For Quick Alerts
  ALLOW NOTIFICATIONS  
  For Daily Alerts

  ಸಂಯುಕ್ತ ಹೆಗ್ಡೆ ಕನ್ನಡದ ನೀಲಿ ತಾರೆ, ಗಂಡುಬೀರಿ ಎಂದ ಯುವ ನಿರ್ದೇಶಕ.!

  |
  ಸಂಯುಕ್ತ ಹೆಗ್ಡೆ ಕನ್ನಡದ ನೀಲಿ ತಾರೆ, ಗಂಡುಬೀರಿ ಎಂದ ಯುವ ನಿರ್ದೇಶಕ.! | FILMIBEAT KANNADA

  ಸದಾ ವಿವಾದಗಳಿಂದಲೇ ಸದ್ದು ಸುದ್ದಿ ಮಾಡುವ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಿತರಾದ ನಟಿ ಸಂಯುಕ್ತ ಹೆಗ್ಡೆ ಬಗ್ಗೆ ಯುವ ನಿರ್ದೇಶಕ ಕೀರ್ತನ್ ಶೆಟ್ಟಿ ಗಂಭೀರ ಆರೋಪ ಮಾಡಿದ್ದಾರೆ.

  '''ಹಿಂದಿಯಲ್ಲಿ ಸನ್ನಿ ಲಿಯೋನ್ ಹೆಂಗೋ, ಕರ್ನಾಟಕದಲ್ಲಿ ಸಂಯುಕ್ತ ಹೆಗ್ಡೆ ಹಂಗೆ.. ಗಂಡುಬೀರಿ ಸಂಯುಕ್ತ. ಸಂಯುಕ್ತ ಹೆಗ್ಡೆ ಒಬ್ಬಳು ಕೆಟ್ಟ ಹುಡುಗಿ, ಅವಳಿಗೆ ಎಣ್ಣೆ, ಗಾಂಜಾ, ಸಿಗರೇಟ್ ಎಲ್ಲಾ ಕೆಟ್ಟ ಚಟ ಇರುವ ಹುಡುಗಿ. ಅಂಥವರಿಂದ ನಮ್ಮ ಚಿತ್ರರಂಗ ಹಾಳಾಗುತ್ತಿದೆ'' ಎಂದು ತಮ್ಮ ಫೇಸ್ ಬುಕ್ ನಲ್ಲಿ ಕೀರ್ತನ್ ಶೆಟ್ಟಿ ಬರೆದುಕೊಂಡಿದ್ದಾರೆ.

  ಅಷ್ಟಕ್ಕೂ, ಯಾರೀ ಕೀರ್ತನ್ ಶೆಟ್ಟಿ.? ಅವರು ಯಾಕೆ ಸಂಯುಕ್ತ ಹೆಗ್ಡೆ ವಿರುದ್ಧ ಆರೋಪ ಮಾಡ್ತಿದ್ದಾರೆ ಅಂತೀರಾ ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ಯಾರೀ ಕೀರ್ತನ್ ಶೆಟ್ಟಿ.?

  ಯಾರೀ ಕೀರ್ತನ್ ಶೆಟ್ಟಿ.?

  'ಮೀಟೂ ವಿತ್ ಫೈಟೂ' ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಮುಂದಾಗಿರುವವರು ಕೀರ್ತನ್ ಶೆಟ್ಟಿ. 'ಮೀಟೂ ವಿತ್ ಫೈಟೂ' ಚಿತ್ರದಲ್ಲಿ ಟಾಲಿವುಡ್ ನ ಶ್ರೀರೆಡ್ಡಿ ಅಭಿನಯಿಸಲು ಒಪ್ಪಿಕೊಂಡಿದ್ದಾರಂತೆ. ಅಲ್ಲದೇ, ಇದೇ ಸಿನಿಮಾದಲ್ಲಿ ಸಂಯುಕ್ತ ಹೆಗ್ಡೆ ತರಹದ ಒಂದು ಪಾತ್ರ ಕೂಡ ಇದ್ಯಂತೆ. ಇದನ್ನ ಬಹಿರಂಗ ಪಡಿಸುವ ಸಲುವಾಗಿ ಫೇಸ್ ಬುಕ್ ನಲ್ಲಿ ಕೀರ್ತನ್ ಶೆಟ್ಟಿ ಒಂದು ಪೋಸ್ಟ್ ಹಾಕಿದ್ದರು. ಅದರಲ್ಲಿ ಸಂಯುಕ್ತ ಹೆಗ್ಡೆ ಬಗ್ಗೆ ಕೀರ್ತನ್ ಶೆಟ್ಟಿ ಗಂಭೀರ ಆರೋಪ ಮಾಡಿದ್ದಾರೆ.

  'ಸ್ಪ್ಲಿಟ್ಸ್ ವಿಲ್ಲಾ-11'ಗೆ ಬಂದ ಸಂಯುಕ್ತ ಹೆಗ್ಡೆ ಮಾಜಿ ಪ್ರಿಯಕರ: ಕಿರಿಕ್ ಹುಡುಗಿಯ ಲವ್ ಸ್ಟೋರಿಗಳೆಷ್ಟು.?

  ಫೇಸ್ ಬುಕ್ ಪೋಸ್ಟ್ ನಲ್ಲಿ ಏನಿದೆ.?

  ಫೇಸ್ ಬುಕ್ ಪೋಸ್ಟ್ ನಲ್ಲಿ ಏನಿದೆ.?

  ''ಶ್ರೀರೆಡ್ಡಿಯದ್ದು ಯಾವ ಪಾತ್ರ ಯಾರ ಪಾತ್ರ ಅಂತ ನಾನು ಖಂಡಿತ ಹೇಳಲ್ಲ. ನನ್ನ ಚಿತ್ರದಲ್ಲಿ ಕಿರಿಕ್ ಹುಡ್ಗಿ ಬಜಾರಿ ಅಂತ ಹೆಸರುವಾಸಿಯಾದ ಗಂಡುಬೀರಿ ಸಂಯುಕ್ತ ಹೆಗ್ಡೆ ತರಹದ ಒಂದು ಪಾತ್ರ ಇದೆ. ಆ ಪಾತ್ರವನ್ನು ಇವಾಗ 'ಬಿಗ್ ಬಾಸ್' ಮನೆಯಲ್ಲಿರುವ ಸೋನು ಪಾಟೀಲ್ ಅವರು ಹೊರಗಡೆ ಬಂದಾಗ ಅವರತ್ರ ಮಾತಾಡಿ, ಅವರತ್ರ ಮಾಡಿಸುವ ಪ್ಲಾನ್ ನಮ್ಮದು. ಸೋನು ಪಾಟೀಲ್ ನನಗೆ ವೈಯುಕ್ತಿಕವಾಗಿ ಗೊತ್ತಿರುವ ಹುಡುಗಿ'' ಎಂದು ಫೇಸ್ ಬುಕ್ ಪೋಸ್ಟ್ ನಲ್ಲಿ ಕೀರ್ತನ್ ಶೆಟ್ಟಿ ಬರೆದುಕೊಂಡಿದ್ದಾರೆ.

  ಕಾಲಿವುಡ್ ಗೆ ಪದಾರ್ಪಣೆ ಮಾಡಿದ 'ಕಿರಿಕ್' ಹುಡುಗಿ ಸಂಯುಕ್ತ ಹೆಗ್ಡೆ

  ಸಂಯುಕ್ತ ಹೆಗ್ಡೆ ಬಗ್ಗೆ ಆರೋಪ.!

  ಸಂಯುಕ್ತ ಹೆಗ್ಡೆ ಬಗ್ಗೆ ಆರೋಪ.!

  ಇದೇ ಪೋಸ್ಟ್ ನಲ್ಲಿ ''ಸಂಯುಕ್ತ ಹೆಗ್ಡೆ ಒಬ್ಬಳು ಕೆಟ್ಟ ಹುಡುಗಿ. ಅವಳಿಗೆ ಎಣ್ಣೆ, ಗಾಂಜಾ, ಸಿಗರೇಟ್ ಎಲ್ಲಾ ಕೆಟ್ಟ ಚಟ ಇರುವ ಹುಡುಗಿ. ಅಂಥವರಿಂದ ನಮ್ಮ ಚಿತ್ರರಂಗ ಹಾಳಾಗುತ್ತಿದೆ. ದಯಮಾಡಿ ನನ್ನ ಚಿತ್ರದಲ್ಲಿ ಯಾವುದೇ ಕೆಟ್ಟ ಸಂದೇಶ ಇಲ್ಲ. ಚಿತ್ರರಂಗವನ್ನು ಉಳಿಸುವ ಪ್ರಯತ್ನ ಮತ್ತು ನಿಜವಾದ ಕಥೆಯಾಧಾರಿತ ಸಿನಿಮಾ. ಸಂಯುಕ್ತ ಹೆಗ್ಡೆ ಕನ್ನಡದ ನೀಲಿ ತಾರೆ. ಹಿಂದಿಯಲ್ಲಿ ಸನ್ನಿ ಲಿಯೋನ್ ಹೆಂಗೋ, ಕರ್ನಾಟಕದಲ್ಲಿ ಸಂಯುಕ್ತ ಹೆಗ್ಡೆ ಹಂಗೆ. ಗಂಡುಬೀರಿ ಸಂಯುಕ್ತ'' ಎಂದು ಕೀರ್ತನ್ ಶೆಟ್ಟಿ ಫೇಸ್ ಬುಕ್ ನಲ್ಲಿ ಹಾಕಿದ್ದರು.

  ಎಂಟಿವಿ 'ಸ್ಪ್ಲಿಟ್ಸ್ ವಿಲ್ಲಾ'ದಲ್ಲೂ ನಟಿ ಸಂಯುಕ್ತ ಹೆಗಡೆ ಕಿರಿಕ್.!

  ಪೋಸ್ಟ್ ಡಿಲೀಟ್.!

  ಪೋಸ್ಟ್ ಡಿಲೀಟ್.!

  ಇದೇ ಪೋಸ್ಟ್ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಆಗುತ್ತಿದ್ದರಂತೆ, ಅದನ್ನ ಕೀರ್ತನ್ ಶೆಟ್ಟಿ ಡಿಲೀಟ್ ಮಾಡಿದ್ದಾರೆ. ಸಂಯುಕ್ತ ಹೆಗ್ಡೆ ಬಗ್ಗೆ ಕೀರ್ತನ್ ಶೆಟ್ಟಿ ಹೀಗೆಲ್ಲಾ ಯಾಕೆ ಬರೆದುಕೊಂಡಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.

  English summary
  Samyuktha Hegde is Karnataka's Sunny leone says Keerthan Shetty

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X