»   » ಕ್ರೇಜಿಸ್ಟಾರ್ ಕೈಹಿಡಿದರೆ ಎಲ್ಲವೂ ಕೈಗೂಡತ್ತಂತೆ

ಕ್ರೇಜಿಸ್ಟಾರ್ ಕೈಹಿಡಿದರೆ ಎಲ್ಲವೂ ಕೈಗೂಡತ್ತಂತೆ

By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ವೆರಿ ವೆರಿ ಲಕ್ಕಿ ಯಾರು ಅಂದ್ರೆ ಅದು ಕ್ರೇಜಿಸ್ಟಾರ್ ರವಿಚಂದ್ರನ್. ರವಿಮಾಮ ಸಿನಿಮಾಗೆ ಕ್ಲ್ಯಾಪ್ ಮಾಡಿದ್ರೆ ಸಿನಿಮಾಗೆ ಒಳ್ಳೆಯ ಓಪನಿಂಗ್ ಸಿಕ್ಕಿದಂಗೆ ಅನ್ನೋದು ಗಾಂಧಿನಗರದ ಮಾತು. ಈಗ ಕ್ರೇಜಿಸ್ಟಾರ್ ಸಿನಿಮಾ ಮೂಲಕ ಮಿಂಚ್ತಾ ಇರೋ ಈ ಕನಸುಗಾರ ಕೈ ಹಿಡಿದ್ರೆ ಎಲ್ಲವೂ ಕೈಗೂಡುತ್ತಂತೆ.

ಹೀಗಂಥ ಯಾರ್ ಹೇಳಿದ್ದು ಅಂತ ನಮ್ಮನ್ನ ಕೇಳ್ಬೇಡಿ. ಇತ್ತೀಚೆಗೆ ಸ್ಟಾರ್ ಸಿನಿಮಾಗಳ ಮುಹೂರ್ತ ಇದ್ರೆ ಅಲ್ಲಿ ರವಿಚಂದ್ರನ್ ಹಾಜರ್. ಸಿನಿಮಾಗೆ ಕ್ಲಾಪ್ ಮಾಡೋದೂ ಕೂಡ ರವಿಚಂದ್ರನ್. ಯಾಕಂದ್ರೆ ರವಿಚಂದ್ರನ್ ಒಂಥರಾ ಅಜಾತಶತ್ರು. ಸಿನಿಮಾ ಮಾಡೋ ಎಲ್ಲರಿಗೂ ಅವ್ರು ಗುರು. ಯಾಕಂದ್ರೆ ಒಳ್ಳೆಯ ನಟನಿಗಿಂತ ಮೊದ್ಲು ಅವ್ರೊಬ್ಬ ಒಳ್ಳೆಯ ನಿರ್ದೇಶಕ, ನಿರ್ಮಾಪಕ.

ಪ್ರತೀ ಸಿನಿಮಾದ ಮುಹೂರ್ತಕ್ಕೆ ಯಾವ ಸ್ಟಾರ್ ಗೆ ಇನ್ವಿಟೇಷನ್ ಹೋಗುತ್ತೋ ಇಲ್ವೋ ಗೊತ್ತಿಲ್ಲ. ಆದರೆ ರವಿಚಂದ್ರನ್ ಮನೆಯ ಮುಂದೆ ಮುಹೂರ್ತಕ್ಕೆ ಬನ್ನಿ ನೀವೇ ಕ್ಲಾಪ್ ಮಾಡ್ಬೇಕು ಅಂತ ಒಂದಷ್ಟು ಚಿತ್ರತಂಡದವ್ರು ಕಾದಿರ್ತಾರೆ. ರವಿಮಾಮ ಯಾವ್ಯಾವ ಸ್ಟಾರ್ ಗಳಿಗೆಲ್ಲ ಲಕ್ಕಿ. ಒಂದ್ ರೌಂಡಪ್ ಹಾಕ್ಕೊಂಡ್ ಬರೋಣ ಬನ್ನಿ.

ಅಭಿನೇತ್ರಿಗೆ ರವಿಮಾಮ ಲಕ್ಕಿ

ಸ್ಯಾಂಡಲ್ ವುಡ್ ನ ಮಳೆಹುಡುಗಿ ಪೂಜಾಗಾಂಧಿಗೆ ಕ್ರೇಜಿಸ್ಟಾರ್ ಲಕ್ಕಿ. ಕ್ರೇಜಿಸ್ಟಾರ್ ಕ್ಲಾಪ್ ಮಾಡಿದ ಸಿನಿಮಾಗಳು ಗೆಲ್ತವೆ ಅಂತ ಗೊತ್ತಾಗಿ ಪೂಜಾಗಾಂಧಿ ತಮ್ಮದೇ ಪ್ರೊಡಕ್ಷನ್ ಚಿತ್ರ ಅಭಿನೇತ್ರಿ ಸಿನಿಮಾಗೆ ರವಿಮಾಮನಿಂದ ಕ್ಲಾಪ್ ಮಾಡಿಸಿದ್ರು. ಅಭಿನೇತ್ರಿ ಮುಹೂರ್ತದ ದಿನ ಕ್ರೇಜಿಸ್ಟಾರ್ ಗೆ ಬೇರೆ ಎಲ್ಲಿಗೋ ಹೋಗೋದಿತ್ತು. ಆದ್ರೆ ಪೂಜಾಗಾಂಧಿ ಮಧ್ಯಾಹ್ನದಿಂದ ಸಂಜೆಯವರೆಗೂ ರವಿಮಾಮನಿಗೆ ರಿಕ್ವೆಸ್ಟ್ ಮಾಡಿ ಕರೆದುಕೊಂಡು ಬಂದಿದ್ರು.

