ದರ್ಶನ್ ಹೇಳಿದ ಮಾತು ಕೇಳಿ ಭಾವುಕರಾದ ಸಂಚಾರಿ ವಿಜಯ್
Recommended Video
ಸಂಚಾರಿ ವಿಜಯ್ ಅಂದ್ರೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ 'ನಾನು ಅವನಲ್ಲ ಅವಳು' ಸಿನಿಮಾ ನೆನಪಾಗುತ್ತೆ. ಬಹುಶಃ ವಿಜಯ್ ಅವರು ನೂರು ಅಥವಾ ಇನ್ನೂರು ಸಿನಿಮಾ ಮಾಡಿದ್ರು 'ನಾನು ಅವನಲ್ಲ ಅವಳು' ಚಿತ್ರವನ್ನು ಮಾತ್ರ ಯಾರೂ ಮರೆಯಲ್ಲ.
ಹೌದು, ಈ ಚಿತ್ರದ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಜಂಟಲ್ ಮ್ಯಾನ್' ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ್ದ ನಟ ಸಂಚಾರಿ ವಿಜಯ್ ಅವರನ್ನು ಹಾಡಿ ಹೊಗಳಿದ್ದಾರೆ.
ಡಿ ಬಾಸ್ ಮಾತು ಕೇಳಿದ ಸಂಚಾರಿ ವಿಜಯ್ ಭಾವುಕರಾಗಿದ್ದು ಕೂಡ ಕಂಡು ಬಂತು. ಹಾಗಿದ್ರೆ, ದರ್ಶನ್ ಮಾತು ಕೇಳಿ ಸಂಚಾರಿ ವಿಜಯ್ ಏನಂದ್ರು? ಮುಂದೆ ಓದಿ...

ವಿಜಯ್ ಗೆ ನಾನು ಫಿದಾ ಆಗ್ಬಿಟ್ಟೆ
''ಸಂಚಾರಿ ವಿಜಯ್ ಬಹಳ ದೊಡ್ಡ ನಟ. ನಾನು ಅವನಲ್ಲ ಅವಳು ಸಿನಿಮಾ ನೋಡಿದೆ. ಅವರಿಗೆ ನಾನು ಫಿದಾ ಆಗ್ಬಿಟ್ಟೆ. ಅದರಲ್ಲಿ ಒಳ್ಳೆಯ ಪ್ರಯತ್ನ ಇತ್ತು. ಅದೇ ಬೇರೆ ಭಾಷೆಯವರಾಗಿದ್ದರೆ ಚಪ್ಪಾಳೆ ಹೊಡೆದು, ದುಡ್ಡು ಕೊಟ್ಟು ಕಳುಹಿಸುತ್ತಿದ್ವಿ'' ಎಂದು ಹಾಡಿ ಹೊಗಳಿದ್ದಾರೆ.

ಆ ತಮಿಳು ನಟನಿಗಿಂತ ದೊಡ್ಡ ನಟ ಸಂಚಾರಿ
''ತಮಿಳಿನಲ್ಲಿ ಒಬ್ಬ ನಟ ಇದ್ದಾನೆ. ಹೆಸರು ಹೇಳುವುದು ಬೇಡ. ನಮ್ಮ ಸಂಚಾರಿ ವಿಜಯ್ ಅವರಿಗಿಂತ ಆತ ದೊಡ್ಡ ಕಲಾವಿದ ಏನೂ ಅಲ್ಲ. ಆದರೆ ಹೆಸರು ಮಾತ್ರ ದೊಡ್ಡದಾಗಿ ಹೇಳ್ತಾರೆ'' ಎಂದು ವಿಜಯ್ ಕುರಿತು ಹೇಳಿದರು.

ಭಾವುಕರಾದ ಸಂಚಾರಿ ವಿಜಯ್!
ಜಂಟಲ್ ಮ್ಯಾನ್ ಆಡಿಯೋ ಬಿಡುಗಡೆ ಕಾರ್ಯಕ್ರಮದ ವೇದಿಕೆಯಲ್ಲಿ ಸಂಚಾರಿ ವಿಜಯ್ ಕುರಿತು ದರ್ಶನ್ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ, ಫಿಲ್ಮಿಬೀಟ್ ಕನ್ನಡದ ಜೊತೆ ಮಾತನಾಡಿದ ಸಂಚಾರಿ ವಿಜಯ್, ದರ್ಶನ್ ಅವರ ಮಾತಿನ ಬಗ್ಗೆ ನೆನಪಿಸಿಕೊಂಡು ಭಾವುಕರಾದರು.

ಸಂಚಾರಿ ವಿಜಯ್ ಏನಂದ್ರು?
'ದರ್ಶನ್ ಅವರು ಹೇಳಿದ ಮಾತನ್ನು ಇನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಷ್ಟು ದೊಡ್ಡ ನಟನ ಬಾಯಿಂದ ಅಂತಹ ಮಾತು ಹೇಳಿ ನಾನು ಹೇಳಬೇಕೆಂದು ಗೊತ್ತೆ ಆಗುತ್ತಿಲ್ಲ' ಎಂದು ಒಂದು ಕ್ಷಣ ಭಾವುಕರಾದರು. ''ಅವರ ಹೇಳಿದ್ಮೇಲೆ ಒಂದು ಕ್ಷಣ ನನ್ನ ಮೈಯೆಲ್ಲಾ ಜುಂ ಅನಿಸುತ್ತು. ನಿಜವಾಗಲೂ ನನ್ನ ಬಗ್ಗೆನೇ ಹೇಳುತ್ತಿದ್ದಾರಾ ಎಂಬ ಅಚ್ಚರಿ ಆಯಿತು. ಥ್ಯಾಂಕ್ ಯೂ ದರ್ಶನ್ ಸರ್, ಒಬ್ಬ ನಟನನ್ನು ಇಷ್ಟೊಂದು ಪ್ರೀತಿಯಿಂದ ಅಪ್ಪಿಕೊಂಡಿದ್ದು ಖುಷಿ ಬಹಳ ಖುಷಿ ಆಯಿತು'' ಎಂದರು.

'ಜಂಟಲ್ ಮ್ಯಾನ್' ಚಿತ್ರದಲ್ಲಿ ಪೊಲೀಸ್!
ಪ್ರಜ್ವಲ್ ದೇವರಾಜ್ ಮತ್ತು ನಿಶ್ವಿಕಾ ನಾಯ್ಡು ನಟಿಸಿರುವ ಜಂಟಲ್ ಮ್ಯಾನ್ ಚಿತ್ರದಲ್ಲಿ ಸಂಚಾರಿ ವಿಜಯ್ ಪೊಲೀಸ್ ಅಧಿಕಾರಿ ಪಾತ್ರ ನಿರ್ವಹಿಸಿದ್ದಾರೆ. ಫೆಬ್ರವರಿ 7 ರಂದು ಸಿನಿಮಾ ತೆರೆಕಾಣುತ್ತಿದೆ. ಗುರುದೇಶಪಾಂಡೆ ನಿರ್ಮಿಸಿದ್ದು, ಹಂಪಿ ಜಡೇಶ್ ಕುಮಾರ್ ನಿರ್ದೇಶಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.


Click it and Unblock the Notifications











