»   » ಇದೇ ವಾರ 'ಸಂಹಾರ'ಕ್ಕೆ ಸಿದ್ಧವಾದ ಚಿರಂಜೀವಿ ಸರ್ಜಾ

ಇದೇ ವಾರ 'ಸಂಹಾರ'ಕ್ಕೆ ಸಿದ್ಧವಾದ ಚಿರಂಜೀವಿ ಸರ್ಜಾ

Posted By:
Subscribe to Filmibeat Kannada

ಚಿರಂಜೀವಿ ಸರ್ಜಾ ಅಭಿನಯದ 'ಸಂಹಾರ' ಸಿನಿಮಾ ಈಗಾಗಲೇ ಟ್ರೇಲರ್ ಮೂಲಕ ಸಾಕಷ್ಟು ಗಮನ ಸೆಳೆದಿದೆ. ಈ ಸಿನಿಮಾದಲ್ಲಿ ಚಿರು ಸರ್ಜಾ ಮೊದಲ ಬಾರಿಗೆ ಅಂಧನ ಪಾತ್ರ ಮಾಡಿದ್ದು, ಸಿನಿಮಾದ ಮೇಲೆ ನಿರೀಕ್ಷೆ ಹುಟ್ಟುವಂತೆ ಮಾಡಿದೆ. 'ಸಂಹಾರ' ಚಿತ್ರ ಇದೇ ವಾರ ತೆರೆಗೆ ಬರಲು ರೆಡಿ ಆಗಿದೆ.

'ಸಂಹಾರ' ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದಾರೆ. ನಟಿ ಹರಿಪ್ರಿಯಾ ಮತ್ತು ಕಾವ್ಯ ಶೆಟ್ಟಿ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಗುರುದೇಶಪಾಂಡೆ ನಿರ್ದೇಶನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಇಂತಹ ವಿಭಿನ್ನ ಪಾತ್ರಕ್ಕೆ ಕೈ ಹಾಕಿರುವ ಚಿರು ತಮ್ಮ ಪ್ರತಿಭೆಯನ್ನು ತೋರಿಸುವುದಕ್ಕೆ ಇದೊಂದು ಒಳ್ಳೆಯ ಅವಕಾಶ ಆಗಿದೆ. ಅಂಧನೊಬ್ಬನ ಸೇಡಿನ ಕಥೆಯ ಸಿನಿಮಾ ಇದಾಗಿದೆ.

Samhara kannada movie will releasing this friday

'ಸಂಹಾರ' ಒಂದು ಪಕ್ಕಾ ಕಮರ್ಶಿಯಲ್ ಸಿನಿಮಾವಾಗಿದೆ. ನಟ ಚಿಕ್ಕಣ್ಣ ಪೊಲೀಸ್ ಕಾನ್ಸ್ಟೇಬಲ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಮೂಲಕ ಚಿಕ್ಕಣ್ಣ ನ್ಯಾಚುರಲ್ ಸ್ಟಾರ್ ಆಗಿದ್ದಾರೆ. ಅಂದಹಾಗೆ, 'ಸಂಹಾರ' ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗಲಿದೆ. ವಿಶೇಷ ಅಂದರೆ ಅದೇ ದಿನ ಚಿರಂಜೀವಿ ಸರ್ಜಾ ಅವರ ಮಾವ ಅರ್ಜುನ್ ಸರ್ಜಾ ಅವರ ಮಗಳ 'ಪ್ರೇಮ ಬರಹ' ಸಿನಿಮಾ ಕೂಡ ರಿಲೀಸ್ ಆಗಲಿದೆ.

English summary
Chiranjeevi Sarja's Samhara kannada movie will releasing this friday (February 9). Chiru playing a blind person role in 'Samhara'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada