For Quick Alerts
  ALLOW NOTIFICATIONS  
  For Daily Alerts

  ಸಂಚಾರಿ ವಿಜಯ್ ನಿಧನ; ಸಕಲ ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ

  |

  ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಕರ್ನಾಟಕ ಸಿದ್ಧತೆ ನಡೆಸಿದೆ. ಜೂನ್ 12ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ವಿಜಯ್ ತಲೆಗೆ ತೀವ್ರ ಪೆಟ್ಟಾಗಿತ್ತು.

  ಹುಟ್ಟೂರಿನ ಸ್ನೇಹಿತನ ತೋಟದಲ್ಲಿ ಸಂಚಾರಿ ವಿಜಯ್ ಅಂತ್ಯಸಂಸ್ಕಾರಕ್ಕೆ ಸಿದ್ಧತೆ | Filmibeat Kannada

  ಬ್ರೌನ್ ಡೆಡ್ ಆಗಿದ್ದ ಹಿನ್ನಲೆ ಕುಟುಂಬದವರ ನಿರ್ಧಾರದಂತೆ ವಿಜಯ್ ಅಂಗಾಗವನ್ನು ದಾನ ಮಾಡಲಾಗಿದೆ. ತಡರಾತ್ರಿ ವಿಜಯ್ ನಿಧನದ ಸುದ್ದಿಯನ್ನು ಅಪೊಲೊ ಆಸ್ಪತ್ರೆ ವೈದ್ಯರು ಅಧಿಕೃತವಾಗಿ ಘೋಷಿಸಿದರು. ಬಳಿಕ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರಕ್ಕೆ ರವಾನೆ ಮಾಡಲಾಗಿತ್ತು. ಬೆಳಗ್ಗೆ 8 ಗಂಟೆಯಿಂದ 10.30 ರವರೆಗೂ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇಡಲಾಗಿತ್ತು.

  ಸದ್ಯ ವಿಜಯ್ ಪಾರ್ಥಿವ ಶರೀರ ಆಂಬ್ಯುಲೆನ್ಸ್ ಮೂಲಕ ಹುಟ್ಟೂರು ಪಂಚನಹಳ್ಳಿಗೆ ರವಾನೆ ಮಾಡಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಜಯ್ ಗೆಳೆಯ ರಘು ಅವರ ತೋಟದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲು ಲಕಸ ಸಿದ್ಧತೆ ನಡೆದಿದೆ.

  ಕೋವಿಡ್ ನಿಯಮದ ಅನುಸಾರವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಕನಿಷ್ಠ ಪೊಲೀಸ್ ಸಿಬ್ಬಂದಿಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ.

  English summary
  Sanchari Vijay to be cremated with full state honours; Karnataka Govt issues an order.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X