For Quick Alerts
  ALLOW NOTIFICATIONS  
  For Daily Alerts

  ಸಂಚಾರಿ ವಿಜಯ್ ಕೈಯಲ್ಲಿದ್ದ ಮುಂದಿನ ಚಿತ್ರಗಳ ವಿವರ

  |

  ಆಸ್ಪತ್ರೆಯಲ್ಲಿ ಸಾವಿನೊಂದಿಗೆ ಹೋರಾಟ ಮಾಡುತ್ತಿರುವ ನಟ ಸಂಚಾರಿ ವಿಜಯ್ ಬದುಕುಳಿಯುವ ಸಾಧ್ಯತೆ ಬಹಳ ಕಡಿಮೆ ಎಂದು ವೈದ್ಯರು ಘೋಷಣೆ ಮಾಡಿ ಆಗಿದೆ. ಕೊನೆ ಕ್ಷಣದ ಭರವಸೆಯನ್ನು ಸಹ ಕುಟುಂಬಸ್ಥರು ಕಳೆದುಕೊಂಡಿದ್ದಾರೆ. ಮೆದುಳು ನಿಷ್ಕ್ರಿಯವಾಗಿದೆ ಎಂದು ತಿಳಿಯುತ್ತಿದ್ದ ಸಂಚಾರಿ ವಿಜಯ್ ಇನ್ನಿಲ್ಲ ಎಂದು ಆಪ್ತರು, ಸ್ನೇಹಿತರು ಖಾತ್ರಿಪಡಿಸಿಕೊಂಡಿದ್ದಾರೆ. ಉಸಿರಾಟ ನಿಂತಿಲ್ಲ, ಕೊನೆ ಘಳಿಗೆಯಲ್ಲಿ ಏನಾದರೂ ಪವಾಡ ನಡೆದು ಬಿಡುತ್ತೆ ಎಂದು ದೇವರ ಮೇಲೆ ಭಾರ ಹಾಕಲಾಗಿದೆ.

  ಸಂಚಾರಿ ವಿಜಯ್ ಹೀರೋ ಎನ್ನುವುದಕ್ಕಿಂತ ಒಬ್ಬ ಅದ್ಭುತ ನಟ. ಏಕಂದ್ರೆ ವಿಜಯ್ ಆಯ್ಕೆ ಮಾಡಿಕೊಳ್ಳುತ್ತಿದ್ದ ಪಾತ್ರಗಳು, ಆತನನ್ನು ಹುಡುಕಿ ಬರುತ್ತಿದ್ದ ಪಾತ್ರಗಳು ವಿಶೇಷವಾಗಿರುತ್ತಿದ್ದವು. ಅಂದ್ಹಾಗೆ, ಸಂಚಾರಿ ವಿಜಯ್ ನಟಿಸಿ ಬಿಡುಗಡೆಗೆ ಸಜ್ಜಾಗಿರುವ ಮತ್ತು ಕೈಗೆತ್ತಿಕೊಂಡಿದ್ದ ಹೊಸ ಸಿನಿಮಾಗಳು ಯಾವುದು? ಮುಂದೆ ಓದಿ...

  ಆಕ್ಟ್ 1978 ಸಿನಿಮಾ ಕೊನೆ ಚಿತ್ರ

  ಆಕ್ಟ್ 1978 ಸಿನಿಮಾ ಕೊನೆ ಚಿತ್ರ

  ಮಂಸೋರೆ ನಿರ್ದೇಶನದಲ್ಲಿ ಬಿಡುಗಡೆಯಾಗಿದ್ದ ಆಕ್ಟ್ 1978 ಚಿತ್ರದಲ್ಲಿ ಸಂಚಾರಿ ವಿಜಯ್ ಸಹ ನಟಿಸಿದ್ದರು. ಈ ಚಿತ್ರ ಕೋವಿಡ್ ಎರಡನೇ ಅಲೆ ಲಾಕ್‌ಡೌನ್‌ಗೂ ಮುಂಚೆ ಚಿತ್ರಮಂದಿರದಲ್ಲಿಯೇ ತೆರೆಕಂಡಿತ್ತು. ವಿಜಯ್ ಅಭಿನಯಿಸಿ ತೆರೆಕಂಡಿರುವ ಕೊನೆಯ ಸಿನಿಮಾ ಇದೇ.

  ದೀಪಾವಳಿ ಹಬ್ಬಕ್ಕೆ ಹೊಸ ಸಿನಿಮಾ ಘೋಷಿಸಿದ ಸಂಚಾರಿ ವಿಜಯ್ದೀಪಾವಳಿ ಹಬ್ಬಕ್ಕೆ ಹೊಸ ಸಿನಿಮಾ ಘೋಷಿಸಿದ ಸಂಚಾರಿ ವಿಜಯ್

  ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದ 'ತಲೆದಂಡ'

  ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದ 'ತಲೆದಂಡ'

  ನಿರ್ದೇಶಕ ಕೃಪಾಕರ್ ತಯಾರು ಮಾಡಿರುವ ತಲೆದಂಡ ಚಿತ್ರದಲ್ಲಿ ಸಂಚಾರಿ ವಿಜಯ್ ಕಾಣಿಸಿಕೊಂಡಿದ್ದಾರೆ. ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಈ ವರ್ಷ ನಡೆಯಬೇಕಿದ್ದ ಬೆಂಗಳೂರು ಚಲನಚಿತ್ರೋತ್ಸವದಲ್ಲಿ ತಲೆದಂಡ ಚಿತ್ರವನ್ನು ಸ್ಪರ್ಧಾ ವಿಭಾಗಕ್ಕೆ ಆಯ್ಕೆ ಮಾಡಿಲ್ಲ ಎಂದು ಸಂಚಾರಿ ವಿಜಯ್, ನಿರ್ದೇಶಕ ಕೃಪಾಕರ್ ಇಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಚಿತ್ರವೂ ಅಧಿಕೃತವಾಗಿ ತೆರೆಕಂಡಿಲ್ಲ.

  ದೀಪಾವಳಿ ಘೋಷಿಸಿದ್ದ ಅವಸ್ಥಾಂತರ

  ದೀಪಾವಳಿ ಘೋಷಿಸಿದ್ದ ಅವಸ್ಥಾಂತರ

  ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಹೊಸ ಸಿನಿಮಾ ಘೋಷಿಸಿದ್ದರು. ಜಿ ದೀಪಕ್ ಕುಮಾರ್ ನಿರ್ದೇಶನದಲ್ಲಿ ಅವಸ್ಥಾಂತರ ಎಂಬ ಹೆಸರಿನಲ್ಲಿ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದರು. ರಂಜನಿ ರಾಘವನ್, ದಿಶಾ ಕೃಷ್ಣಯ್ಯ ನಾಯಕಿಯಾಗಿದ್ದರು. ಶೂಟಿಂಗ್ ಪ್ರಾರಂಭಿಸಿದ್ದರು.

  ಅಂತೂ 'ಇರುವೆ' ಪಾತ್ರಕ್ಕೆ ಡಬ್ಬಿಂಗ್ ಮಾಡಿ ಮುಗಿಸಿದ ಸಂಚಾರಿ ವಿಜಯ್ಅಂತೂ 'ಇರುವೆ' ಪಾತ್ರಕ್ಕೆ ಡಬ್ಬಿಂಗ್ ಮಾಡಿ ಮುಗಿಸಿದ ಸಂಚಾರಿ ವಿಜಯ್

  ಪುಕ್ಸಟ್ಟೆ ಲೈಫು

  ಪುಕ್ಸಟ್ಟೆ ಲೈಫು

  ಸಂಚಾರಿ ವಿಜಯ್ ಅಭಿನಯಿಸಿರುವ ಮತ್ತೊಂದು ಸಿನಿಮಾ 'ಪುಕ್ಸಟ್ಟೆ ಲೈಫ್'. ಈ ಚಿತ್ರದಲ್ಲಿ ವಿಜಯ್ ಬಹಳ ವಿಭಿನ್ನವಾಗಿ ಕಾಣಿಸಿಕೊಂಡಿದ್ದರು. ಅಚ್ಚುತ್ ಕುಮಾರ್, ರಂಗಾಯಣ ರಘು ಮಾತಂಗಿ ಎನ್ ಪ್ರಸನ್ ಸಹ ನಟಿಸಿದ್ದರು. ರಂಗಭೂಮಿ ಹಾಗೂ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ಅರವಿಂದ್ ಕುಪ್ಲಿಕರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಇನ್ನು ಬಿಡುಗಡೆಯಾಗಿಲ್ಲ.

