Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಂಚಾರಿ ವಿಜಯ್‌ರನ್ನು ಆಸ್ಪತ್ರೆಗೆ ಸೇರಿಸಿದ ಸ್ನೇಹಿತ ಬಿಚ್ಚಿಟ್ಟ ಅಪಘಾತದ ಅಸಲಿ ಕಥೆ
''ರಾತ್ರಿ ಸುಮಾರು 11.30ರ ಆಸುಪಾಸು ಆಗಿರಬಹುದು. ಮೆಡಿಕಲ್‌ಗೆ ಹೋಗಿ ಬರುತ್ತೇವೆ ಎಂದು ನವೀನ್ ಮತ್ತು ವಿಜಯ್ ಹೋದರು. ಅವರು ಹೋದ 5 ನಿಮಿಷಕ್ಕೆ ಸ್ನೇಹಿತನೊಬ್ಬ ಬಂದು ಆಕ್ಸಿಡೆಂಟ್ ಆಗಿದೆ ಎಂದ. ಓಡಿ ಹೋಗಿ ನೋಡಿದ್ರೆ ವಿಜಯ್ ಸಂಪೂರ್ಣವಾಗಿ ಪ್ರಜ್ಞೆ ತಪ್ಪಿದ್ದರು. ನವೀನ್ ಒದ್ದಾಡುತ್ತಿದ್ದರು. ಮನೆಯಿಂದ ಕೇವಲ 50 ಮೀಟರ್ ದೂರದಲ್ಲಿ ಅಪಘಾತ ಆಗಿತ್ತು'' ಎಂದು ವಿಜಯ್-ನವೀನ್‌ರನ್ನು ಆಸ್ಪತ್ರೆಗೆ ಸೇರಿಸಿದ ಸ್ನೇಹಿತ ಬ್ರಿಜೇಶ್ ವಿವರಿಸಿದರು.
ಜೂನ್ 12ರ ರಾತ್ರಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ವಿಜಯ್ ಮೃತಪಟ್ಟರು. ಹೆಲ್ಮೆಟ್ ಹಾಕಿರಲಿಲ್ಲ, ಹಾಗಾಗಿ ಮೆದುಳಿನ ಬಲ ಭಾಗಕ್ಕೆ ತೀವ್ರ ಪೆಟ್ಟು ಬಿದ್ದು ಕೊನೆಯುಸಿರೆಳೆದರು. ಈ ಅಪಘಾತ ಹೇಗೆ ಸಂಭವಿಸಿತು? ವಿಜಯ್ ಹೆಲ್ಮೆಟ್ ಏಕೆ ಧರಿಸಿರಲಿಲ್ಲ? ಆ ಸಮಯದಲ್ಲಿ ವಿಜಯ್ ಎಲ್ಲಿಗೆ ಹೊರಟಿದ್ದರು? ವಿಜಯ್‌ರನ್ನು ಆಸ್ಪತ್ರೆಗೆ ದಾಖಲಿಸಿದ್ದು ಯಾರು ಎನ್ನುವ ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.
ವಿಜಯ್
ಪಟ್ಟ
ಕಷ್ಟವನ್ನು
ನಾನು
ಅನುಭವಿಸಿದ್ದೇನೆ,
ಈ
ದುಸ್ಥಿತಿ
ಆದಷ್ಟು
ಬೇಗ
ನಿಲ್ಲಲಿ;
ಅನಿರುದ್ಧ್
ಬೇಸರ
ಅಪಘಾತಕ್ಕೂ ಹತ್ತು ನಿಮಿಷಗಳ ಹಿಂದೆ ವಿಜಯ್ ಜೊತೆಯಲ್ಲಿದ್ದ ಹಾಗೂ ಅವರನ್ನು ಆಸ್ಪತ್ರೆಗೆ ಸೇರಿಸಿದ ಸ್ನೇಹಿತ ಬ್ರಿಜೇಶ್ ''ಮಿರರ್ ಕನ್ನಡ'' ಎನ್ನುವ ಯೂಟ್ಯೂಬ್ ಚಾನಲ್ ಜೊತೆ ಆಕ್ಸಿಡೆಂಟ್ ಕುರಿತು ವಿವರವಾಗಿ ಮಾತನಾಡಿದ್ದಾರೆ. ಮುಂದೆ ಓದಿ....

ನವೀನ್ ಮನೆಯಲ್ಲಿ ಇದ್ದ ವಿಜಯ್
''ಸ್ನೇಹಿತ ನವೀನ್ ಮನೆಯಲ್ಲಿ ಸಂಚಾರಿ ವಿಜಯ್, ಇನ್ನೊಬ್ಬ ಸ್ನೇಹಿತ ಹಾಗೂ ನಾನು ಮಾತಾಡ್ಕೊಂಡು ಇದ್ವಿ. ಅಷ್ಟೊತ್ತಿಗೆ ನವೀನ್ ಪತ್ನಿ ಊಟ ತಯಾರಿಸಿದರು. ಈ ವೇಳೆ ಮೆಡಿಕಲ್ ಹೋಗ್ಬೇಕಿತ್ತು ಅಂತ ನವೀನ್ ನೆನಪಿಸಿದರು. ನವೀನ್ ಬಳಿ ಸೂಪರ್ ಬೈಕ್ ಇತ್ತು. ಅದನ್ನು ನಾವೆಲ್ಲರೂ ನೋಡಿದ್ವಿ. ವಿಜಯ್ ನೋಡಿರಲಿಲ್ಲ. ನೋಡ್ಕೊಂಡು ಬರೋಣ ಬನ್ನಿ ಅಂದ್ರು. ನಾನು ಹೋಗಿಲ್ಲ, ನವೀನ್ ಮತ್ತು ವಿಜಯ್ ಬೇಸ್‌ಮೆಂಟ್‌ಗೆ ಹೋದರು'' ಎಂದು ಶನಿವಾರ ರಾತ್ರಿ ನಡೆದ ಘಟನೆ ವಿವರಿಸಿದರು.

ರೈಡ್ ಹೋಗುವ ಪ್ಲಾನ್ ಇರಲಿಲ್ಲ
''ಬೇಸ್‌ಮೆಂಟ್‌ನಲ್ಲಿ ಬೈಕ್ ನೋಡುತ್ತಿರುವಾಗ ನವೀನ್ ಮೆಡಿಕಲ್‌ಗೆ ಹೋಗಿಬರುತ್ತೇನೆ, ನೀವು ಮನೆಗೆ ಹೋಗಿರಿ ಅಂತ ಹೇಳಿದ್ದಾರೆ. ಆದರೆ ನಾನು ಬರ್ತೀನಿ ಅಂತ ವಿಜಯ್ ಸಹ ಹೋದರು. ಬೈಕ್ ರೈಡ್ ಹೋಗುವ ಯಾವುದೇ ಪ್ಲಾನ್ ಇರಲಿಲ್ಲ. ಚಪ್ಪಲಿ ಸಹ ಹಾಕಿರಲಿಲ್ಲ, ಹೆಲ್ಮೆಟ್ ಅದಕ್ಕೆ ಹಾಕಿಲ್ಲ. ಇಬ್ಬರು ಅಲ್ಲಿಂದ ಹೋಗಿ ಐದು ನಿಮಿಷಕ್ಕೆ ಆಕ್ಸಿಡೆಂಟ್ ಆಗಿದೆ'' ಎಂದು ಬ್ರಿಜೇಶ್ ವಿವರಿಸಿದರು.
'ನನ್ನ
ಸಿನಿಮಾನೇ
ಅವನ
ಕೊನೆ
ಸಿನಿಮಾ
ಆಗಿಬಿಟ್ಟಿತು
ಎಂಬ
ವ್ಯಥೆ
ಕಾಡುತ್ತಿದೆ'

ಪ್ರಜ್ಞೆ ತಪ್ಪಿದ್ದ ವಿಜಯ್
''ಮತ್ತೊಬ್ಬ ಸ್ನೇಹಿತ ಬಂದು ಆಕ್ಸಿಡೆಂಟ್ ಆಗಿದೆ ಅಂತ ಹೇಳಿದ. ನಾನು ಆರಂಭದಲ್ಲಿ ನಂಬಿಲ್ಲ, ಅವರ ಜೊತೆ ಹೋಗಿಲ್ಲ ಅಂದಿದ್ದಕ್ಕೆ ಸುಳ್ಳು ಹೇಳ್ತಿದ್ದಾರೆ ಅಂದುಕೊಂಡೆ. ಆಮೇಲೆ ಹೋಗಿ ನೋಡಿದ್ರೆ ಇಬ್ಬರು ಬಿದ್ದು ಒದ್ದಾಡುತ್ತಿದ್ದರು. ವಿಜಯ್ ತಲೆಗೆ ಪೆಟ್ಟು ಬಿದ್ದು ರಕ್ತ ಸ್ರಾವ ಆಗ್ತಿತ್ತು. ಪ್ರಜ್ಞೆ ಇರಲಿಲ್ಲ. ನವೀನ್ ಸಹ ಒದ್ದಾಡುತ್ತಿದ್ದರು. ಕೂಡಲೇ ಕಾರು ತಗೊಂಡು ಬಂದು ವಿಜಯ್‌ರನ್ನು ಹಿಂಬದಿ ಮಲಗಿಸಿ, ನವೀನ್‌ನ ಮುಂದೆ ಕೂರಿಸಿ ಅಪೋಲೊಗೆ ಹೋದೆ'' ಎಂದು ಘಟನೆ ಹೇಳಿದರು.

ಆಸ್ಪತ್ರೆಯಲ್ಲಿ ಬೆಡ್ ಇಲ್ಲ ಅಂದ್ರು
''ಅಪೋಲೊದಲ್ಲಿ ಕಂಡಿಷನ್ ನೋಡಿ ಗಂಭೀರವಾಗಿದೆ, ಬೆಡ್ ವ್ಯವಸ್ಥೆ ಇಲ್ಲ, ಆಪರೇಷನ್ ಥಿಯೇಟರ್ ಸಹ ಬ್ಯುಸಿ ಇದೆ ಅಂದ್ರು. ಬೇರೆ ಆಸ್ಪತ್ರೆಗೆ ಹೋಗೋಣ ಅಂತ ಯೋಚಿಸುತ್ತಿರುವಾಗ ಸ್ನೇಹಿತರ ಮೂಲಕ ಸುದೀಪ್ ಸಂಪರ್ಕಿಸಿದರು. ಅದಾದ ಬಳಿಕ ಡಾ ಅರುಣ್ ನಾಯಕ್ ಬಂದು ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು'' ಎಂದು ತಿಳಿಸಿದರು.

3 ಗಂಟೆಗೆ ಆಪರೇಷನ್ ಮುಗಿತು
''ರಾತ್ರಿ 11.50ರೊಳಗೆ ಆಸ್ಪತ್ರೆ ತಲುಪಿದ್ವಿ. ಡಾ ಅರುಣ್ ನಾಯಕ್ ಕೇರ್ ಮಾಡಿ ಆಪರೇಷನ್ ಮಾಡ್ಬೇಕು ಅಂತ ಅಂದ್ರು. ಅಷ್ಟೊತ್ತಿಗೆ ವಿಜಯ್ ಅಣ್ಣನಿಗೆ ವಿಷಯ ತಿಳಿಸಿ ಆಸ್ಪತ್ರೆಗೆ ಕರೆದುಕೊಂಡು ಬಂದ್ವಿ. ಸುಮಾರು 3 ಗಂಟೆಗೆ ಆಪರೇಷನ್ ಮುಗಿತು. 'ಒಂದು ಹಂತದ ಸರ್ಜರಿ ಮುಗಿದಿದೆ, ಪರಿಸ್ಥಿತಿ ಗಂಭೀರವಾಗಿದೆ, ಪ್ರಜ್ಞೆ ಬಂದಿಲ್ಲ. ಏಳು ದಿನ ಕಾದು ನೋಡೋಣ. ನಾಳೆ ಸಂಜೆಯೊಳಗೆ ಸ್ವಲ್ಪನಾದರೂ ಪ್ರತಿಕ್ರಿಯಿಸಬೇಕು'' ಅಂತ ವೈದ್ಯರು ಹೇಳಿದ್ರು.
Recommended Video

ಮ್ಯಾನ್‌ಹೋಲ್ ತಪ್ಪಿಸಲು ಹೋಗಿ ದುರಂತ
''ನವೀನ್ ಬಳಿ ಆಕ್ಸಿಡೆಂಟ್ ಬಗ್ಗೆ ಕೇಳಿದೆ. ಮನೆಯಿಂದ ಮೆಡಿಕಲ್‌ಗೆ ಹೋಗಿ ವಾಪಸ್ ಬರಬೇಕಾದರೆ ಆಕ್ಸಿಡೆಂಟ್ ಆಗಿದೆ. ಪರ್ಸ್ ಮರೆತಿದ್ವಿ ಅಂತ ವಾಪಸ್ ಬಂದ್ವಿ, ರಸ್ತೆಯಲ್ಲಿ ಮ್ಯಾನ್‌ಹೋಲ್ ಇದೆ, ಅದನ್ನು ತಪ್ಪಿಸಲು ಹೋದಾಗ ಬೈಕ್ ಸ್ಕಿಡ್ ಆಯ್ತು ಅಂತ ಹೇಳಿದ್ರು. ಮನೆಯಿಂದ ಕೇವಲ 50 ಮೀ ಅಂತರದಲ್ಲಿ ಈ ಅಪಘಾತ ಆಗಿದೆ. ಅತಿಯಾದ ವೇಗವೂ ಇರಲಿಲ್ಲ'' ಎಂದು ಬ್ರಿಜೇಶ್ ಹೇಳಿದ್ದಾರೆ.