ನಾಗಾರ್ಜುನ ತಾತ ಯಾವಾಗ ಆಗ್ತಾರೆ ಎಂದಿದ್ದಕ್ಕೆ ಸಮಂತಾ ಏನಂದ್ರು.?

Recommended Video

ಸಮಂತಾ ನೀಡಿದರು ಮಗು ಬಗ್ಗೆ ಸಂತಸದ ಸುದ್ದಿ | Filmibeat Kannada

ಟಾಲಿವುಡ್ ನ ಮುದ್ದು ಜೋಡಿ ಸಮಂತಾ ಮತ್ತು ನಾಗಚೈತನ್ಯ ಅವರು ಮದುವೆಯಾಗಿ ಒಂದು ವರ್ಷ ಆಗುತ್ತಿದೆ. ಅಕ್ಟೋಬರ್ 7ಕ್ಕೆ ಸ್ಯಾಮ್-ಚೈತು ಅವರ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಇದೆ.

ಮದುವೆಯೂ ನಂತರವೂ ಇಬ್ಬರು ಚಿತ್ರರಂಗದಲ್ಲಿ ಮುಂದುವರೆದಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲೂ ಸಮಂತಾ ಅಂತೂ ತೆಲುಗು-ತಮಿಳು ಚಿತ್ರಗಳಲ್ಲಿ ಸತತವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಸಹಜವಾಗಿ ಸಮಂತಾ ಹಾಗೂ ನಾಗಚೈತನ್ಯ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಒಂದು ಪ್ರಶ್ನೆ ಎದುರಾಗುತ್ತಿದೆ. ನಾಗಾರ್ಜುನ ಅವರು ತಾತ ಯಾವಾಗ ಆಗ್ತಾರೆ ಎಂದು ಕೇಳುತ್ತಿದ್ದಾರೆ. ಇದಕ್ಕೆ ಸಂದರ್ಶನವೊಂದರಲ್ಲಿ ಉತ್ತರ ನೀಡಿದ ಸಮಂತಾ ''ನಾನು ತಾಯಿ ಆಗೋಕೆ ರೆಡಿ....'' ಎಂದು ಹೇಳಿದ್ದು, ಬಟ್ ಈಗ ಆಗಲ್ಲ ಎಂದು ಕಾರಣ ಕೂಡ ಬಿಚ್ಚಿಟ್ಟಿದ್ದಾರೆ. ಏನದು.? ಮುಂದೆ ಓದಿ.....

ಸಮಂತಾಗೆ ಆಸೆ....

ಸಮಂತಾಗೆ ಆಸೆ....

ಸಮಂತಾಗೆ ಮಕ್ಕಳು ಬೇಕು ಎಂಬ ಆಸೆಯನ್ನ ವ್ಯಕ್ತಪಡಿಸಿದ್ದಾರೆ. ''ನನಗೆ ಮಕ್ಕಳು ಬೇಕು ಅನಿಸುತ್ತಿದೆ. ಆದ್ರೆ, ನಾಗಚೈತನ್ಯ ಅವರು ರೆಡಿಯಿಲ್ಲ'' ಎಂದು ಸಮಂತಾ ಹೇಳಿಕೊಂಡಿದ್ದಾರೆ.

ನಾಗ್ ಪ್ಲಾನ್ ಬೇರೆ ಇದೆ

ನಾಗ್ ಪ್ಲಾನ್ ಬೇರೆ ಇದೆ

'ನಾಗಚೈತನ್ಯ ಅವರ ಪ್ಲಾನ್ ಬೇರೆ ಇದೆ. ಹೀಗಾಗಿ, ನಾವು ಸದ್ಯಕ್ಕೆ ಮಕ್ಕಳು ಬೇಡ ಎಂದು ನಿರ್ಧರಿಸಿಕೊಂಡಿದ್ದೇವೆ. ಈ ವಿಷ್ಯದಲ್ಲಿ ನಾಗ್ ಅವರಿಗೆ ಒತ್ತಡ ಹೇರುವುದು ಸರಿಯಿಲ್ಲ. ಅವರು ಯಾವಾಗ ರೆಡಿ ಅಂತಾರೋ ಆಗಲೇ ನಾನು ಒಕೆ' ಎಂದು ಸಮಂತಾ ಖುಷಿಯಿಂದಲೇ ಹೇಳಿದ್ದಾರೆ.

ಸದ್ಯಕ್ಕಿಲ್ಲ ಮಕ್ಕಳ ಯೋಚನೆ

ಸದ್ಯಕ್ಕಿಲ್ಲ ಮಕ್ಕಳ ಯೋಚನೆ

ಸಮಂತಾ ಅವರ ಈ ಮಾತುಗಳನ್ನ ಕೇಳಿದ ಮೇಲೆ ಅಕ್ಕಿನೇನಿ ಅಭಿಮಾನಿಗಳು ನಿರಾಸೆಯಾಗಿರಬಹುದು. ಆದ್ರೆ, ಆದಷ್ಟೂ ಬೇಗ ಗುಡ್ ನ್ಯೂಸ್ ಕೊಡ್ತೀವಿ ಅಂತನೂ ಸಮ್ಮು ಸುಳಿವು ನೀಡಿದ್ದಾರೆ.

ಸಮಂತಾ-ನಾಗ್ ಸಿನಿಮಾ ಫೈಟ್

ಸಮಂತಾ-ನಾಗ್ ಸಿನಿಮಾ ಫೈಟ್

ಸದ್ಯ, ಸಮಂತಾ ಅಭಿನಯದ 'ಯು ಟರ್ನ್' ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಮತ್ತೊಂದೆಡೆ ನಾಗಚೈತನ್ಯ ಅಭಿನಯದ 'ಶೈಲಜಾ ರೆಡ್ಡಿ ಅಲ್ಲುಡು' ಸಿನಿಮಾನೂ ಬಿಡುಗಡೆಎ ಸಜ್ಜಾಗುತ್ತಿದೆ. ಸೆಪ್ಟೆಂಬರ್ 13 ರಂದು ತೆರೆಕಾಣಲಿದೆ. ಅದೇ ದಿನ ಯುಟರ್ನ್ ಸಿನಿಮಾನೂ ತೆರೆಗೆ ಬರಲಿದೆ ಎನ್ನಲಾಗಿದೆ. ಆದ್ರೆ, ಖಚಿತ ಮಾಹಿತಿ ಇಲ್ಲ.

More from Filmibeat

English summary
On the occassion of Uturn release Samantha Akkineni spoke to media and revealed that she was ready for Kids.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X