»   » ಗೋವಾದ ಕಡಲ ಕಿನಾರೆಯಲ್ಲಿ ಮದುವೆ ಆಗ್ತಾರಂತೆ ಸಮಂತಾ-ನಾಗ ಚೈತನ್ಯ

ಗೋವಾದ ಕಡಲ ಕಿನಾರೆಯಲ್ಲಿ ಮದುವೆ ಆಗ್ತಾರಂತೆ ಸಮಂತಾ-ನಾಗ ಚೈತನ್ಯ

Posted By:
Subscribe to Filmibeat Kannada

ಅಕ್ಕಿನೇನಿ ನಾಗಾರ್ಜುನ ಪುತ್ರ ನಾಗ ಚೈತನ್ಯ ಹಾಗೂ ನಟಿ ಸಮಂತಾ ಮದುವೆ ದಿನಾಂಕ ಫಿಕ್ಸ್ ಆಗಿದೆ. ಹಾಗೇ, ಇಬ್ಬರ ಮದುವೆ ಎಲ್ಲಿ ನಡೆಯಲಿದೆ ಎಂಬುದರ ಕುರಿತು ಕೂಡ ವರದಿ ಆಗಿದೆ.

ವರದಿಗಳ ಪ್ರಕಾರ, ಅಕ್ಟೋಬರ್ 6 ರಂದು ನಾಗ ಚೈತನ್ಯ ಹಾಗೂ ಸಮಂತಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಗೋವಾದ ಕಡಲ ಕಿನಾರೆಯಲ್ಲಿ ವಿವಾಹ ಮಹೋತ್ಸವ ನಡೆಯಲಿದೆ.

Samantha-Naga Chaitanya to tie knot at beach wedding in Goa

ಎರಡು ದಿನಗಳ ಕಾಲ ಗೋವಾದಲ್ಲಿ ಸಮಂತಾ-ನಾಗ ಚೈತನ್ಯ ಮದುವೆ ನಡೆಯಲಿದ್ದು, ಮೊದಲನೇ ದಿನ ಹಿಂದು ಸಂಪ್ರಾಯದಂತೆ ಹಸೆಮಣೆ ಏರಲಿದ್ದಾರೆ. ಎರಡನೇ ದಿನ ಗೋವಾದ ಕ್ರಿಶ್ಚಿಯನ್ ಚರ್ಚ್ ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಸಮಂತಾ-ನಾಗ ಚೈತನ್ಯ ಹೊಸ ಬಾಳಿಗೆ ಕಾಲಿಡಲಿದ್ದಾರೆ.

ಮೂಲಗಳ ಪ್ರಕಾರ, ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಸಮಂತಾ-ನಾಗ ಚೈತನ್ಯ ವಿವಾಹಕ್ಕೆ ಸಾಕ್ಷಿ ಆಗಲಿದ್ದಾರೆ.

ತೆಲುಗು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ ಈ ಜೋಡಿ, ಇದೀಗ ನಿಜಜೀವನದಲ್ಲಿಯೂ ಜಂಟಿಯಾಗಲಿದ್ದಾರೆ. ಜನವರಿ 29 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಇನ್ನು ಮೂರು ತಿಂಗಳುಗಳಲ್ಲಿ ಮದುವೆ ಆಗಲಿದ್ದಾರೆ.

English summary
Telugu Star couple Samantha-Naga Chaitanya to tie knot at beach wedding in Goa on October 6th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada