For Quick Alerts
  ALLOW NOTIFICATIONS  
  For Daily Alerts

  ಬೈಕ್ ಅಪಘಾತ: ದೂರು ದಾಖಲಿಸಿದ ಸಂಚಾರಿ ವಿಜಯ್ ಸಹೋದರ

  |

  ಬೈಕ್‌ನಲ್ಲಿ ತೆರಳುತ್ತಿದ್ದಾಗ ನಡೆದ ಅಪಘಾತದಿಂದ ನಟ ಸಂಚಾರಿ ವಿಜಯ್‌ ಮತ್ತು ಸ್ನೇಹಿತ ನವೀನ್‌ಗೆ ಗಂಭೀರ ಗಾಯವಾಗಿದೆ. ಸದ್ಯ, ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  ಮತ್ತೊಂದೆಡೆ ಸಂಚಾರಿ ವಿಜಯ್ ಸಹೋದರ ಸಿದ್ದೇಶ್ ಕುಮಾರ್ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

  Breaking: ಸಂಚಾರಿ ವಿಜಯ್‌ಗೆ ಅಪಘಾತ, ಐಸಿಯುನಲ್ಲಿ ಚಿಕಿತ್ಸೆBreaking: ಸಂಚಾರಿ ವಿಜಯ್‌ಗೆ ಅಪಘಾತ, ಐಸಿಯುನಲ್ಲಿ ಚಿಕಿತ್ಸೆ

  ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ 'ಸಂಚಾರಿ ವಿಜಯ್ ಮತ್ತು ನವೀನ್ ಇಬ್ಬರು ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದರು. ಶನಿವಾರ ರಾತ್ರಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಅಪಘಾತದ ಬಗ್ಗೆ ನನಗೂ ಸ್ಪಷ್ಟವಾದ ಮಾಹಿತಿ ಇಲ್ಲ. ಆಕ್ಸಿಡೆಂಟ್ ಕುರಿತು ದೂರು ನೀಡಿದ್ದೇನೆ' ಎಂದು ತಿಳಿಸಿದ್ದಾರೆ.

  ಶನಿವಾರ ರಾತ್ರಿ ಅಪಘಾತ ನಡೆದಿದೆ. ಮುಂಜಾನೆ ಆಸ್ಪತ್ರೆಯಿಂದ ಮೆಮೋ ಬಂದಾಗ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಕೂಡಲೇ ಆಸ್ಪತ್ರೆಗೆ ತೆರಳಿ ಮಾಹಿತಿ ಕಲೆಹಾಕಿರುವ ಜಯನಗರ ಸಂಚಾರಿ ಪೊಲೀಸರು ಅಪಘಾತ ಆದ ಬೈಕ್ ವಶಕ್ಕೆ ಪಡೆದಿದ್ದಾರೆ.

  ಬೈಕ್ ಚಾಲನೆ ಮಾಡ್ತಿದ್ದ ನವೀನ್ ಪೊಲೀಸರ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದಿರುವುದಾಗಿ ಹೇಳಿಕೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  ಸಂಚಾರಿ ವಿಜಯ್‌ಗೆ ಏನಾಗಿದೆ, ವೈದ್ಯರು ಏನು ಹೇಳಿದ್ರು?ಸಂಚಾರಿ ವಿಜಯ್‌ಗೆ ಏನಾಗಿದೆ, ವೈದ್ಯರು ಏನು ಹೇಳಿದ್ರು?

  ಇನ್ನು ಸಹೋದರ ಆರೋಗ್ಯದ ಬಗ್ಗೆ ಪ್ರತಿಕ್ರಿಯಿಸಿದ ಸಹೋದರ ಸಿದ್ದೇಶ್, ''ಸಂಚಾರಿ ವಿಜಯ್‌ಗೆ ಏನು ಆಗಬಾರದು, ದಯವಿಟ್ಟು ಎಲ್ಲರೂ ಅವರಿಗಾಗಿ ಪ್ರಾರ್ಥಿಸಿ, ಅವರೊಬ್ಬ ಒಳ್ಳೆಯ ವ್ಯಕ್ತಿ'' ಎಂದು ಭಾವುಕರಾದರು.

  English summary
  Sanchari Vijay Accident: Actor brother siddesh kumar filed complaint on bike accident at jayanagar traffic police station.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X