twitter
    For Quick Alerts
    ALLOW NOTIFICATIONS  
    For Daily Alerts

    ಸಂಯುಕ್ತಾ ಹೆಗ್ಡೆ ಮೇಲೆ ಹಲ್ಲೆ ಪ್ರಕರಣ: ಕವಿತಾ ರೆಡ್ಡಿ ವಿರುದ್ಧ ದೂರು ವಾಪಸ್

    |

    ನಟಿ ಸಂಯುಕ್ತಾ ಹೆಗ್ಡೆ ಮತ್ತು ಸ್ನೇಹಿತರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕವಿತಾ ರೆಡ್ಡಿ ವಿರುದ್ಧ ನೀಡಿದ್ದ ದೂರನ್ನು ನಟಿ ವಾಪಸ್ ಪಡೆದಿದ್ದಾರೆ.

    Recommended Video

    ಧನ್ವೀರ್ ಯಶಸ್ಸು ನೋಡಿ ಖುಷಿಪಟ್ಟ ಸ್ನೇಹಿತ | Filmibeat Kannada

    ಕಾಂಗ್ರೆಸ್ ವಕ್ತಾರೆ ಕವಿತಾ ರೆಡ್ಡಿ ಅವರನ್ನು ಪೊಲೀಸರು ನಿನ್ನೆ (ಸೆಪ್ಟಂಬರ್ 9) ಬಂಧಿಸಿ, ನಂತರ ಬಿಡುಗಡೆ ಮಾಡಿದ್ದರು. ಇದೀಗ, ಕವಿತಾ ರೆಡ್ಡಿ ವಿರುದ್ಧದ ಪ್ರಕರಣವನ್ನು ಮುಂದುವರೆಸಲು ಬಯಸುವುದಿಲ್ಲ, ಅವರು ಕ್ಷಮೆ ಕೇಳಿದ್ದು ಅತೃಪ್ತಿಕರವಾಗಿಲ್ಲ ಆದರೂ ಅವರ ವಿರುದ್ಧ ದೂರನ್ನ ಹಿಂಪಡೆಯುತ್ತೇನೆ ಎಂದು ಸಂಯುಕ್ತಾ ಟ್ವೀಟ್ ಮೂಲಕ ತಿಳಿಸಿದ್ದಾರೆ. ಈ ಸಂಬಂಧ ಸಂಯುಕ್ತಾ ವಿವರವಾಗಿ ಪತ್ರ ಬರೆದಿದ್ದಾರೆ. ಮುಂದೆ ಓದಿ...

    ಸಂಯುಕ್ತಾ ಹೆಗಡೆ ಮೇಲೆ ಹಲ್ಲೆಗೆ ಯತ್ನಿಸಿದ್ದ ಕವಿತಾ ರೆಡ್ಡಿ ಬಂಧನಸಂಯುಕ್ತಾ ಹೆಗಡೆ ಮೇಲೆ ಹಲ್ಲೆಗೆ ಯತ್ನಿಸಿದ್ದ ಕವಿತಾ ರೆಡ್ಡಿ ಬಂಧನ

     ಕವಿತಾ ರೆಡ್ಡಿ ವಿರುದ್ಧ ದೂರು ವಾಪಸ್ ಪಡೆದ ಸಂಯುಕ್ತಾ

    ಕವಿತಾ ರೆಡ್ಡಿ ವಿರುದ್ಧ ದೂರು ವಾಪಸ್ ಪಡೆದ ಸಂಯುಕ್ತಾ

    ನಟಿ ಸಂಯುಕ್ತಾ ಹೆಗ್ಡೆ, ಕವಿತಾ ರೆಡ್ಡಿ ವಿರುದ್ಧ ನೀಡಿದ್ದ ದೂರನ್ನು ವಾಪಸ್ ಪಡೆದಿದ್ದಾರೆ. ಆದರೆ ಅನಿಲ್ ರೆಡ್ಡಿ ಸೇರಿದಂತೆ ಉಳಿದ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಹೇಳಿದ್ದಾರೆ. ಅನಿಲ್ ರೆಡ್ಡಿ, ಸಂಯುಕ್ತಾ ಹೆಗ್ಡೆ ವಿರುದ್ಧ ಗ್ರಡ್ಸ್ ಸೇವನೆ ಆರೋಪ ಮಾಡಿದ್ದರು. ಅಲ್ಲದೆ ಸಂಯುಕ್ತಾ ಮತ್ತು ಸ್ನೇಹಿತರು ಧರಿಸಿದ್ದ ಬಟ್ಟೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

     ದೀರ್ಘ ಪತ್ರ ಬರೆದಿರುವ ಸಂಯುಕ್ತಾ

    ದೀರ್ಘ ಪತ್ರ ಬರೆದಿರುವ ಸಂಯುಕ್ತಾ

    ಈ ಬಗ್ಗೆ ವಿವರವಾಗಿ ಪತ್ರ ಬರೆದಿರುವ ನಟಿ ಸಂಯುಕ್ತಾ ಹೆಗಡೆ, "ನಾನು ನನ್ನ ಕುಟುಂಬದ ಜೊತೆ ಮಾತನಾಡಿ ಮತ್ತು ಕವಿತಾ ರೆಡ್ಡಿ ಅವರ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಈ ಪ್ರಕರಣವನ್ನು ಮುಂದುವರೆಸಲು ಬಯಸುವುದಿಲ್ಲ. ಈ ಬಗ್ಗೆ ನಾನು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದೇನೆ. ಆದರೆ ಪಾರ್ಕ್ ನಲ್ಲಿ ಬೆದರಿಕೆ ಹಾಕಿದ, ನಿಂದನೆ ಮಾಡಿದ ಮತ್ತು ತುಂಬಾ ಅಸಹಾಯಕರಾಗಿದ್ದ ಅನಿಲ್ ರೆಡ್ಡಿ ಮತ್ತು ಅವರೊಂದಿಗೆ ಇದ್ದ ಇತರರ ವಿರುದ್ಧ ಬಲವಾದ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಾನು ಭಾವಿಸಿದ್ದೇನೆ" ಎಂದಿದ್ದಾರೆ.

    ಸಂಯುಕ್ತಾ ಹೆಗ್ಡೆ ಮೇಲೆ ನೈತಿಕ ಪೊಲೀಸ್‌ಗಿರಿ: ನಟಿ ರಮ್ಯಾ ಹೇಳಿದ್ದು ಹೀಗೆಸಂಯುಕ್ತಾ ಹೆಗ್ಡೆ ಮೇಲೆ ನೈತಿಕ ಪೊಲೀಸ್‌ಗಿರಿ: ನಟಿ ರಮ್ಯಾ ಹೇಳಿದ್ದು ಹೀಗೆ

     ಅವರ ಕ್ಷಮೆ ಪ್ರಾಮಾಣಿಕವಾಗಿರಲಿಲ್ಲ- ಸಂಯುಕ್ತಾ

    ಅವರ ಕ್ಷಮೆ ಪ್ರಾಮಾಣಿಕವಾಗಿರಲಿಲ್ಲ- ಸಂಯುಕ್ತಾ

    ಕವಿತಾ ರೆಡ್ಡಿ ಕ್ಷಮೆಯಾಚನೆ ತೃಪ್ತಿಕರವಾಗಿಲ್ಲ. ಅವರ ಕ್ಷಮೆ ಪ್ರಾಮಾಣಿಕವಾಗಿರಲಿಲ್ಲ. ಕ್ಷಮೆ ಕೇಳಿದ ಬಳಿಕ ತನ್ನ ಪೋಸ್ಟ್ ಗಳನ್ನು ಮತ್ತು ಡಿಲೀಟ್ ಮಾಡಿರಲಿಲ್ಲ. ತನ್ನ ಇಮೇಜ್ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಒತ್ತಡದಲ್ಲಿ ಕ್ಷಮೆಯಾಚಿಸಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಈ ಘಟನೆಯಿಂದ ಎಲ್ಲರ ಗಮನ ಅವರ ಮತ್ತು ನನ್ನ ಮೇಲೆ ಮಾತ್ರ ಇರಬಾರದು ಎಂದು ನಾನು ಬಯಸುತ್ತೇನೆ. ಎಲ್ಲೆಡೆ ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯಕ್ಕಾಗಿ ಕೆಲಸ ಮಾಡಲು ಒಂದು ಸಣ್ಣ ಮಾರ್ಗವಾಗಿದೆ'' ಎಂದಿದ್ದಾರೆ.

     ಪಾರ್ಕ್ ನಲ್ಲಿ ಹಲ್ಲೆ ಮಾಡಿದ್ದ ಕವಿತಾ ರೆಡ್ಡಿ ಗ್ಯಾಂಗ್

    ಪಾರ್ಕ್ ನಲ್ಲಿ ಹಲ್ಲೆ ಮಾಡಿದ್ದ ಕವಿತಾ ರೆಡ್ಡಿ ಗ್ಯಾಂಗ್

    ಸಂಯುಕ್ತಾ ಹೆಗ್ಡೆ ಮತ್ತು ಸ್ನೇಹಿತರು ಪಾರ್ಕ್ ನಲ್ಲಿ ವ್ಯಾಯಾಮ ಮಾಡುತ್ತಿದ್ದ ಸಮಯದಲ್ಲಿ ತುಂಡುಡುಗೆ ತೊಟ್ಟು ನಂಗಾನಾಚ್ ಮಾಡುತ್ತಿದ್ದಾರೆ ಎಂದು ಕವಿತಾ ರೆಡ್ಡಿ ಹಾಗೂ ಇತರರು ನಿಂದಿಸಿ ಹಲ್ಲೆ ಮಾಡಿದ್ದರು. ಪಾರ್ಕ್‌ ಗೇಟ್ ಬೀಗ ಹಾಕಿ ಸಂಯುಕ್ತಾ ಹೆಗ್ಡೆ ಹಾಗೂ ಗೆಳೆತಿಯರಿಗೆ ತೊಂದರೆ ನೀಡಿದ್ದರು. ನೈತಿಕ ಪೊಲೀಸ್ ಗಿರಿಯನ್ನು ಅನೇಕರು ಖಂಡಿಸಿ ಕವಿತಾ ರೆಡ್ಡಿ ಬಂಧನಕ್ಕೆ ಒತ್ತಾಯಿಸಿದ್ದರು.

    English summary
    Actress Samyuktha Hegde withdraws complaint against Civic Activist Kavitha Reddy.
    Wednesday, September 9, 2020, 15:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X