  'ಮೇಲೊಬ್ಬ ಮಾಯಾವಿ' ಡಬ್ಬಿಂಗ್ ಮುಗಿದಿದೆ

  'ಮೇಲೊಬ್ಬ ಮಾಯಾವಿ' ಡಬ್ಬಿಂಗ್ ಮುಗಿದಿದೆ

  ಮೇಲೊಬ್ಬ ಮಾಯಾವಿ ಚಿತ್ರಕ್ಕೆ ಸಂಚಾರಿ ವಿಜಯ್ ಡಬ್ಬಿಂಗ್ ಮುಗಿಸಿದ್ದರು. ಪತ್ರಕರ್ತರಾದ ಬಿ.ನವೀನ್ ಕೃಷ್ಣ ಮೊದಲ ಬಾರಿಗೆ ನಿರ್ದೇಶಕರಾಗಿರುವ ಈ ಚಿತ್ರಕ್ಕೆ ಚಕ್ರವರ್ತಿ ಚಂದ್ರಚೂಡ್ ಅವರ ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯವಿದೆ.

  ಆಟಕ್ಕುಂಟು ಲೆಕ್ಕಕ್ಕಿಲ್ಲ

  ಆಟಕ್ಕುಂಟು ಲೆಕ್ಕಕ್ಕಿಲ್ಲ

  ರಾಮ್ ಜೆ ಚಂದ್ರ ನಿರ್ದೇಶನದಲ್ಲಿ ಮೂಡಿ ಬಂದಿರುವ ಹಾರರ್ ಥ್ರಿಲ್ಲರ್ 'ಆಟಕ್ಕುಂಟು ಲೆಕ್ಕಕ್ಕಿಲ್ಲ'. ಈ ಸಿನಿಮಾದಲ್ಲಿ ಸಂಚಾರಿ ವಿಜಯ್, ಮಯೂರಿ ಕ್ಯಾತರಿ, ಗೌತಮ್ ಮತ್ತು ದುನಿಯಾ ರಶ್ಮಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ನೋಬಿನ್ ಪಾಲ್ ಸಂಗೀತ ನೀಡಿದ್ದಾರೆ. ಚಿತ್ರ ಇನ್ನು ಬಿಡುಗಡೆಯಾಗಿಲ್ಲ.

  ಕೊರೊನಾದಿಂದ ಬಚಾವ್ ಆಗಲು 5 ಪವರ್ ಫುಲ್ ಸೂತ್ರಗಳನ್ನು ಹೇಳಿದ Puneeth | Filmibeat Kannada
  ಪಿರಂಗಿಪುರ

  ಪಿರಂಗಿಪುರ

  ನಿರ್ದೇಶಕ ಜನಾರ್ಧನ್ ಪಿ ಜಾನಿ ನಿರ್ದೇಶನದಲ್ಲಿ ತಯಾರಾಗುತ್ತಿದ್ದ ಪಿರಂಗಿಪುರ ಸಿನಿಮಾ ಸಂಚಾರಿ ವಿಜಯ್ ವೃತ್ತಿ ಜೀವನದಲ್ಲಿ ಬಹಳ ವಿಶೇಷವಾಗಿತ್ತು. ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲೆಯಾಳಂ ನಲ್ಲಿ ಚಿತ್ರ ತಯಾರಾಗಲಿದ್ದು 25ಕೋಟಿ ಬಜೆಟ್ ಎಂದು ಸುದ್ದಿಯಾಗಿತ್ತು. ಈ ಸಿನಿಮಾನೂ ಇನ್ನು ತೆರೆಗೆ ಬಂದಿಲ್ಲ. ಕಳೆದ ನಾಲ್ಕು ವರ್ಷದಿಂದ ಈ ಪ್ರಾಜೆಕ್ಟ್ ಚರ್ಚೆಯಲ್ಲಿದೆ.

  English summary
  Sanchari Vijay Filmography: Latest and Upcoming Films of Sanchari Vijay.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X