»   » ಟ್ರೋಲ್ ಗಳಿಗೆ ಟಾಂಗ್ ಕೊಟ್ಟ ಕಿರಿಕ್ ಹುಡ್ಗಿ ಸಂಯುಕ್ತ ಹೆಗಡೆ

ಟ್ರೋಲ್ ಗಳಿಗೆ ಟಾಂಗ್ ಕೊಟ್ಟ ಕಿರಿಕ್ ಹುಡ್ಗಿ ಸಂಯುಕ್ತ ಹೆಗಡೆ

Posted By:
Subscribe to Filmibeat Kannada

ಕಿರಿಕ್ ಪಾರ್ಟಿ ಸಿನಿಮಾ ಮಾಡಿ ಪ್ರೇಕ್ಷಕರ ಮನಸ್ಸು ಕದ್ದಿದ್ದ ನಟಿ ನಂತರ ಕಿರಿಕ್ ಹುಡುಗಿ ಅಂತಾನೇ ಫೇಮಸ್ ಆದರು, ಕೇವಲ ಹೆಸರಿಗೆ ಮಾತ್ರವಲ್ಲದೆ ಎಲ್ಲರ ಬಳಿ ಈಕೆ ಕಿರಿಕ್ ಮಾಡುತ್ತಾರೆ ಅನ್ನುವುದು ಸಿನಿಮಾ ತಂಡಗಳ ಆರೋಪ.

ಸದ್ಯ ಟಾಲಿವುಡ್ ನಲ್ಲಿ ಕಿರಿಕ್ ಹುಡುಗಿಯ ಎಂಟ್ರಿಗಾಗಿ ಅಲ್ಲಿಯ ಅಭಿಮಾನಿಗಳು ಕಾತುರರಾಗಿದ್ದಾರೆ. ಇದೇ ತಿಂಗಳಲ್ಲಿ 'ಕಿರಾಕ್ ಪಾರ್ಟಿ' ಸಿನಿಮಾ ಬಿಡುಗಡೆ ಆಗುತ್ತಿದ್ದು ಸಂಯುಕ್ತ ಅಲ್ಲಿಯೂ ಆರ್ಯಾ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ.

ಮತ್ತೆ ಸದ್ದು -ಗದ್ದಲ ಶುರು ಮಾಡಿದ ಸಂಯುಕ್ತ ಹೆಗಡೆ

ಸಂಯುಕ್ತ ಹೋದ ಕಡೆಯಲ್ಲಾ ಸೌಂಡು ಅನ್ನುವಂತೆ ಇತ್ತೀಚಿಗಷ್ಟೇ ಸಂದರ್ಶನದಲ್ಲಿ ಸಿನಿಮಾ ಬಗ್ಗೆ , ವಿವಾದಗಳ ಬಗ್ಗೆ ,ಸಿನಿಮಾ ಪ್ರೇಕ್ಷಕರ ವಿಚಾರವಾಗಿ ಮಾತನಾಡಿದ್ದಾರೆ. ಇದೇ ಸಂದರ್ಭದಲ್ಲಿ ಟ್ರೋಲ್ ಮಾಡುವವರಿಗೂ ಮಾತಿನಲ್ಲಿ ಚಾಟಿ ಬೀಸಿದ್ದಾರೆ. ಏನಂದ್ರು ಸಂಯುಕ್ತ ಅಂತೀರಾ ಮುಂದೆ ಓದಿ.

ಮತ್ತೆ ಕಿರಿಕ್ ಮಾಡುದ್ರಾ ಸಂಯುಕ್ತ

ನಟಿ ಸಂಯುಕ್ತ ಹೆಗಡೆ ಸಾಕಷ್ಟು ದಿನಗಳಿಂದ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದ್ದವರು. ಬೆಂಗಳೂರಿನ ಗಲ್ಲಿಯಿಂದ ಹಿಡಿದು ದಿಲ್ಲಿಯ ಪ್ರಧಾನಿ ಕಛೇರಿ ಚಿತ್ರಗಳಲ್ಲಿ ಸಂಯುಕ್ತ ಪೋಟೋಗಳನ್ನ ಬಳಸಿಕೊಂಡಿದ್ದರು. ಸ್ವಲ್ಪ ದಿನ ಸೈಲೆಂಟ್ ಆಗಿದ್ದ ಸಂಯುಕ್ತ ಈಗ ಈ ಬಗ್ಗೆ ಮಾತನಾಡಿದ್ದಾರೆ.

ಸಮಯ ಎಲ್ಲಿಂದ ಬರುತ್ತೆ ಎಂದ ನಟಿ

ಇತ್ತಿಚಿನ ಸಂದರ್ಶನವೊಂದರಲ್ಲಿ ಟ್ರೋಲ್ ಗಳ ಬಗ್ಗೆ ಕೇಳಿದ ಪ್ರಶ್ನೆಗೆ ನಟಿ ಸಂಯುಕ್ತ ಉತ್ತರಿಸಿದ್ದಾರೆ. "ನಾನು ಏನು ಮಾಡಬೇಕು ಎನ್ನುವುದು ನನಗಿಂತ ಚೆನ್ನಾಗಿ ನಿಮಗೆ ಗೊತ್ತಾಗುತ್ತೆ ಅದು ಹೇಗೆ? ನಿಮಗೆ ಟ್ರೋಲ್ ಮಾಡಲು ಸಮಯ ಎಲ್ಲಿ ಸಿಗುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ.

ನಿಮ್ಮ ಖುಷಿಯೇ ನನ್ನ ಖುಷಿ

ನನ್ನ ಫೋಟೋಗಳನ್ನ ಟ್ರೋಲ್ ಮಾಡಿದರೆ ನಿಮಗೆ ಖುಷಿ ಸಿಗುತ್ತದೆ ಎನ್ನುವುದಾದರೆ ನನಗೆ ಖುಷಿ ಇದೆ. ನಟಿಯಾಗಿ ರಂಜಿಸುವುದಷ್ಟೇ ನನ್ನ ಕರ್ತವ್ಯ ಎಂದು ಟ್ರೋಲ್ ಮಾಡುವವರಿಗೆ ಟಾಂಗ್ ಕೊಟ್ಟಿದ್ದಾರೆ ಸಂಯುಕ್ತ ಹೆಗಡೆ.

ಕಿರಾಕ್ ಪಾರ್ಟಿ ರಿಲೀಸ್

ಸಂಯುಕ್ತ ಹೆಗಡೆ ಟಾಲಿವುಡ್ ನಲ್ಲಿ ಅಭಿನಯಿಸಿರುವ ಮೊದಲ ಚಿತ್ರ ಇದೇ ತಿಂಗಳ ಅಂತ್ಯಕ್ಕೆ ಬಿಡುಗಡೆ ಆಗುತ್ತಿದೆ. ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾ ಕಿರಾಕ್ ಪಾರ್ಟಿ ಆಗಿ ತೆಲುಗಿನಲ್ಲಿ ತೆರೆ ಕಾಣುತ್ತಿದೆ.

ಸುನಾಮಿ ಕಿಟ್ಟಿ ಕಿಡ್ನಾಪ್ ಪ್ರಕರಣ : ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಸುನಿಲ್ ಪತ್ನಿ

English summary
Kannada actress Samyukta hegde speaks about troll pages , Samyukta spoke about this during the 'Kiraak Party' cinema interview. Kiraak Party movie will be screened in March last week.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada