್ಷದ್ ವರ್ಷಿ ಈ ಕಾರ್ಯಕ್ರಮದ ನಿರೂಪಕರಾಗಿದ್ದರು. ರಾತ್ರಿ 9 ಗಂಟೆ ಈ ಶೋ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

ಬಿಗ್ ಬಾಸ್ ಕಾನ್ಸೆಪ್ಟ್

ಬಿಗ್ ಬಾಸ್ ಎನ್ನುವ ಕಾನ್ಸೆಪ್ಟ್ ಅನ್ನು ಮೊದಲು ಪರಿಚಯಿಸಿದ್ದು ನೆದರ್ಲ್ಯಾಂಡ್ ದೇಶದ ಎಂದೆಮೊಲ್ ಎನ್ನುವವರು.

ನಂಬಲರ್ಹ ಮೂಲಗಳ ಪ್ರಕಾರ ಸದ್ಯದ ಬಾಲಿವುಡ್ಡಿನ ಬಾಕ್ಸ್ ಆಫೀಸ್ ಕಿಂಗ್ ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ 'ಬಿಗ್ ಬಾಸ್' ರಿಯಾಲಿಟಿ ಶೋ ಕನ್ನಡದಲ್ಲೂ ಆರಂಭವಾಗಲಿದೆ.

ಈಟಿವಿ ಕನ್ನಡ ಈ ರಿಯಾಲಿಟಿ ಶೋ ಕನ್ನಡದಲ್ಲಿ ನಡೆಸಲು ಮುಂದಾಗಿದೆ ಎನ್ನುವ ಮಾಹಿತಿಗಳು ಲಭ್ಯವಾಗಿವೆ.

ಕಾರ್ಯಕ್ರಮದ ಸಂಯೋಜಕರು ಈಗಾಗಲೇ ಈ ರಿಯಾಲಿಟಿ ಶೋಗೆ ಪೂರ್ವ ತಯಾರಿ ನಡೆಸಿಕೊಂಡಿದ್ದಾರೆ ಮತ್ತು ವಿವಾದಿತ ಸೆಲೆಬ್ರಿಟಿಗಳ ಪಟ್ಟಿಯನ್ನು ತಯಾರಿಸಿದ್ದಾರೆಂದು ಕೆಲ ಮೂಲಗಳಿಂದ ತಿಳಿದುಬಂದಿದೆ.

ಈ ರಿಯಾಲಿಟಿ ಶೋ ನಡೆಸಿ ಕೊಡುವವರು ಸದ್ಯದಲ್ಲೇ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಲಿದ್ದಾರೆ ಮತ್ತು ಕಾರ್ಯಕ್ರಮದ ಬಗ್ಗೆ ಈಟಿವಿ ಸದ್ಯದಲ್ಲೇ ಪತ್ರಿಕಾ ಹೇಳಿಕೆ ನೀಡಲಿದೆ ಎಂದು ತಿಳಿದು ಬಂದಿದೆ.

English summary
Bollywood superstar Salman Khan hosted Bigg Boss will be getting its Kannada version in 2013. ETV Kannada will be airing the Kannada version of Bigg Boss.
Please Wait while comments are loading...