ಕಿಚ್ಚನಿಗೆ ಕ್ರೇಜಿಸ್ಟಾರ್ ಅಂದ್ರೆ ಬೂಸ್ಟ್

ಕಿಚ್ಚ ಸುದೀಪ್ ಗೆ ಕೂಡ ಕನಸುಗಾರನ ಕೈಯ್ಯಿಂದ ಕ್ಲ್ಯಾಪ್ ಮಾಡಿಸೋ ಕನಸು. ರವಿಮಾಮ ಕ್ಲ್ಯಾಪ್ ಮಾಡಿರೋ ಕಿಚ್ಚನ ಸಿನಿಮಾಗಳು ಭರ್ಜರಿ ಯಶಸ್ವಿಯಾಗಿರೋದೇ ಇದಕ್ಕೆ ಕಾರಣ.

ದರ್ಶನ್ ಗೂ ಆಗಬೇಕು ಹಠವಾದಿಯ ದರ್ಶನ

ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಂತಹ ಚಾಲೆಂಜಿಂಗ್ ಸ್ಟಾರ್ ಗೂ ಕ್ರೇಜಿ ರವಿಮಾಮ ಬೇಕೇ ಬೇಕು. ಇತ್ತೀಚೆಗೆ ಮುಹೂರ್ತ ಮಾಡಿಕೊಂಡ ಐರಾವತ ಸೇರಿ ಹಲವು ಹಂಡ್ರೆಡ್ ಡೇಸ್ ಸಿನಿಮಾಗಳಿಗೆ ರವಿಚಂದ್ರನ್ ಕ್ಲ್ಯಾಪ್ ಕೈಚಳಕವಿದೆ.

ಪುನೀತ್ ಗೂ ಏಕಾಂಗಿಯ ಪವರ್ ಬೇಕು

ಪವರ್ ಸ್ಟಾರ್ ಪುನೀತ್ ಕೂಡ ಸಿನಿಮಾದ ಮುಹೂರ್ತ ಅಂದ್ರೆ ಕೈ ಹಿಡಿದು ರವಿಮಾಮನನ್ನ ಕರೆದುಕೊಂಡು ಬರ್ತಾರೆ. ತನ್ನ ಸಿನಿಮಾಗೂ ಸ್ಪೆಷಲ್ ಪವರ್ ಬರೋದು ಕ್ರೇಜಿಸ್ಟಾರ್ ಕ್ಲ್ಯಾಪ್ ಮಾಡಿದ್ರೆ ಅಂತ ಪುನೀತ್ ನಂಬಿದ್ದಾರೆ ಅನ್ಸುತ್ತೆ.

ಕಿಂಗ್ ಗೂ ಬೇಕು ಕನಸುಗಾರನ ಕನಸು

ಸ್ಯಾಂಡಲ್ವುಡ್ ಕಿಂಗ್ ಶಿವಣ್ಣನ ಬೆಸ್ಟ್ ಫ್ರೆಂಡ್ಗಳಲ್ಲಿ ರವಿಮಾಮ ಕೂಡ ಒಬ್ಬರು. ಎಲ್ಲರೂ ರವಿ ಸರ್ ಅಂದ್ರೆ ಶಿವಣ್ಣ ಮಾತ್ರ ರವಿ ಅಂತಾರೆ. ಆದ್ರೆ ಅದೇ ರವಿಮಾಮ ಶಿವಣ್ಣನ ಸಿನಿಮಾಗೂ ಕ್ಲ್ಯಾಪ್ ಮಾಡಿದ್ರೆ ಶಿವಣ್ಣನ ಮುಖದಲ್ಲೂ ಸಂತಸ ಅರಳುತ್ತೆ.

ನವರಸನಾಯಕನಿಗೂ ಕ್ರೇಜಿ ಕಮಾಲ್

ಎಲ್ಲ ದೊಡ್ಡ ಸ್ಟಾರ್ ಗಳ ಹಾಗೆ ನವರಸನಾಯಕ ಜಗ್ಗೇಶ್ ಗೂ ಕೂಡ ರವಿಮಾಮ ಕ್ಲ್ಯಾಪ್ ಮಾಡಿದ್ರೆ ಸಿನಿಮಾ ಗೆಲ್ಲುತ್ತೆ ಅನ್ನೋ ನಂಬಿಕೆ ಜಾಸ್ತಿ. ಜಗ್ಗೇಶ್ ರ ಸಿನಿಲೈಫ್ ಗೆ ಓಪನಿಂಗ್ ಕೊಟ್ಟ ರವಿಮಾಮ ಲಕ್ಕಿ ಅಲ್ಲದೆ ಮತ್ತಿನ್ನೇನು. ಹೀಗೆ ಸ್ಯಾಂಡಲ್ ವುಡ್ ನ ಅದೆಷ್ಟೋ ಸ್ಟಾರ್ ಗಳಿಗೆ ರವಿಮಾಮ ಕ್ಲ್ಯಾಪ್ ಸ್ಟಾರ್. ಅದೇನೋ ಯಾರಿಗ್ಗೊತ್ತು ಕೆಲವ್ರ ಕೈಗುಣ ಹಂಗಿರುತ್ತೆ ಅಂತಾರೆ.

English summary
Sandalwood belives that Crazy Star Ravichandran is most lucky star in Kannada. If Ravichandran gives first clap to the movie it gets grand opening at Box Office, this is what Sandalwood believe.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada