For Quick Alerts
  ALLOW NOTIFICATIONS  
  For Daily Alerts

  ಚಿಕ್ಕಣ್ಣ ಹುಟ್ಟುಹಬ್ಬಕ್ಕೆ 'ಸಂಹಾರ' ಚಿತ್ರತಂಡ ನೀಡಿದೆ ವಿಶೇಷ ಗಿಫ್ಟ್!

  By Suneel
  |

  ಇಂದು ಸ್ಯಾಂಡಲ್ ವುಡ್ ನ ಕಾಮಿಡಿ ಕಿಂಗ್ ಚಿಕ್ಕಣ್ಣ ರವರ ಹುಟ್ಟುಹಬ್ಬ. ನ್ಯಾಚುರಲ್ ಅಭಿನಯದ ಮೂಲಕ ನ್ಯಾಚುರಲ್ ಆದ ಡೈಲಾಗ್ ಹೇಳುತ್ತ 2011 ರಿಂದ ನಿರಂತರವಾಗಿ ಕನ್ನಡಿಗರನ್ನು ಮನರಂಜಿಸುತ್ತಿರುವ ನ್ಯಾಚುರಲ್ ಸ್ಟಾರ್ ಗೆ ಫಿಲ್ಮಿಬೀಟ್ ಕಡೆಯಿಂದಲೂ ಹುಟ್ಟು ಹಬ್ಬದ ಶುಭಾಶಯಗಳು.['ರುದ್ರತಾಂಡವ'ವಾಡಿದ ಚಿರಂಜೀವಿ ಸರ್ಜಾ 'ಸಂಹಾರ' ಮಾಡಲು ಬಂದ್ರು.!]

  ಇಂದು ಚಿಕ್ಕಣ್ಣ ಹುಟ್ಟುಹಬ್ಬಕ್ಕೆ ಯಾರು ಏನು ಗಿಫ್ಟ್ ಕೊಡುತ್ತಾರೋ ಗೊತ್ತಿಲ್ಲಾ. ಆದರೆ ಚಿರಂಜೀವಿ ಸರ್ಜಾ ಅಭಿನಯದ 'ಸಂಹಾರ' ಚಿತ್ರತಂಡ ಮಾತ್ರ ಒಂದು ವಿಶೇಷ ಗಿಫ್ಟ್ ನೀಡಿದೆ. ಅದೇನಂದ್ರೆ 'ಸಂಹಾರ' ಚಿತ್ರದಲ್ಲಿ ಚಿಕ್ಕಣ್ಣ ಸಹ ಅಭಿನಯಿಸಿದ್ದು ಅವರನ್ನು ಹೈಲೈಟ್ ಮಾಡಿರುವ 1 ನಿಮಿಷ 35 ಸೆಕೆಂಡ್ ಇರುವ ವಿಶೇಷ ಟೀಸರ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

  ಚಿಕ್ಕಣ್ಣ ಇದೇ ಮೊದಲ ಬಾರಿಗೆ ಖಾಕಿ ಖದರ್ ನಲ್ಲಿ ಗರ್ಜಿಸಿರುವ ಅದ್ಭುತ ಟೀಸರ್ ಒಂದು ಚಿಕ್ಕಣ್ಣ ಬರ್ತ್‌ ಡೇ ಪ್ರಯುಕ್ತ ರಿಲೀಸ್ ಆಗಿರುವುದು ಸಂತಸತಂದಿದೆ. ಇನ್ನೊಂದು ವಿಶೇಷ ಅಂದ್ರೆ 'ಸಂಹಾರ'ದಲ್ಲಿ ಪೊಲೀಸ್ ಗೆಟಪ್ ನಲ್ಲಿ ಕಾಣಿಸಿಕೊಂಡಿರುವ ಚಿಕ್ಕಣ್ಣನಿಗೆ ಚಿತ್ರದಲ್ಲಿ ರಾಜಾ ಹುಲಿ ಹೆಸರಿಡಲಾಗಿದೆ. ಹೆಸರಿಗೆ ತಕ್ಕಂತೆ ಚಿಕ್ಕು ಸಹ ತಮ್ಮ ನಟನೆಯ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ.

  ಕಾಮಿಡಿ ಕಿಂಗ್ ಚಿಕ್ಕಣ್ಣನ ಪೊಲೀಸ್ ಪಾತ್ರಕ್ಕೆ ತಕ್ಕಂತೆ 'ಕೆಂಪೇಗೌಡ ಬ್ರಿಲಿಯನ್ಸ್, ಐರಾವತ ಫೋರ್ಸ್' ಇರುವ ಖಡಕ್ ಆಫೀಸರ್ ಎಂದು ಬಿಲ್ಡಪ್ ನೀಡಿದ್ದು ಅದಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ. ಇನ್ನೂ ಚಿಕ್ಕು "ಹುಲಿ ಬೇಟೆ ಆಡೋವಾಗ ಡಿಸ್‌ಟರ್ಬ್ ಮಾಡಿದ್ರೆ ನೀನ್ ಬೇಟೆ ಆಗೋಗ್ತಿಯಾ, ಈ ರಾಜಾ ಹುಲಿ ಡ್ಯುಟಿ ಮಾಡಬೇಕಾದ್ರೆ ಡಿಸ್‌ಟರ್ಬ್‌ ಮಾಡಿದ್ರೆ..!' ಅನ್ನೋ ಅದ್ಧೂರಿ ಡೈಲಾಗ್ ಹೊಡೆದು ಗಮನಸೆಳೆದಿದ್ದಾರೆ.

  'ಸಂಹಾರ' ಚಿತ್ರದಲ್ಲಿ ಚಿರಂಜೀವಿ ಸರ್ಜಾ ನಾಯಕ ನಟನಾಗಿ ಅಭಿನಯಿಸಿದ್ದು, ಹರಿಪ್ರಿಯಾ ಮತ್ತು ಕಾವ್ಯಶೆಟ್ಟಿ ಇಬ್ಬರು ನಾಯಕಿಯರು ಇದ್ದಾರೆ. ಗುರುದೇಶಪಾಂಡೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ರವಿವರ್ಮ ಸಾಹಸ ನಿರ್ದೇಶನ ಮಾಡಿದ್ದಾರೆ. 'ಉಗ್ರಂ' ಖ್ಯಾತಿಯ ರವಿ ಬಸ್ರೂರ್ ಸಂಗೀತ, ಜೆ.ಎಸ್.ವಾಲಿ ಕ್ಯಾಮೆರಾ ಕೈಚಳಕ ಸಿನಿಮಾದಲ್ಲಿದೆ. ಅಂದಹಾಗೆ ಚಿಕ್ಕು ಪೊಲೀಸ್ ಪಾತ್ರಧಾರಿಯಾಗಿ 'ರಾಜಾ ಹುಲಿ' ಅವತಾರ ತಾಳಿರುವ, 'ಸಂಹಾರ' ಚಿತ್ರತಂಡ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಮಾಡಿರುವ ಟೀಸರ್ ಈ ಕೆಳಗಿನಂತಿದೆ ನೋಡಿ.

  English summary
  Actor Chiranjeevi Sarja Starrer 'Samhara' film team released the teaser of this film due to Chikkanna Birthday Special.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X