»   » ಒಂದ್ಕಾಲದಲ್ಲಿ ಕೇಳೋರಿಲ್ಲದ ಈಕೆಗೆ, ಇಂದು ರತ್ನಗಂಬಳಿ..!

ಒಂದ್ಕಾಲದಲ್ಲಿ ಕೇಳೋರಿಲ್ಲದ ಈಕೆಗೆ, ಇಂದು ರತ್ನಗಂಬಳಿ..!

Posted By:
Subscribe to Filmibeat Kannada
sanchitha shetty

ಈ ಫೋಟೋದಲ್ಲಿರುವ ಬೆಡಗಿಯನ್ನೊಮ್ಮೆ ನೋಡಿ....ಕಾಲಿವುಡ್ ಚಿತ್ರಗಳನ್ನ ಬಿಟ್ಟೂಬಿಡದೆ ನೋಡುವವರಿಗೆ ಈ ಮುಖ ಪರಿಚಯ. ಯಾಕಂದ್ರೆ, ತಮಿಳು ಸಿನಿ ಅಂಗಳದಲ್ಲಿ 'ಪಿಝಾ-2' ಮತ್ತು 'ಸೂದು ಕಾವ್ವುಮ್' ನಂತಹ ಹಿಟ್ ಚಿತ್ರಗಳ ನಾಯಕಿ ಈ ಹುಡುಗಿ.

ಈಕೆಯ ಹೆಸರು ಸಂಚಿತಾ ಶೆಟ್ಟಿ. ಮೂಲತಃ ಕನ್ನಡತಿ. ಹೀರೋಯಿನ್ ಆಗಬೇಕು ಅಂತ ಕನಸನ್ನ ಹೊತ್ತು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಈಕೆಗೆ ಸಿಕ್ಕಿದ್ದು ಮಾತ್ರ ಸಣ್ಣ ಪುಟ್ಟ ರೋಲ್ ಗಳು.

ಬೇಕಾದ್ರೆ, ಒಮ್ಮೆ 'ಮುಂಗಾರು ಮಳೆ' ಚಿತ್ರವನ್ನ ನೆನಪಿಸಿಕೊಳ್ಳಿ. ಪೂಜಾ ಗಾಂಧಿ ಸ್ನೇಹಿತೆಯಾಗಿ ಪಕ್ಕದಲ್ಲಿ ನಿಂತುಕೊಳ್ಳುತ್ತಿದ್ದ ಸಂಚಿತಾಗೆ ಚಿತ್ರದಲ್ಲಿ ಒಂದು ಡೈಲಾಗ್ಸ್ ಕೂಡ ಸಿಕ್ಕಿರಲಿಲ್ಲ.

sanchitha shetty

ಹಾಗೆ, 'ಮಿಲನ' ಚಿತ್ರದಲ್ಲೂ ಒಂದು ಸೀನ್ ನಲ್ಲಿ ಬಂದು ಹೋಗುವ ಈಕೆಗೆ ಭಾಗ್ಯದ ಬಾಗಿಲು ತೆರೆದದ್ದು ತಮಿಳು ಚಿತ್ರರಂಗ. 'ಕೊಲ್ಲೈಕರನ್' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಸಂಚಿತಾ, ಹಾರರ್ ಸಿನಿಮಾ 'ಪಿಝಾ-2' ಹಿಟ್ ಆಗ್ತಿದ್ದಂತೆ ಕಾಲಿವುಡ್ ನಲ್ಲೇ ಸೆಟಲ್ ಆದರು.

ಇದೀಗ ಮರಳಿ ಸಂಚಿತಾ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅದೇ ಹಳೆಯ ಸೈಡ್ ರೋಲ್ ನಲ್ಲಲ್ಲ. ಬದಲಾಗಿ ಮುಖ್ಯ ಪಾತ್ರಧಾರಿ ಹೀರೋಯಿನ್ ಆಗಿ. ಹೌದು, ಯುವ ನಟ ಧನಂಜಯ್ ನಟಿಸುತ್ತಿರುವ 'ಬದ್ಮಾಶ್' ಚಿತ್ರದಲ್ಲಿ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ ಸಂಚಿತಾ ಶೆಟ್ಟಿ.

sanchitha shetty

ಲವ್ ಸ್ಟೋರಿ ಜೊತೆಗೆ ಪಾಲಿಟಿಕ್ಸ್, ಕ್ರಿಕೆಟ್, ಸಿನಿಮಾ ಮತ್ತು ಪ್ರಚಲಿತ ವಿದ್ಯಾಮಾನಗಳನ್ನ ಹೊಂದಿರುವ ಸಿನಿಮಾ 'ಬದ್ಮಾಶ್'ಗೆ ಯುವ ಪ್ರತಿಭೆ ಆಕಾಶ್ ಶ್ರೀವತ್ಸ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಅರಸಿ ಬಂದಾಗ ಅವಕಾಶ ನೀಡದವರು, ಇದೀಗ ರೆಡ್ ಕಾರ್ಪೆಟ್ ಹಾಸಿ ಬುಲಾವ್ ನೀಡುತ್ತಿರುವುದಕ್ಕೆ ಸಂಚಿತಾ ಖುಷಿಯಾಗಿದ್ದಾರೆ. ಟೈಮ್ ಚೆನ್ನಾಗಿದ್ದರೆ ಹೀಗೆ..! (ಏಜೆನ್ಸೀಸ್)

English summary
Sanchita Shetty of Pizza2 fame makes her comeback into Sandalwood with the movie called 'Badmash'. Dhananjay is roped into play lead role for 'Badmash' directed by Akash Srivatsa.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada