»   » ನಮ್ಮ ನಟ ನಟಿಯರ ರಿಯಲ್ ನೇಮ್ &ರೀಲ್ ನೇಮ್

ನಮ್ಮ ನಟ ನಟಿಯರ ರಿಯಲ್ ನೇಮ್ &ರೀಲ್ ನೇಮ್

Posted By:
Subscribe to Filmibeat Kannada

ತೆರೆಯೆ ಮೇಲೆ ಟೈಟಲ್ ಕಾರ್ಡಿನಲ್ಲಿ ತಮ್ಮ ಹೆಸರು ಕಾಣಿಸಿಕೊಂಡಾಗ ಆಕರ್ಷಣೀಯವಾಗಿರ ಬೇಕೆಂದು ಚಿತ್ರ ನಟ/ನಟಿಯರು ಬಯಸುವುದು ಅಂದಿನ ಕಾಲದಿಂದಲೂ ನಡೆದುಕೊಂಡು ಬರುತ್ತಿತ್ತು ಈಗಲೂ ನಡೆದುಕೊಂಡು ಬರುತ್ತಿದೆ.

ಹಿಂದಿ ಚಿತ್ರರಂಗದ ಮೇರು ನಟ ಮೊಹಮದ್ ಯೂಸಫ್ ಖಾನ್, ದಿಲೀಪ್ ಕುಮಾರ್ ಆಗಿ ಬದಲಾಗಿದ್ದು, ಮಮ್ತಾಜ್ ಬೇಗಂ ಜೇಹಾನ್, ಮಧುಬಾಲಾ ಆಗಿ ಬದಲಾಗಿದ್ದು, ರವಿ ಕಪೂರ್, ಜಿತೇಂದ್ರ ಆಗಿ ಬದಲಾಗಿದ್ದು, ಬದ್ರುದ್ದೀನ್ ಜಮಾಲುದ್ದೀನ್ ಕಾಜಿ, ಜಾನಿ ವಾಕರ್ ಆಗಿ ಬದಲಾಗಿದ್ದು.

ಇನ್ನೂ ಉದಾಹರಣೆ ಕೊಡಬಹುದಾದರೆ ಹರಿ ಭಾಯ್ ಜಾರಿವಾಲಾ, ಸಂಜೀವ್ ಕುಮಾರ್ ಆಗಿ, ಪ್ರೀತಂ ಜಿಂತಾ ಸಿಂಗ್, ಪ್ರೀತಿ ಜಿಂತಾ ಆಗಿ, ಕರೆನ್ ಜಿತ್ ಕೌರ್ ವೊಹ್ರಾ, ಸನ್ನಿ ಲಿಯೋನ್ ಆಗಿ, ಅಷ್ಟೇ ಆಕೆ ನಮ್ಮ ಶಿವಾಜಿ ರಾವ್ ಗಾಯಕ್ವಾಡ್, ರಜನೀಕಾಂತ್ ಆಗಿ ಹೀಗೆ ಸೆಲೆಬ್ರಿಟಿಗಳ ನಾಮಪಲ್ಲಟ ಆದ ತುಂಬಾ ಉದಾಹರಣೆಗಳಿವೆ.

ಇನ್ನು ನಮ್ಮ ಸ್ಯಾಂಡಲ್ ವುಡ್ ನಲ್ಲಿ ಹೆಸರು ಬದಲಾಯಿಸಿಕೊಂಡ ನಟ ನಟಿಯರ ಪಟ್ಟಿಯೇನೂ ಚಿಕ್ಕದಿಲ್ಲ. ಅದರಲ್ಲಿ ಕೆಲವರನ್ನು ಆರಿಸಿ ಈ ಲೇಖನದಲ್ಲಿ ಬರೆಯಲಾಗಿದೆ. ಸ್ಲೈಡಿನಲ್ಲಿ ನೋಡಿ..

ಉದಯ್‌ ಕುಮಾರ್

ಮೂಲ ಹೆಸರು : ಸೂರ್ಯ ನಾರಾಯಣ್ ಶಾಸ್ತ್ರಿ
ಜನಿಸಿದ ಸ್ಥಳ : ಸೇಲಂ
ತಂದೆ ತಾಯಿ ಹೆಸರು : ಶಾನುಭೋಗ್ ಶ್ರೀನಿವಾಸಯ್ಯ, ಶಾರದಮ್ಮ
ಪ್ರಮುಖ ಚಿತ್ರಗಳು : ಭೂದಾನ, ರಣಧೀರ ಕಂಠೀರವ, ಭಕ್ತ ಕನಕದಾಸ

ಕಲ್ಯಾಣ್‌ ಕುಮಾರ್

ಮೂಲ ಹೆಸರು : ಚೊಕ್ಕಣ್ಣ, ಸಂಪತ್ ಕುಮಾರ್
ಜನಿಸಿದ ಸ್ಥಳ : ಬೆಂಗಳೂರು
ಪ್ರಮುಖ ಚಿತ್ರಗಳು : ಅಮರಶಿಲ್ಪಿ ಜಕಣಾಚಾರಿ, ಮಾವನ ಮಗಳು,ಬದುಕುವ ದಾರಿ

ಕಲ್ಪನಾ

ಮೂಲ ಹೆಸರು : ಶರತ್ ಲತಾ
ಜನಿಸಿದ ಸ್ಥಳ : ದಕ್ಷಿಣಕನ್ನಡ
ತಂದೆ ತಾಯಿ ಹೆಸರು : ಕೃಷ್ಣಮೂರ್ತಿ, ಜಾನಕಮ್ಮ
ಪ್ರಮುಖ ಚಿತ್ರಗಳು : ಬಯಲುದಾರಿ, ಬೆಳ್ಳಿ ಮೋಡ, ಶರಪಂಜರ

ಲೀಲಾವತಿ

ಮೂಲ ಹೆಸರು : ಲೀಲಾ ಕೃಷ್ಣ
ಜನಿಸಿದ ಸ್ಥಳ : ಮಂಗಳೂರು
ಪ್ರಮುಖ ಚಿತ್ರಗಳು : ಗಾಳಿ ಗೋಪುರ, ರತ್ನಮಂಜರಿ, ಕುಲವಧು

ಡಾ. ರಾಜ್ ಕುಮಾರ್

ಮೂಲ ಹೆಸರು : ಮುತ್ತು ರಾಜ್
ಜನಿಸಿದ ಸ್ಥಳ : ಗಾಜನೂರು
ತಂದೆ ತಾಯಿ ಹೆಸರು : ಸಿಂಗನಲ್ಲೂರು ಪುಟ್ಟಸ್ವಾಮಿ, ಲಕ್ಷಮ್ಮ
ಪ್ರಮುಖ ಚಿತ್ರಗಳು : ಬಂಗಾರದ ಮನುಷ್ಯ, ಕಸ್ತೂರಿ ನಿವಾಸ, ಎರಡು ಕನಸು

ಜಯಂತಿ

ಮೂಲ ಹೆಸರು : ಕಮಲಾ ಕುಮಾರಿ
ಜನಿಸಿದ ಸ್ಥಳ : ಬಳ್ಳಾರಿ
ತಂದೆ ತಾಯಿ ಹೆಸರು : ಬಾಲಸುಬ್ರಮಣ್ಯಂ, ಶಾಂತಕುಮಾರಿ
ಪ್ರಮುಖ ಚಿತ್ರಗಳು : ಚಂದವಳ್ಳಿಯ ತೋಟ, ಇಮ್ಮಡಿ ಪುಲಿಕೇಶಿ, ಬೆಟ್ಟದಹುಲಿ

ಡಾ. ವಿಷ್ಣುವರ್ಧನ್

ಮೂಲ ಹೆಸರು : ಸಂಪತ್ ಕುಮಾರ್
ಜನಿಸಿದ ಸ್ಥಳ : ಮೈಸೂರು
ತಂದೆ ತಾಯಿ ಹೆಸರು : ಎಚ್ ಎಲ್ ನಾರಾಯಣ ರಾವ್, ಕಾಮಾಕ್ಷಮ್ಮ
ಪ್ರಮುಖ ಚಿತ್ರಗಳು : ನಾಗರ ಹಾವು, ಆಪ್ತ ಮಿತ್ರ, ಬಂಧನ

ಡಾ. ಅಂಬರೀಷ್

ಮೂಲ ಹೆಸರು : ಮಳವಳ್ಳಿ ಹುಚ್ಚೇಗೌಡ ಅಮರನಾಥ್
ಜನಿಸಿದ ಸ್ಥಳ : ಮದ್ದೂರು
ಪ್ರಮುಖ ಚಿತ್ರಗಳು : ಚಕ್ರವ್ಯೂಹ, ಅಂತ, ಒಂಟಿ ಸಲಗ

ತಾರಾ

ಮೂಲ ಹೆಸರು : ಅನುರಾಧಾ
ಪ್ರಮುಖ ಚಿತ್ರಗಳು : ಡಾ. ಕೃಷ್ಣ, ಸಿಬಿಐ ಶಂಕರ್, ಇಬ್ಬರು ಹೆಂಡಿರ ಮುದ್ದಿನ ಪೋಲಿಸ್

ಶಿವರಾಜ್‌ ಕುಮಾರ್

ಮೂಲ ಹೆಸರು : ನಾಗರಾಜ ಪುಟ್ಟಸ್ವಾಮಿ
ಜನಿಸಿದ ಸ್ಥಳ : ಚೆನ್ನೈ
ತಂದೆ ತಾಯಿ ಹೆಸರು : ಡಾ. ರಾಜಕುಮಾರ್, ಪಾರ್ವತಮ್ಮ
ಪ್ರಮುಖ ಚಿತ್ರಗಳು : ಜೋಗಿ, ಶಿವ, ಲಕ್ಷ್ಮಿ

ಶೃತಿ

ಮೂಲ ಹೆಸರು : ಪ್ರಿಯದರ್ಶಿನಿ (ಮೊದಲನೇ ಚಿತ್ರದ ಹೆಸರು) ಗಿರಿಜಾ
ಜನಿಸಿದ ಸ್ಥಳ : ಹಾಸನ
ಪ್ರಮುಖ ಚಿತ್ರಗಳು : ಶೃತಿ, ಕಲ್ಪನಾ, ಬೊಂಬೆಗಳ ಲವ್

English summary
Sandalwood actors and actresses adopted attractive screen names. Click the slide to know more about it. 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada