For Quick Alerts
  ALLOW NOTIFICATIONS  
  For Daily Alerts

  ಕಂಗನಾ ರಣೌತ್‌ ಭೇಟಿ: ಸಂಚಾರಿ ವಿಜಯ್ ಹಂಚಿಕೊಂಡ ಅನುಭವ

  |

  ಪ್ರಸ್ತುತ ಡ್ರಗ್ಸ್ ಬಿಟ್ಟರೆ ಅತಿಯಾಗಿ ಚರ್ಚೆಯಾಗುತ್ತಿರುವುದು ಕಂಗನಾ ರಣೌತ್‌ ಬಗ್ಗೆ. ಕಂಗನಾ ಆಡುತ್ತಿರುವ ಮಾತುಗಳು ಹಾಗೆಯೇ ಇವೆ.

  ಕಂಗನಾ ವಿಷಯದಲ್ಲಿ ಸ್ಪಷ್ಟವಾಗಿ ಎರಡು ಗುಂಪಾಗಿದೆ. ಒಂದು ಗುಂಪು ಕಂಗನಾ ಏನೇ ಹೇಳಿದರು, ಏನೇ ಮಾಡಿದರೂ ಎಲ್ಲದಕ್ಕೂ ಬೆಂಬಲಿಸುತ್ತಿದ್ದಾರೆ, ಮತ್ತೊಂದು ಗುಂಪು ಕಂಗನಾರ ಪ್ರತಿಯೊಂದು ವಿಷಯವನ್ನೂ ವಿರೋಧಿಸುತ್ತಿದ್ದಾರೆ.

  ಕನ್ನಡದ ಪ್ರತಿಭಾವಂತ ಯುವ ನಟ ಸಂಚಾರಿ ವಿಜಯ್ ಕಂಗನಾ ರಣೌತ್ ಬಗ್ಗೆ ಮಾತನಾಡಿದ್ದಾರೆ. ಅವರೊಂದಿಗೆ ಕಳೆದ ಕೆಲವು ಕ್ಷಣಗಳು, ಕಂಗನಾ ರು ಅಂದು ತೋರಿದ ವರ್ತನೆಯ ಬಗ್ಗೆ ವಿಜಯ್ ಫಿಲ್ಮಿಬೀಟ್ ಲೈವ್ ನಲ್ಲಿ ಮಾತನಾಡಿದರು.

  ಅದೇ ವರ್ಷ ಕಂಗನಾಗೂ ರಾಷ್ಟ್ರಪ್ರಶಸ್ತಿ

  ಅದೇ ವರ್ಷ ಕಂಗನಾಗೂ ರಾಷ್ಟ್ರಪ್ರಶಸ್ತಿ

  ಸಂಚಾರಿ ವಿಜಯ್ ಅವರಿಗೆ 'ನಾನು ಅವನಲ್ಲ, ಅವಳು' ಸಿನಿಮಾಕ್ಕೆ 2015 ರಲ್ಲಿ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಬಂತು. ಅದೇ ವರ್ಷ ಕಂಗನಾ ಅವರಿಗೂ ತಮ್ಮ 'ಕ್ವೀನ್' ಸಿನಿಮಾಕ್ಕಾಗಿ ಅತ್ಯುತ್ತಮ ನಟಿ ವಿಭಾಗದ ರಾಷ್ಟ್ರಪ್ರಶಸ್ತಿ ಬಂದಿತ್ತು.

  ಮೊದಲ ಸಾಲಿನಲ್ಲಿ ಕುಳಿತುಕೊಂಡ ಕಂಗನಾ

  ಮೊದಲ ಸಾಲಿನಲ್ಲಿ ಕುಳಿತುಕೊಂಡ ಕಂಗನಾ

  ಅಂದು ಕಾರ್ಯಕ್ರಮಕ್ಕೆ ಬಂದ ಕಂಗನಾ ಮೊದಲ ಸಾಲಿನಲ್ಲಿ ಕುಳಿತುಕೊಂಡರಂತೆ. ಕುಳಿತುಕೊಂಡವರೇ ಅತ್ತ-ಇತ್ತ ಏನನ್ನೋ ಹುಡುಕಲು ಪ್ರಾರಂಭಿಸಿದರಂತೆ. ಕೊನೆಗೆ ಅಲ್ಲಿದ್ದ ಅವರ ಪರಿಚಯದ ಪತ್ರಕರ್ತರೊಬ್ಬರನ್ನು ಕರೆದು, 'ಈ ಬಾರಿ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಯಾರಿಗೆ ಬಂದಿದೆ?' ಎಂದು ಕೇಳಿದರಂತೆ. ಆ ಪತ್ರಕರ್ತ ಹಿಂದಿನ ಸಾಲಿನಲ್ಲಿ ಕೂತಿದ್ದ ಸಂಚಾರಿ ವಿಜಯ್ ಅವರನ್ನು ತೋರಿಸಿದರಂತೆ.

  ವಿಜಯ್ ರನ್ನು ಬಳಿಗೆ ಕರೆದ ಕಂಗನಾ

  ವಿಜಯ್ ರನ್ನು ಬಳಿಗೆ ಕರೆದ ಕಂಗನಾ

  ಕೂಡಲೇ ಕಂಗನಾ ವಿಜಯ್ ಅವರನ್ನು ಬಳಿಗೆ ಕರೆದು ತಾವು ಕೂತಿದ್ದ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳಲು ಹೇಳಿದರಂತೆ. ಸಂಚಾರಿ ವಿಜಯ್ ಸಹ ಅಂತೆಯೇ ಮಾಡಿದಂತೆ. ವಿಜಯ್ ಅವರ ಸಿನಿಮಾದ ಬಗ್ಗೆ ಕೆಲ ಮಾತನಾಡಿ ಮಾಹಿತಿ ಪಡೆದರಂತೆ ಕಂಗನಾ.

  ಎಷ್ಟು ಬೇಕಾದರೂ ಚಿತ್ರ ತೆಗೆದುಕೊಳ್ಳಿ ಎಂದರಂತೆ ಕಂಗನಾ

  ಎಷ್ಟು ಬೇಕಾದರೂ ಚಿತ್ರ ತೆಗೆದುಕೊಳ್ಳಿ ಎಂದರಂತೆ ಕಂಗನಾ

  ಹಿಂದಿನ ಸಾಲಿನಲ್ಲಿ ಕೂತಿದ್ದ ವಿಜಯ್ ಹಾಗೂ ಕಂಗನಾ ಒಂದೇ ಫ್ರೇಮಿನಲ್ಲಿ ಚಿತ್ರ ತೆಗೆಯಲು ವಿಜಯ್ ಅಣ್ಣ ಪರದಾಡುತ್ತಿದ್ದರಂತೆ. ಆದರೆ ಕೊನೆಗೆ ಕಂಗನಾ ರೆ ಜೊತೆಯಾಗಿ ಕೂತು ಈಗ ಎಷ್ಟು ಬೇಕಾದರೂ ಚಿತ್ರ ತೆಗೆದುಕೊಳ್ಳಿ ಎಂದರಂತೆ.

  ಇದು ಕನ್ನಡದ ಹೆಣ್ಣು ಮಗಳ ಹೃದಯ | Pranitha | Filmibeat Kannada
  ಕಂಗನಾಳ ಗುಣದ ಪರಿಚಯ ಅಂದು ಆಯಿತು: ವಿಜಯ್

  ಕಂಗನಾಳ ಗುಣದ ಪರಿಚಯ ಅಂದು ಆಯಿತು: ವಿಜಯ್

  ಕಂಗನಾ ರಣೌತ್‌ ಅನ್ನು ನಾನು ಬಹುವಾಗಿ ಮೆಚ್ಚುತ್ತಿದ್ದೆ. ಆಕೆ ಕಲಾವಿದೆಯಾಗಿ ನನ್ನನ್ನು ಗುರುತಿಸಿದರು. ಕಲಾವಿದರು ಮತ್ತೊಬ್ಬ ಕಲಾವಿದನ ಪ್ರತಿಭೆಯನ್ನು ಗುರುತಿಸುವುದು ಬಹಳ ಪ್ರಮುಖವಾದುದು. ಅಂದು ಕಂಗನಾರ ಗುಣದ ಪರಿಚಯ ನನಗೆ ಆಯಿತು ಎಂದರು ಸಂಚಾರಿ ವಿಜಯ್.

  English summary
  Sanchari Vijay remember a incident when he met Kangana Ranaut in 2015. He said she acknowledge my talent.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X