»   » 4 ವಿಭಿನ್ನ ಸಿನಿಮಾಗಳ ಜೊತೆ ಸಂಚಾರಿಯ 'ವರ್ತಮಾನ' ತೆರೆಗೆ

4 ವಿಭಿನ್ನ ಸಿನಿಮಾಗಳ ಜೊತೆ ಸಂಚಾರಿಯ 'ವರ್ತಮಾನ' ತೆರೆಗೆ

Posted By:
Subscribe to Filmibeat Kannada

ಈ ವಾರ ಯಾವ ಯಾವ ಸಿನಿಮಾಗಳು ಬಿಡುಗಡೆಯಾಗುತ್ತಿದೆ ಎಂಬ ಕುತೂಹಲ ಕನ್ನಡ ಸಿನಿ ಪ್ರೇಕ್ಷಕರನ್ನ ಕಾಡುತ್ತಿದೆ. ಪ್ರತಿವಾರದಂತೆ ಈ ವಾರವೂ ನಾಲ್ಕೈದು ಚಿತ್ರಗಳು ಥಿಯೇಟರ್ ಗೆ ಬರ್ತಿದೆ. ಲವ್, ಹಾರರ್, ಆಕ್ಷನ್-ಸಸ್ಪೆನ್ಸ್, ಹಾಗೂ ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಹೀಗೆ ವಿಭಿನ್ನ ಬಗೆಯ ಕಥೆ ಹೊಂದಿರುವ ಸಿನಿಮಾಗಳು ಪ್ರೇಕ್ಷಕರೆದುರು ಬರಲು ಸಜ್ಜಾಗಿವೆ.

ಇವುಗಳ ಜೊತೆಯಲ್ಲಿ ವಿಶೇಷವಾಗಿ ಗಮನ ಸೆಳೆದಿರುವುದು ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅಭಿನಯದ 'ವರ್ತಮಾನ'. ಚಿತ್ರದ ಮೊದಲ ಪೋಸ್ಟರ್ ನಿಂದಲೂ ಇಲ್ಲಿಯವರೆಗೂ ಪ್ರತಿಯೊಂದು ಅಂಶದಲ್ಲೂ ಮೋಡಿ ಮಾಡಿರುವ ವರ್ತಮಾನ ಇದೇ ವಾರ ಚಿತ್ರಮಂದಿರಕ್ಕೆ ಲಗ್ಗೆಯಿಡುತ್ತಿದೆ.

ಈ ಚಿತ್ರದ ವಿಶೇಷ ಎಂದರೆ ಸಿನಿಮಾ ಕೇವಲ ಒಂದೂವರೆ ಗಂಟೆ ಇದ್ದು, ಈ ಚಿತ್ರದಲ್ಲಿ ಯಾವುದೇ ಹಾಡುಗಳಿಲ್ಲ. ಆದ್ರೆ, ಚಿತ್ರದ ಹಿನ್ನೆಲೆ ಸಂಗೀತ ವಿಶೇಷವಾಗಿದ್ದು, ಸರವಣ ಸಂಗೀತ ನಿರ್ದೇಶನ ಮಾಡಿದ್ದಾರೆ. ಉಮೇಶ್ ಅಂಶಿ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

Sanchari vijay Starrer varthamana releasing on april 6th

ಈ ವಾರ ತೆರೆ ಕಾಣುತ್ತಿರುವ ಚಿತ್ರಗಳತ್ತ ಒಂದು ನೋಟ

ಸಂಚಾರಿ ವಿಜಯ್ ಗೆ ಸಂಜನಾ ಪ್ರಕಾಶ್ ನಾಯಕಿಯಾಗಿದ್ದು, ಮಾಡರ್ನ್ ಮತ್ತು ಟ್ರೆಡಿಷನಲ್ ಎರಡೂ ಗೆಟಪ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್‌ ಕೂಡ ಮೊದಲ ಬಾರಿಗೆ ಟೆಕ್ಕಿ ಪಾತ್ರ ಮಾಡಿದ್ದಾರೆ. ಇನ್ನುಳಿದಂತೆ ವಾಣಿಶ್ರೀ, ಸ್ವಪ್ನರಾಜ್, ದೀಪಕ್ ಮುಂತಾದವರು ಅಭಿನಯಿಸಿದ್ದಾರೆ.

ಈ ಚಿತ್ರದ ಜೊತೆ ಓಂ ಪ್ರಕಾಶ್ ರಾವ್ ನಿರ್ದೇಶನದ 'ಹುಚ್ಚ 2', ಶುಭಪೂಂಜಾ ಅಭಿನಯದ 'ಜಹಮಹಲ್', ಹೊಸಬರ 'ಮದುವೆ ದಿಬ್ಬಣ' ಹಾಗೂ 'ನಂಜುಂಡಿ ಕಲ್ಯಾಣ' ಚಿತ್ರಗಳು ಈ ವಾರ ಥಿಯೇಟರ್ ಗೆ ಪ್ರವೇಶ ಮಾಡುತ್ತಿದೆ.

English summary
National award winning kannada actor Sanchari vijay Starrer varthamana movie releasing on april 6th. the movie directed by umesh amshi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X