For Quick Alerts
  ALLOW NOTIFICATIONS  
  For Daily Alerts

  ಸಮಂತಾ ಅಭಿನಯದ 'ಯು-ಟರ್ನ್' ತೆಲುಗು-ತಮಿಳು ಟ್ರೈಲರ್ ಬಿಡುಗಡೆ

  By Harshitha
  |

  2016 ರಲ್ಲಿ ಬಿಡುಗಡೆ ಆಗಿದ್ದ ಕನ್ನಡದ 'ಯು-ಟರ್ನ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ಟ್ರಾಫಿಕ್ ರೂಲ್ಸ್ ಪಾಲನೆ ಮಾಡದೆ ರೋಡ್ ಮಧ್ಯೆ ಡಿವೈಡರ್ ಜರುಗಿಸಿ ಯು-ಟರ್ನ್ ತೆಗೆದುಕೊಳ್ಳುವವರು ನಿಗೂಢವಾಗಿ ಸಾವನ್ನಪ್ಪುವ ಕಥೆ ಹೊಂದಿದ್ದ ಈ ಚಿತ್ರ ಪ್ರೇಕ್ಷಕರ ಮನ ಗೆದ್ದಿತ್ತು.

  ಈಗ ಇದೇ ಸಿನಿಮಾ ತೆಲುಗು ಹಾಗೂ ತಮಿಳು ಭಾಷೆಗೆ ಏಕಕಾಲಕ್ಕೆ ರೀಮೇಕ್ ಆಗಿದೆ. ಇಲ್ಲಿ ಶ್ರದ್ಧಾ ಶ್ರೀನಾಥ್ ಅಭಿನಯಿಸಿದ ಪಾತ್ರವನ್ನ ತೆಲುಗು ಹಾಗೂ ತಮಿಳಿನಲ್ಲಿ ನಟಿ ಸಮಂತಾ ಅಕ್ಕಿನೇನಿ ನಿರ್ವಹಿಸಿದ್ದಾರೆ. ಜೊತೆಗೆ ಆದಿ, ರಾಹುಲ್ ರವೀಂದ್ರನ್, ಭೂಮಿಕಾ ಚಾವ್ಲಾ ತಾರಾಬಳಗದಲ್ಲಿ ಇದ್ದಾರೆ.

  ತೆಲುಗು ಮತ್ತು ತಮಿಳಿನಲ್ಲಿ ರೆಡಿ ಆಗಿರುವ 'ಯು-ಟರ್ನ್' ಚಿತ್ರದ ಟ್ರೈಲರ್ ಇಂದು ಬಿಡುಗಡೆ ಆಗಿದೆ. ಕನ್ನಡದ ರೀಮೇಕ್ ಆಗಿದ್ದರೂ, ತೆಲುಗು ಹಾಗೂ ತಮಿಳು ನೇಟಿವಿಟಿಗೆ ತಕ್ಕ ಹಾಗೆ ಚಿತ್ರವನ್ನ ತಯಾರು ಮಾಡಲಾಗಿದೆ.

  ತೆಲುಗಿನಲ್ಲಿ ಸಮಂತಾ ಯೂ-ಟರ್ನ್ ಹೊಡೆಯುವುದು ಯಾವಾಗ.?ತೆಲುಗಿನಲ್ಲಿ ಸಮಂತಾ ಯೂ-ಟರ್ನ್ ಹೊಡೆಯುವುದು ಯಾವಾಗ.?

  ಪವನ್ ಕುಮಾರ್ ನಿರ್ದೇಶನ ಮಾಡಿರುವ ಇದೀಗಷ್ಟೇ ಬಿಡುಗಡೆ ಆಗಿರುವ 'ಯು-ಟರ್ನ್' ಟ್ರೈಲರ್ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ಆಗಿದೆ. ಟ್ರೈಲರ್ ನೋಡಿ ನಟರಾದ ನಾಗಾರ್ಜುನ ಹಾಗೂ ರಾನಾ ದಗ್ಗುಬಾಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಟಾಲಿವುಡ್ ಹಾಗೂ ಕಾಲಿವುಡ್ ಅಂಗಳದಲ್ಲಿ ಬಹು ನಿರೀಕ್ಷೆ ಮೂಡಿಸಿರುವ 'ಯು-ಟರ್ನ್' ಸಿನಿಮಾ ಸೆಪ್ಟೆಂಬರ್ 13 ರಂದು ಬಿಡುಗಡೆ ಆಗಲಿದೆ. ಕನ್ನಡದಲ್ಲಿ ಹಿಟ್ ಆಗಿದ್ದ ಈ ಚಿತ್ರ ತೆಲುಗು ಹಾಗೂ ತಮಿಳಿನಲ್ಲೂ ಕಮಾಲ್ ಮಾಡುತ್ತಾ, ನೋಡೋಣ.

  English summary
  Tollywood Actress Samantha starrer Telugu-Tamil bi-lingual 'U-Turn' trailer is out.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X